Latest

ಮಂಗಳೂರಿನಲ್ಲಿ ವಿವಿಧ ಕಾಮಗಾರಿ ಉದ್ಘಾಟಿಸಿದ ಸಿಎಂ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಮಂಗಳೂರು :-   ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯ ಮಂಗಳೂರು ನಗರಕ್ಕೆ  24×7 ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆಯನ್ನು ಎಡಿಬಿ ನೆರವಿನ ಅಡಿಯಲ್ಲಿ  ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಅನುಷ್ಠಾನಗೊಳಿಸಲಾಗುತ್ತಿರುವ ಕ್ವಿಮಿಫ್ ಜಲಸಿರಿ ಕಾಮಗಾರಿಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ವರ್ಚುವಲ್ ಮೂಲಕ ಚಾಲನೆ ನೀಡಿದರು.
ಮಂಗಳೂರು ನಗರಕ್ಕೆ 24×7 ನಿರಂತರ ನೀರು ಸರಬರಾಜು ಯೋಜನೆಯ ವಿವರ:
ಎಡಿಬಿ ನೆರವಿನ ಕ್ರಿಮಿಪ್ “ಜಲಸಿರಿ” ಕರ್ನಾಟಕ ಸರ್ಕಾರದ ಕೆ.ಯು.ಐ.ಡಿ.ಎಫ್.ಸಿ ವತಿಯಿಂದ ಅನುಷ್ಠಾನ ಗೊಳಿಸಲಾಗುತ್ತಿರುವ 24×7 ಶುದ್ಧ ಕುಡಿಯುವ ನೀರಿನ ಯೋಜನೆಯ ಕಾಮಗಾರಿಗಳು ತ್ವರಿತಗತಿಯಲ್ಲಿ ಆರಂಭಗೊಳ್ಳುತ್ತಿದ್ದು, ಇದರಿಂದ ನಗರದ ಎಲ್ಲಾ ಜನತೆಯು ನಿರಂತರವಾಗಿ ಶುದ್ಧ ಕುಡಿಯುವ ನೀರನ್ನು ಪಡೆಯಬಹುದಾಗಿದೆ.
24×7 ಕುಡಿಯುವ ನೀರು ಸರಬರಾಜು ಯೋಜನೆಯಲ್ಲಿ ಈ ಕೆಳಗಿನ ಕಾಮಗಾರಿಗಳನ್ನು ಕೈಗೊಳ್ಳಲು ಉದ್ದೇಶಿಸಲಾಗಿದೆ: .
ಬಂಟ್ವಾಳ ತಾಲೂಕಿನ ತುಂಬೆಯಲ್ಲಿ 81.7 MLD ಸಾಮಥ್ರ್ಯದ ನೀರು ಶುದ್ದೀಕರಣ ಘಟಕ (WTP) ಯ ಉನ್ನತೀಕರಣ, ಫಿಲ್ಟರ್ Back Washed Water Reuse Plant ನಿರ್ಮಾಣ.
ನಗರದ 8 ಸ್ಥಳಗಳಲ್ಲಿ Intermediate Pumping Station ನಿರ್ಮಾಣ.
ಪ್ರಸ್ತುತವಿರುವ 23 ಮೇಲ್ಪಟ್ಟವ ಜಲಸಂಗ್ರಹಗಾರ (OHT) ಗಳೊಂದಿಗೆ ಹೆಚ್ಚುವರಿಯಾಗಿ ಹೊಸ 20 ಮೇಲ್ಮಟ್ಟದ ಜಲ ಸಂಗ್ರಹಗಾರ (OHT) ನಿರ್ಮಾಣ.
ಪ್ರಸ್ತುತವಿರುವ 5 ನೆಲಮಟ್ಟದ ಜಲಸಂಗ್ರಹಗಾರ (GLSI) ಗಳ ಜೊತೆಯಲ್ಲಿ ಹೆಚ್ಚುವರಿಯಾಗಿ ಹೊಸ 2 ನೆಲಮಟ್ಟದ ಜಲಸಂಗ್ರಹಗಾರಗಳ (GLSR) ನಿರ್ಮಾಣ.
ನೆಲಮಟ್ಟದ ಜಲಸಂಗ್ರಹಗಾರರಿಂದ (GLSR) ಎತ್ತರದ ಜಲಸಂಗ್ರಹಗಾರ (OHT) ಗಳಿಗೆ ನೀರು ಸರಬರಾಜು ಕಲ್ಪಿಸಲು 55 ಕಿ.ಮೀ ಗಳ ಪಂಪಿಗ್ಮೇನ್ ಕೊಳವೆ ಅಳವಡಿಸುವ ಕಾಮಗಾರಿ.
ನಗರದ ಪ್ರಸ್ತುತ. 750 ಕಿ.ಮೀ ವಿತರಣಾ ಜಾಲದೊಂದಿಗೆ ನಗರವ್ಯಾಪ್ತಿಯ ಪ್ರತಿ ಸ್ಥಾವರಕ್ಕೂ 7ಮೀ  ಒತ್ತಡದ ನೀರು ಪೂರೈಕೆ ಬಗ್ಗೆ ಹೆಚ್ಚುವರಿಯಾಗಿ 1500 ಕಿ.ಮೀ ಕೊಳವೆ ವಿತರಣಾ ಜಾಲವನ್ನು ಸುಸಜ್ಜಿತಗೊಳಿಸಲು ಉದ್ದೇಶಿಸಲಾಗಿದೆ.
ಮಹಾನಗರ ಪಾಲಿಕೆ ವ್ಯಾಪ್ತಿಯ ಸುಮಾರು 96,300 ನೀರಿನ ಗಾಹಕರ ಮಾಪಕಗಳನ್ನು ಬದಲಾಯಿಸಿ ಉತ್ತಮ ತಾಂತ್ರಿಕತೆಯ ಹೊಸ ಮಾಲಿಕೆಗಳನ್ನು ಅಳವಡಿಸುವುದು.
ನೀರು ನಿರ್ವಹಣೆ ದೃಷ್ಟಿಯಿಂದ ನಗರ ವ್ಯಾಪ್ತಿಯನ್ನು ಒಟ್ಟು 54 ವಲಯಗಳನ್ನಾಗಿ ವಿಂಗಡಿಸಲಾಗಿದ್ದು ನೀರು ಸರಬರಾಜಿನ ಬಗ್ಗೆ ಸಾರ್ವಜನಿಕರಿಂದ ಬರುವ ದೂರುಗಳಿಗೆ ಸ್ಪಂದಿಸಲು ಗ್ರಾಹಕರ ಸೇವಾ ಕೇಂದ್ರಗಳನ್ನು ತೆರೆಯಲು ಉದ್ದೇಶಿಸಲಾಗಿದೆ.
 ವೆನ್ಲಾಕ್ ಮೆಡಿಸನ್ ವಿಭಾಗದಲ್ಲಿ ನೂತನ ಐಸಿಯು ಘಟಕ ಉದ್ಘಾಟನೆ 
 ನಗರದ ಹೃದಯ ಭಾಗದಲ್ಲಿರುವ ವೆನ್ಲಾಕ್ ಜಿಲ್ಲಾಸ್ಪತ್ರೆಯ ಮೆಡಿಸನ್ ವಿಭಾಗದಲ್ಲಿ ವೆಂಟಿಲೇಟರ್, ಮಾನಿಟರ್ ಹಾಗೂ ಇತರೆ ಅಗತ್ಯ ವೈದ್ಯಕೀಯ ಉಪಕರಣಗಳಿಂದ ಸಜ್ಜಾಗಿರುವ 32 ಹಾಸಿಗೆಗಳ ನೂತನ ಐಸಿಯು ಘಟಕವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಆ.12ರ ಗುರುವಾರ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಸಂಸದರಾದ ನಳೀನ್ ಕುಮಾರ್ ಕಟೀಲ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್, ವೈದ್ಯಕೀಯ ಶಿಕ್ಷಣ ಹಾಗೂ ಆರೋಗ್ಯ ಸಚಿವರಾದ ಡಾ. ಸುಧಾಕರ್, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ.ವೈ, ಹರೀಶ್ ಪೂಂಜಾ, ಸಂಜೀವ ಮಠಂದೂರು, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಪೆÇಲೀಸ್ ಆಯುಕ್ತ ಶಶಿಕುಮಾರ್, ಮಹಾನಗರ ಪಾಲಿಕೆಯ ಮೇಯರ್ ಪ್ರೇಮಾನಂದ ಶೆಟ್ಟಿ, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಕಿಶೋರ್ ಕುಮಾರ್, ಜಿಲ್ಲಾ ಶಸ್ತ್ರಚಿಕಿತ್ಸಕ ಮದನ್ ಮೋಹನ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.
*ಡಾ. ಬಿ.ಆರ್. ಅಂಬೇಡ್ಕರ್ ಭವನ ಲೋಕಾರ್ಪಣೆ*
 ನಗರದ ದೇರೆಬೈಲ್ನಲ್ಲಿ ನೂತನವಾಗಿ ನಿರ್ಮಿಸಲಾಗಿರುವ ಡಾ. ಬಿ.ಆರ್. ಅಂಬೇಡ್ಕರ್ ಭವನವನ್ನು ರಾಜ್ಯದ ಮುಖ್ಯಮಂತ್ರಿಗಳಾದ ಬಸವರಾಜ ಬೊಮ್ಮಾಯಿ ಅವರು ಆ.12 ರ ಗುರುವಾರ ಲೋಕಾರ್ಪಣೆ ಮಾಡಿದರು.
*ಅಂಬೇಡ್ಕರ್ ಭವನದ ಸಂಕ್ಷಿಪ್ತ ಮಾಹಿತಿ:*
ನಗರದ ಉರ್ವಸ್ಟೋರ್ನ ದೇರೆಬೈಲ್ ಗ್ರಾಮದಲ್ಲಿ ಡಾ. ಬಿ.ಆರ್.  ಅಂಬೇಡ್ಕರ್ ಭವನವು ಸರಿಸುಮಾರು 17 ಕೋಟಿ ರೂ.ಗಳ ವೆಚ್ಚದಲ್ಲಿ ನಿರ್ಮಾಣವಾಗಿದ್ದು, ಈ  ನಿವೇಶನದ ಭೂ ವಿಸ್ತೀರ್ಣ 1.61 ಎಕರೆ (ಸ.ನಂ-178/1)ಪಿ2&ಪಿ 4), ಈ ಕಟ್ಟಡದ ನೆಲಮಹಡಿ 918,00 ಚ.ಮೀ/9,881,00 ಚ.ಅಡಿ, ಮೊದಲ ಮಹಡಿ 1309.00 ಚ.ಮೀ/14,090 ಚ. ಅಡಿ, ಮೊದಲನೇ ಮಹಡಿ ನಡುವಿನ ಅಂತಸ್ತು  126.00 ಚ.ಮೀ/1,356.00ಚ.ಅಡಿ, ಎರಡನೇ ಮಹಡಿ 918,00 ಚ.ಮೀ/9,875,00 ಚ.ಅಡಿ ಹೊಂದಿದೆ. ಕಟ್ಟಡದ ಒಟ್ಟು ವಿಸ್ತೀರ್ಣ 3271.00ಚ.ಮೀ/35,202.00 ಚ. ಅಡಿ ಇದೆÉ.
ಕಾಮಗಾರಿ 24 ತಿಂಗಳ ಅವಧಿಯಲ್ಲಿ ಪೂರ್ಣಗೊಂಡಿದೆ, ಈ ಭವನವು ನೆಲ ಮಹಡಿ ಹಾಗೂ 2 ಅಂತಸ್ತುಗಳನ್ನು ಸೇರಿ ಒಟ್ಟು ಮೂರು ಮಹಡಿಗಳನ್ನು ಹೊಂದಿದ್ದು, ಕರ್ನಾಟಕ ಗೃಹ ಮಂಡಳಿಯ ಯೋಜನೆಯಡಿ ನಿರ್ಮಾಣವಾಗಿದೆ.
*ಕಟ್ಟಡದ ಸ್ಥಳಾವಕಾಶದ ವಿವರ:*
ನೆಲ ಮಹಡಿಯಲ್ಲಿ  ಗ್ರಂಥಾಲಯ, ಸಮಾಜ ಕಲ್ಯಾಣ ಇಲಾಖೆ ಕಚೇರಿ, ಡೈನಿಂಗ್, ಇಲೆಕ್ಟಿಕಲ್ ರೂಮ್ ವಿಶೇಷಚೇತನರಿಗೆ ರ್ಯಾಂಪ್ ವ್ಯವಸ್ಥೆ ಮತ್ತು ಪುರುಷರ ಹಾಗೂ ಮಹಿಳೆಯರ ಶೌಚಾಲಯದ ವ್ಯವಸ್ಥೆಯನ್ನು ಒಳಗೊಂಡಿದೆ.
ಮೊದಲ ಮಹಡಿಯಲ್ಲಿ 560 ಜನ ಸಾಮಥ್ರ್ಯದ ಮುಖ್ಯ ಸಭಾಂಗಣ, 20 ಆಡಿ ಘಿ 53 ಅಡಿ ವೇದಿಕೆ, ಗ್ರೀನ್ ರೂಮ್ ಮತ್ತು ಶೌಚಾಲಯ ಹಾಗೂ ಪುರುಷರ ಮತ್ತು ಮಹಿಳೆಯರ ಶೌಚಾಲಯ ಹೊಂದಿದೆ.
ಮೊದಲನೇ ಮಹಡಿ-ನಡುವಿನ ಅಂತಸ್ತುವಿನಲ್ಲಿ ಲಾಬಿ ಮತ್ತು ಅತಿಥಿಗಳ ಕೊಠಡಿ ಇರುತ್ತದೆ.
ಎರಡನೇ ಮಹಡಿಯಲ್ಲಿ 150 ಜನ ಸಾಮಥ್ರ್ಯ ಬಾಲ್ಕನಿ ಸಭಾಂಗಣ, 100 ಜನ ಸಾಮಥ್ರ್ಯವಿರುವÀ ವಿಚಾರಗೋಷ್ಠಿ/ ಸೆಮಿನಾರ್ ಹಾಲ್ ಹಾಗೂ ಸಮಾಜ ಕಲ್ಯಾಣ ಇಲಾಖೆ ಕಚೇರಿ ಹೊಂದಿದೆ.
*ಸೌಲಭ್ಯಗಳು:*
ಆವರಣ ಗೋಡೆ ಹೊಂದಿದ್ದು ಇದರಲ್ಲಿ  70 ಕಾರ್ ನಿಲ್ಲಿಸಲು ವಿಶಾಲವಾದ  ಕಾರ್  ಪಾಕಿರ್ಂಗ್ ವ್ಯವಸ್ಥೆ ಹಾಗೂ 35  ದ್ವಿಚಕ್ರ ವಾಹನಗಳ ನಿಲ್ಲಿಸಲು ಪಾರ್ಕಿಂಗ್ ವ್ಯವಸ್ಥೆ ಇದೆ. ಇವೆಲ್ಲದರ ಜೊತೆಗೆ ಅಗ್ನಿಶಾಮಕ ಉಪಕರಣಗಳು ಇವೆ.
ಸಂಸದರಾದ ನಳೀನ್ ಕುಮಾರ್ ಕಟೀಲ್, ಮೀನುಗಾರಿಕೆ, ಬಂದರು ಹಾಗೂ ಒಳನಾಡು ಜಲಸಾರಿಗೆ ಸಚಿವರಾದ ಎಸ್. ಅಂಗಾರ, ಸಮಾಜ ಕಲ್ಯಾಣ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಕೋಟಾ ಶ್ರೀನಿವಾಸ ಪೂಜಾರಿ, ಇಂಧನ ಹಾಗೂ ಕನ್ನಡ ಮತ್ತು ಸಂಸ್ಕøತಿ ಇಲಾಖೆಯ ಸಚಿವರಾದ ಸುನೀಲ್ ಕುಮಾರ್, ವೈದ್ಯಕೀಯ ಶಿಕ್ಷಣ ಸಚಿವರಾದ ಸುಧಾಕರ್, ಶಾಸಕರಾದ ವೇದವ್ಯಾಸ ಕಾಮತ್, ರಾಜೇಶ್ ನಾಯ್ಕ್, ಉಮಾನಾಥ್ ಕೋಟ್ಯಾನ್, ಡಾ. ಭರತ್ ಶೆಟ್ಟಿ.ವೈ, ಹರೀಶ್ ಪೂಂಜಾ, ಸಂಜೀವ ಮಠಂದೂರು, ಮಹಾನಗರ ಪಾಲಿಕೆ ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ಡಾ. ರಾಜೇಂದ್ರ, ಪೆÇಲೀಸ್ ಆಯುಕ್ತ ಶಶಿಕುಮಾರ್, ಪಾಲಿಕೆ ಆಯುಕ್ತ ಅಕ್ಷಯ್ ಶ್ರೀಧರ್, ಜಿಲ್ಲಾ ಸಮಾಜ ಕಲ್ಯಾಣ ಇಲಾಖೆಯ ಉಪ ನಿರ್ದೇಶಕ ಡಾ. ಯೋಗೇಶ್ ಸೇರಿದಂತೆ ವಿವಿಧ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಹಾಜರಿದ್ದರು.

Related Articles

Back to top button