
ಪ್ರಗತಿವಾಹಿನಿ ಸುದ್ದಿ: ತಮಿಳುನಾಡಿನ ಸಿಎಂ ಆಗಿ ಪ್ರಮಾಣ ವಚನ ಸ್ವೀಕರಿಸಿದ ಕೆಲವೇ ದಿನಗಳಲ್ಲಿ, ವಿಜಯ್ ಅವರು 10 ಸಚಿವರಿಗೆ ಖಾತೆಗಳನ್ನು ಹಂಚಿಕೆ ಮಾಡಿದ್ದಾರೆ.
ತಮಿಳಗ ವೆಟ್ರಿ ಕಳಗಂ ಪಕ್ಷದ ಅಧಿನಾಯಕರಾಗಿರುವ ವಿಜಯ್ ಅವರು ಪ್ರಮುಖವಾದ ಗೃಹ ಖಾತೆಯನ್ನು ತಮ್ಮ ಬಳಿಯೇ ಉಳಿಸಿಕೊಂಡಿದ್ದಾರೆ.
ಸಿಎಂ ಜೋಸೆಫ್ ವಿಜಯ್: ಗೃಹ ಸಚಿವಾಲಯ, ಸಾರ್ವಜನಿಕ, ಸಾಮಾನ್ಯ ಆಡಳಿತ, ಪೊಲೀಸ್, ಮಹಿಳಾ ಮತ್ತು ಯುವ ಕಲ್ಯಾಣ ಇಲಾಖೆಗಳು.
ಕೆ.ಎ. ಸೆಂಕೋಟೈಯನ್: ಹಣಕಾಸು ಇಲಾಖೆಯನ್ನು ಹಂಚಿಕೆ ಮಾಡಲಾಗಿದೆ.
ಕೆ.ಜಿ. ಅರುಣ್‌ರಾಜ್: ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ.
ಎನ್. ಆನಂದ್: ಗ್ರಾಮೀಣಾಭಿವೃದ್ಧಿ ಮತ್ತು ಜಲಸಂಪನ್ಮೂಲ ಸಚಿವಾಲಯ.
ಈ ಕುರಿತು ಲೋಕ ಭವನದಿಂದ ಅಧಿಕೃತ ಪ್ರಕಟಣೆ ಹೊರಡಿಸಲಾಗಿದ್ದು, ಹೊಸ ಸಚಿವರ ಅಧಿಕೃತ ಕಾರ್ಯಭಾರ ಶೀಘ್ರದಲ್ಲೇ ಆರಂಭವಾಗಲಿದೆ.


