Kannada NewsKarnataka NewsPolitics

*ಸಿಎಂ, ಡಿಸಿಎಂ ದೇಹಲಿ ಭೇಟಿಗೆ ವಿಶೇಷ ಅರ್ಥ ಕಲ್ಪಿಸುವುದು ಬೇಡ: ಡಿ.ಕೆ ಸುರೇಶ್*

ಪ್ರಗತಿವಾಹಿನಿ ಸುದ್ದಿ: ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರು ಸರ್ಕಾರಿ ಮತ್ತು ಪಕ್ಷದ ಕೆಲಸಗಳ ನಿಮಿತ್ತ ದೆಹಲಿಗೆ ಹೋಗಲಿದ್ದಾರೆ, ಅದಕ್ಕೆ ವಿಶೇಷ ಅರ್ಥ ಕಲ್ಪಿಸುವ ಅಗತ್ಯವಿಲ್ಲ ಎಂದು ಮಾಜಿ ಸಂಸದ ಡಿ.ಕೆ ಸುರೇಶ್ ಅವರು ಹೇಳಿದರು. 

ಬೆಂಗಳೂರು ನಗರದಲ್ಲಿಂದು ಸುದ್ದಿಗೋಷ್ಠಿ ನಡೆಸಿ ಮಾತಾಡಿದ ಮಾಜಿ ಸಂಸದ ಡಿ.ಕೆ ಸುರೇಶ್ ಅವರು, ಸಂಸತ್ ಅಧಿವೇಶನ ನಡಯುತ್ತಿದೆ, ಸಿಎಂಗೆ ಮತ್ತು ಡಿಸಿಎಂಗೆ ಸಂಸದರೊಂದಿಗೆ ಮತ್ತು ಕೇಂದ್ರದ ಸಚಿವರೊಂದಿಗೆ ಚರ್ಚೆ ಮಾಡೋದಿರುತ್ತದೆ, ಕೇಂದ್ರದಿಂದ ರಾಜ್ಯಕ್ಕೆ ಸಿಗಬೇಕಿರುವ ಅನುದಾನಗಳ ಬಗ್ಗೆ ಮಾತಾಡುವುದಿರುತ್ತದೆ, ಪಕ್ಷ ಸಂಘಟನೆ ವಿಷಯದಲ್ಲಿ ವರಿಷ್ಠರ ಜೊತೆ ಮಾತುಕತೆ ನಡೆಸುವ ಕೆಲಸವಿರುತ್ತದೆ ಎಂದು ಹೇಳಿದ ಸುರೇಶ್, ಶಿವಕುಮಾರ್ ಅವರು ದೆಹಲಿಗೆ ಹೋಗುತ್ತಿರುವುದು ಹೊಸದೇನಲ್ಲ ಎಂದರು

ವಿಪಕ್ಷಗಳನ್ನು ರಾಜಕೀಯವಾಗಿ ಬಗ್ಗು ಬಡಿಯೋಕೆ ಇಡಿಯನ್ನು ಬಳಸಲಾಗುತ್ತಿದೆ. ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರ ದ್ವೇಷ ರಾಜಕರಣ ಬಿಟ್ಟು ಅಭಿವೃದ್ಧಿ ರಾಜಕಾರಣಕ್ಕೆ ಹೆಚ್ಚು ಚಿಂತನೆಯನ್ನು ಮಾಡಬೇಕು ಎಂದು ಹೇಳಿದರು.

ದೇಶದ ವಿವಿಧೆಡೆ ಇಡಿಯನ್ನು ರಾಜಕೀಯ ನಾಯಕರನ್ನು ಸದೆಬಡಿಯೋಕೆ ಉಪಯೋಗ ಮಾಡಿಕೊಳ್ಳುತ್ತಿದೆ. ಈ ಪ್ರಕರಣದಲ್ಲಿ ಸುಪ್ರೀಂ ತೀರ್ಪು ನೀಡಿದ್ದು, ನ್ಯಾಯದ ಮೇಲಿನ ನಂಬಿಕೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದು ಹೇಳಿದರು.

Home add -Advt

ಇನ್ನು, ಧರ್ಮಸ್ಥಳದಲ್ಲಿ ಅಸಹಜ ಸಾವಿನ ತನಿಖೆ ಕುರಿತು ಸರ್ಕಾರ SIT ರಚನೆ ಮಾಡಿರುವ ಕುರಿತು ಡಿಕೆಸುರೇಶ್ ಪ್ರತಿಕ್ರಿಯೆ ನೀಡಿದರು. ಧರ್ಮಸ್ಥಳ ಶ್ರೀ ಕ್ಷೇತ್ರವನ್ನು ನಂಬಿ ಕರ್ನಾಟಕದ ಅನೇಕ ಜನ ಪೂಜೆ ಪುನಸ್ಕಾರ ಮಾಡ್ತಿದ್ದಾರೆ.SIT ರಚನೆಯಾಗಿದೆ. ಇದ್ರಿಂದ ಜನರ ಅನುಮಾನ ಬಗೆಹರಿಯುತ್ತೆ. ಹಿಂದೂಗಳ ಅನ್ಯಾಯ ವನ್ನು ಸರಿ ಮಾಡಬೇಕು. ಕ್ಷೇತ್ರದ ಪಾವಿತ್ರ್ಯತೆ ಉಳಿಸಿಕೊಳ್ಳಬೇಕು. ಇದೇ ವಿಚಾರದಲ್ಲಿ ರಾಜಕೀಯ ಕೆಸರೆರೆಚಾಟ ನಿಲ್ಲಬೇಕು. ಯಾರನ್ನು ರಕ್ಷಣೆ ಮಾಡುವ ಪ್ರಶ್ನೆಯಿಲ್ಲ.ನಾನು ಕೂಡ ಪ್ರತಿವರ್ಷ ಮಂಜುನಾಥನ ದರ್ಶನ ಪಡೆಯುತ್ತೇನೆ. SIT ತನಿಖೆಯಲ್ಲಿ ಪ್ರಕರಣದ ಸತ್ಯಾಸತ್ಯತೆಯನ್ನು ಬಯಲಾಗಬೇಕು. ಯಾರಿಗೂ ಅಪಮಾನ ಮಾಡುವ ಉದ್ದೇಶದಿಂದ SIT ರಚನೆ ಯಾಗಿಲ್ಲ ಎಂದು ಹೇಳಿದರು.

ಇನ್ನು ಗ್ರೇಟರ್ ಬೆಂಗಳೂರು ಬಗ್ಗೆ ಪರವಿರೋಧ ಇದೆ. ಎಲ್ಲರಿಗೂ ಮೂಲ ಸೌಕರ್ಯ ಒದಗಿಸುವ ಕುರಿತು ಸರ್ಕಾರ ಮಹತ್ವದ ಹೆಜ್ಜೆ ಇಟ್ಟಿದೆ. ಬೆಂಗಳೂರಿನ ಜನಸಂಖ್ಯೆ 1.5 ಕೋಟಿ ಇದೆ. ಆಡಳಿತ ನಡೆಸಬೇಕಾದ್ರೆ ಒಬ್ಬರಿಂದ ಸಾಧ್ಯವಿಲ್ಲ. ಉತ್ತಮ ಆಡಳಿತ ನಡೆಸುವ ಉದ್ದೇಶದಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರಚನೆ ಯಾಗಿದೆ. ಸಾರ್ವಜನಿಕರಿಗೆ ಉತ್ತಮ ಆಡಳಿತ ನೀಡಬೇಕು ಎಂಬುದಷ್ಟೇ ಸರ್ಕಾರದ ಗುರಿ ಎಂದು ಹೇಳಿದರು.

Related Articles

Back to top button