ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಶೇ. 30ರಷ್ಟು ಜನರು ಮಾತ್ರ ರಾಜ್ಯದ ಆರ್ಥಿಕತೆಗೆ ಕೊಡುಗೆಯನ್ನು ನೀಡುತ್ತಿದ್ದು, ಶೇ.70ರಷ್ಟು ಜನರು ತಮ್ಮ ಜೀವನಕ್ಕಷ್ಟೆ ಆದಾಯ ಗಳಿಸುತ್ತಿದ್ದಾರೆ. ಅಂತವರ ಆದಾಯ ಹೆಚ್ಚಿಸುವ ದಿಸೆಯಲ್ಲಿ ವಿಶೇಷ ಯೋಜನೆ ಜಾರಿಗೊಳಿಸಲು ಉದ್ದೇಶಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದ್ದಾರೆ.
ವಿಧಾನ ಪರಿಷತ್ತಿನಲ್ಲಿ ಶುಕ್ರವಾರ ಬಜೆಟ್ ಮೇಲಿನ ಚರ್ಚೆಗೆ ಅವರು ಉತ್ತರಿಸುತ್ತಿದ್ದರು. ವಿಶೇಷವಾಗಿ, ಮಹಿಳೆಯರ ಕೆಲಸಕ್ಕೆ ಬೆಲೆ ಸಿಗುತ್ತಿಲ್ಲ. ಹಾಗಾಗಿ 4 ಲಕ್ಷ ಮಹಿಳೆಯರಿಗೆ ಅನುಕೂಲವಾಗುವ ಯೋಜನೆ ರೂಪಿಸಲಾಗುವುದು. 30 ಸಾವಿರ ಸ್ವಸಹಾಯ ಸಂಘಗಳನ್ನು ಗುರುತಿಸಿ ಸಾಲ ಸೌಲಭ್ಯ ನೀಡಲು 500 ಕೋಟಿ ರೂ. ಮೀಸಲಿಡಲಾಗುವುದು. ಅವರಿಗೆ ಬ್ಯಾಂಕ್ ಗಳಿಂದ ಕೂಡ ಸರಿಯಾಗಿ ಸಾಲ ತಲುಪುತ್ತಿಲ್ಲ. ಅದಕ್ಕಾಗಿ ಆ್ಯಂಕರ್ ಬ್ಯಾಂಕ್ ಸಿಸ್ಟಂ ಜಾರಿಗೊಳಿಸಲಾಗುವುದು. ಮಹಿಳೆಯರಿಗೆ ಸ್ಟಾರ್ಟಪ್ ಗೆ 10 ಲಕ್ಷ ರೂ. ನೆರವು ನೀಡಲಾಗುವುದು ಎಂದರು.
ದುಡಿಯುವ ಮಹಿಳೆಯರ ಮಕ್ಕಳ ಆರೋಗ್ಯಕ್ಕೆ ಸಹ ವಿಶೇಷ ಕಾರ್ಯಕ್ರಮ ಹಾಕಿಕೊಳ್ಳಾಗುವುದು. ಲೈಂಗಿಕ ಅಲ್ಪಸಂಖ್ಯೆತರಿಗೆ ಸಹ ವಿಶೇಷ ಯೋಜನೆ ಜಾರಿಗೊಳಿಸಲಾಗುವುದು. ಅವರಿಗೆ ಸರಕಾರಿ ನೌಕರಿಯಲ್ಲಿ ಮೀಸಲಾತಿ ನೀಡುವ ಬಗ್ಗೆಯೂ ಚಿಂತನೆ ನಡೆದಿದೆ. 60 ವರ್ಷದ ಮೇಲ್ಪಟ್ಟವರಿಗೆ ಉಚಿತ ಕಣ್ಣಿನ ಚಿಕಿತ್ಸೆ, ಕನ್ನಡಕ ಸೌಲಭ್ಯ ನೀಡಲಾಗುವುದು. ಹುಟ್ಟು ಕಿವುಡರಾಗಿರುವ 500 ಜನರಿಗೆ ತಲಾ 30 ಲಕ್ಷ ರೂ. ಮೌಲ್ಯದ ಯಂತ್ರಗಳನ್ನು ಒದಗಿಸಲಾಗುವುದು ಎಂದೂ ಅವರು ಪ್ರಕಟಿಸಿದರು.
ರಷ್ಯಾ ದಾಳಿಗೆ ಉಕ್ರೇನ್ ಖ್ಯಾತ ನಟಿ ಸಾವು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ