Latest

28ರ ಯುವಕನೊಂದಿಗೆ ಬದುಕಲು ಮುಂದಾದ 67ರ ವೃದ್ಧೆ

  ಗ್ವಾಲಿಯರ್ : ಪ್ರೀತಿ ಕುರುಡು ಎಂಬ ನಾಣ್ಣುಡಿಯಿದೆ. ಆದರೆ ಇಷ್ಟೊಂದು ಕುರುಡೇ ಎಂಬ ಪ್ರಶ್ನೆ ಈಗ ಜನರನ್ನು ಕಾಡುವಂತಾಗಿದೆ. ಮಧ್ಯಪ್ರದೇಶದ ಗ್ವಾಲಿಯರ್‌ನ ಮೊರೆನಾ ಎಂಬ ಊರಿನಲ್ಲಿ ನಡೆದಿರುವ ಘಟನೆಯಿಂದ ಇಂಥದ್ದೊಂದು ಪ್ರಶ್ನೆ ಎದ್ದಿದೆ.

ಈ ಊರಿನ ೨೮ ವರ್ಷದ ಬೋಲು ಎಂಬ ಯುವಕ ಮತ್ತು ೬೭ ವರ್ಷದ ರಾಮ್‌ಕಲಿ ನಡುವೆ ಪ್ರೇಮಾಂಕುರವಾಗಿದೆ. ಅಷ್ಟೇ ಅಲ್ಲ ಇಬ್ಬರೂ ಪರಸ್ಪರ ಜೊತೆಗೆ ಬದುಕಲು ನಿರ್ಧರಿಸಿದ್ದಾರೆ.

ಮದುವೆಯಾಗಲು ಬಯಸದ ಈ ಜೋಡಿ ಪರಸ್ಪರ ಜೊತೆಯಾಗಿರುವುದಕ್ಕೆ ಮಾತ್ರ ಅನುಮತಿ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದಾರೆ. ತಾವಿಬ್ಬರೂ ಜೊತೆಯಾಗಿರಲು ನಿರ್ಧರಿಸಿರುವುದನ್ನು ಅಪಾಡವಿಟ್ ಸಹ ಮಾಡಿಸಿಕೊಂಡಿದ್ದಾರೆ.

ಈ ಕುರಿತು ಮಾಧ್ಯಮಗಳಿಗೆ ಮಾತನಾಡಿರುವ ನೋಟರಿ ವಕೀಲ ಪ್ರದೀಪ್ ಅವಸ್ಥಿ, ಈ ರೀತಿಯ ನೋಟರಿ ಅಪಾಡವಿಟ್‌ಗೆ ಕಾನೂನಿನ ಮಾನ್ಯತೆ ಇಲ್ಲ, ಆದಾಗ್ಯೂ ಬೇರೆಯವರಿಂದ ತೊಂದರೆ ಆಗಬಾರದು ಎಂಬ ಭದ್ರತೆಗಾಗಿ ನೋಟರಿ ಮಾಡಿಸಿಕೊಂಡಿದ್ದಾರೆ. ಅಪಿಡವಿಟ್‌ನಲ್ಲಿ ನಾವು ಮದುವೆ ಆಗುವುದಿಲ್ಲ, ಆದರೆ ಪರಸ್ಪರ ಜೊತೆಗಿರುತ್ತೇವೆ ಎಂದು ಉಲ್ಲೇಖಿಸಲಾಗಿದೆ ಎಂದು ಹೇಳಿದ್ದಾರೆ.

ಇದೇ ರೀತಿ ಅಮೇರಿಕದಲ್ಲೂ ೨೦೧೫ರಲ್ಲೇ ಒಂದು ಪ್ರಕರಣ ನಡೆದಿದೆ. ಆಗ ೨೪ ವಯಸ್ಸಿನ ಗ್ಯಾರಿ ಎಂಬ ಯುವಕ ೭೭ ವರ್ಷದ ಅಲ್ಮೇಡಾ ಎಂಬ ವೃದ್ಧೆಯೊಂದಿಗೆ ಮದುವೆಯಾಗಿದ್ದಾನೆ. ಅಲ್ಮೇಡಾ ಗ್ಯಾರಿಗಿಂತ ಬರೋಬ್ಬರಿ ೫೩ ವರ್ಷ ದೊಡ್ಡವಳು. ನಾವು ಸುಖವಾಗಿ ಸಂಸಾರ ನಡೆಸುತ್ತಿದ್ದೇವೆ ಎಂದು ಗ್ಯಾರಿ ಅಲ್ಮೇಡಾ ದಂಪತಿ ಇತ್ತೀಚೆಗೆ ಹೇಳಿಕೆ ನೀಡಿದ್ದರು.

ಗೃಹಿಣಿಯರಿಗಾಗಿ “ಧರಿತ್ರಿ ಫ್ಯಾಶನ್ ಶೋ”

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button