Kannada NewsKarnataka NewsLatest

9ರಂದು ಬೆಳಗಾವಿಗೆ ಸಿಎಂ, ಕಾರ್ಮಿಕ ಕುಟುಂಬಕ್ಕೆ ಪರಿಹಾರ ವಿತರಣೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ -ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನ.9ರಂದು ಬೆಳಗಾವಿಗೆ ಆಗಮಿಸಲಿದ್ದಾರೆ. ಅಪಘಾತ ಮತ್ತಿತರ ಕಾರಣದಿಂದ ಮೃತರಾಗಿರುವ ಕಾರ್ಮಿಕರಿಗೆ ಅಂದು ಪರಹಾರದ ಚೆಕ್ ವಿತರಿಸಲಿದ್ದಾರೆ ಎಂದು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಶಂಕರಗೌಡ ಪಾಟೀಲ ತಿಳಿಸಿದ್ದಾರೆ.

ಕಾರ್ಮಿಕರು ಅಪಘಾತದಲ್ಲಿ ಮೃತರಾದರೆ ಅವರ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ವಿತರಿಸಲಾಗುತ್ತದೆ. ಸಹಜ ಸಾವು ಸಂಭವಿಸಿದರೆ ಅಂತಹ ಕುಟುಂಬದವರಿಗೆ ಅಂತ್ಯಸಂಸ್ಕಾರ ವೆಚ್ಚ ಎಂದು 54 ಸಾವಿರ ರೂ. ನೀಡಲಾಗುತ್ತದೆ.

ಬೆಳಗಾವಿ ಜಿಲ್ಲೆಯಲ್ಲಿ ಅಪಘಾತದಲ್ಲಿ ಮೃತರಾಗಿರುವ 4 ಮತ್ತು ಸಹಜ ಸಾವು ಸಂಭವಿಸಿದ 2 ಕಾರ್ಮಿಕರ ಕುಟುಂಬಗಳಿಗೆ ಪರಿಹಾರ ವಿತರಿಸಲಾಗುತ್ತದೆ.

ಕಲ್ಲೋಳಿಯ ಹಣಮಂತ ಬಸಪ್ಪ ಹಟ್ಟಿಗೌಡ್ರ, ನಂದಗಾಂವ್ ನ ಮೋಹನ ಮಾರುತಿ ರಾಜಮಾನೆ ಮತ್ತು ನಾಮದೇವ ತುಕಾರಾಮ ಗಾವಡೆ, ಹಂದಿಗನೂರಿನ ವಿಷ್ಣು ಯಲ್ಲಪ್ಪ ಸುತಾರ ಅಪಘಾತದಲ್ಲಿ ಮೃತರಾಗಿದ್ದಾರೆ. ಗೋಕಾಕದ ಹಣಮಂತ ಯಲ್ಲಪ್ಪ ಪೂಜೇರಿ ಮತ್ತು ಕಮತನೂರಿನ ಬಸಗೌಡ ಗೌಡಪ್ಪ ಪಾಟೀಲ ಸಹಜ ಸಾವನ್ನಪ್ಪಿದ್ದಾರೆ.

Home add -Advt

ಇನ್ನೂ ಕೆಲವು ಪ್ರಕರಣಗಳು ಪರಿಶೀಲನೆಯಲ್ಲಿದ್ದು, ಶನಿವಾರದೊಳಗೆ ಕ್ಲಿಯರ್ ಆದರೆ ಅಂತಹ ಕುಟುಂಬಗಳಿಗೂ ಸಿಎಂ ಶನಿವಾರ ಪರಿಹಾರ ವಿತರಿಸುವರು.

Related Articles

Back to top button