Kannada NewsKarnataka NewsLatest

ಬೆಳಗಾವಿಯ ವಿಜಯಕುಮಾರ ಸಿನ್ನೂರ್, ಶಿರಸಿಯ ರಾಮಚಂದ್ರ ನಾಯಕ ಸೇರಿ 135 ಪೊಲೀಸರಿಗೆ CM ಪದಕ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಹಿರೇಬಾಗೇವಾಡಿ ಠಾಣೆ ಇನಸ್ಪೆಕ್ಟರ್ ವಿಜಕುಮಾರ ಸಿನ್ನೂರ್ ಸೇರಿದಂತೆ ಬೆಳಗಾವಿಯ ಐವರಿಗೆ, ಶಿರಸಿ ಸಿ.ಪಿ.ಐ. ರಾಮಚಂದ್ರ ನಾಯಕ ಅವರಿಗೆ ಮುಖ್ಯಮಂತ್ರಿಗಳ ಚಿನ್ನದ ಪದಕ ದೊರಕಿದೆ.

ಬೆಳಗಾವಿ ಎಸಿಬಿ ಸಿಪಿಐ ಅಡಿವೆಪ್ಪ ಗುಡಿಗೊಪ್ಪ, ಕೆಎಸ್ಆರ್ ಪಿಯ ಯಲ್ಲಪ್ಪ ಭಜಂತ್ರಿ, ಡಿಎಆರ್ ನ ಮಹಾದೇವಪ್ಪ ಕೋಟಿವಾಲೆ, ಸಂಕೇಶ್ವರದ ಗಣಪತಿ ಕೊಂಗನೊಳ್ಳಿ ಸೇರಿದಂತೆ ರಾಜ್ಯದ 135 ಪೊಲೀಸರಿಗೆ ಮುಖ್ಯಮಂತ್ರಿಗಳ ಪದಕ ಪ್ರಕಟಿಸಲಾಗಿದೆ.

ಏಪ್ರಿಲ್ 2 ರಂದು ಪೊಲೀಸ್ ಧ್ವಜ ದಿನಾಚರಣೆಯ ನಿಮಿತ್ತ ಬೆಂಗಳೂರಿನಲ್ಲಿ   ಮುಖ್ಯಮಂತ್ರಿಗಳು ಪ್ರಶಸ್ತಿ ಪ್ರದಾನ ಮಾಡಲಿದ್ದಾರೆ.

ರಾಮಚಂದ್ರ ನಾಯಕ ಪರಿಚಯ –
  ಮೂಲತಃ ಅಂಕೋಲಾದ ಅಗ್ರಗೋಣದವರಾದ ರಾಮಚಂದ್ರ ನಾಯಕ ಇವರು 2005 ರಲ್ಲಿ ಪಿಎಸ್ಐ ಆಗಿ ಆಯ್ಕೆಯಾಗಿ ಮೈಸೂರಿನಲ್ಲಿ 1 ವರ್ಷ ತರಬೇತಿ ಪಡೆದು
ನಂತರ ಚಿಕ್ಕಮಗಳೂರು ಜಿಲ್ಲೆಯ ಕಡೂರು, ಕಳಸಗಳಲ್ಲಿ PSI ಆಗಿ ಸೇವೆ ಸಲ್ಲಿಸಿ 2016 ರಲ್ಲಿ ಸರ್ಕಲ್ ಇನ್ಸ್ಪೆಕ್ಟರ್ ಆಗಿ ಪದೋನ್ನತಿ ಹೊಂದಿ ಕುಮಟಾದ ಕರಾವಳಿ ಕಾವಲು ಪಡೆಯಲ್ಲಿ, ಚಿಕ್ಕಮಗಳೂರಿನ  ತರೀಕೆರೆಯಲ್ಲಿ ಹಾಗೂ ಉಡುಪಿಯಲ್ಲಿ ಲೋಕಾಯುಕ್ತ ಪೊಲೀಸ್ ಇನ್ಸ್ಪೆಕ್ಟರ್ ಆಗಿ ಕೆಲಸ ನಿರ್ವಹಿಸಿ, ಕಳೆದ ಹತ್ತು ತಿಂಗಳುಗಳಿಂದ ಶಿರಸಿಯಲ್ಲಿ ವೃತ್ತ ನಿರೀಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button