Belagavi NewsBelgaum NewsKannada NewsKarnataka NewsLatest

*ಪ್ರಾಚೀನ ಹಸ್ತ ಪ್ರತಿಗಳ ಸಮೀಕ್ಷೆ ಮತ್ತು ಡಿಜಿಟಲೀಕರಣ: ಪೋಸ್ಟರ್ ಬಿಡುಗಡೆ ಮಾಡಿದ ಡಿಸಿ*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಕರ್ನಾಟಕದ ಪ್ರಾಚೀನ ಹಸ್ತ ಪ್ರತಿಗಳ ಸಮೀಕ್ಷೆ ಮತ್ತು ಡಿಜಿಟಲೀಕರಣ ನಡೆಯಲಿದೆ.

ಕೇಂದ್ರ ಸರ್ಕಾರದ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ಪುರಾತತ್ವ, ಸಂಗ್ರಹಾಲಯಗಳು ಮತ್ತು ಪರಂಪರೆ ಇಲಾಖೆ, ಪ್ರವಾಸೋದ್ಯಮ ಇಲಾಖೆ ವತಿಯಿಂದ ಕರ್ನಾಟಕದ ಪ್ರಾಚೀನ ಹಸ್ತ ಪ್ರತಿಗಳ ಸಮೀಕ್ಷೆಯಡಿ ಡಿಜಿಟಲೀಕರಣ ಜೂನ್-2026 ರ ಅಂತ್ಯದ ವರೆಗೆ ನಡೆಯಲಿದೆ. 

ಬೆಳಗಾವಿ ವಲಯದ ಜ್ಞಾನ ಭಾರತಂ ಮಿಷನ್ ತಂಡದ ಸಹ ಯೋಗದಲ್ಲಿ ಜ್ಞಾನ ಭಾರತಂ ಮಿಷನ್ ಪೋಸ್ಟರ್ ಗಳನ್ನು ಬಿಡುಗಡೆ ಮಾಡಿ ಜಿಲ್ಲಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪತ್ರಗಳು, ತಾಳೆ ಗ್ರಂಥಗಳು ಹಸ್ತಲಿಪಿಗಳು ಹಾಗೂ ಪ್ರಾಚೀನ ದಾಖಲೆಗಳ ಮಾಹಿತಿಯನ್ನು ಶೀಘ್ರವಾಗಿ ನೀಡಬೇಕೆಂದು ಮನವಿ ಮಾಡಿದರು. 

ಡಿಜಿಟಲೀಕರಣ ಕಾರ್ಯಕ್ಕೆ ಸಂಬಂಧಿತ ಅಧಿಕಾರಿಗಳು ಸಹಕರಿಸಬೇಕೆಂದು ಎಂದು ಜಿಲ್ಲಾಧಿಕಾರಿ ಮೊಹಮ್ಮದ ರೋಶನ್ ತಿಳಿಸಿದರು.

Home add -Advt

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಜ್ಞಾನ ಭಾರತಂ ಮಿಷನ್ ಯೋಜನೆಯಡಿ ದೇಶಾದ್ಯಂತ ಲಭ್ಯವಿರುವ ಶತಮಾನಗಳಷ್ಟು ಹಳೆಯ ಕೈಬರಹದ ಪತ್ರಗಳು, ಹಸ್ತಪ್ರತಿಗಳು ಹಾಗೂ ಐತಿಹಾಸಿಕ ದಾಖಲೆಗಳನ್ನು ಸಂರಕ್ಷಿಸಿ ಡಿಜಿಟಲೀಕರಣ ಮಾಡುವ ಕೆಲಸ ನಡೆಯುತ್ತಿದೆ. ಭಾರತದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಶಾಶ್ವತವಾಗಿ ಉಳಿಸುವುದರ ಜೊತೆಗೆ ಸಾರ್ವಜನಿಕರಿಗೆ ಒಂದೇ ರಾಷ್ಟ್ರೀಯ ವೇದಿಕೆ ಮೂಲಕ ಪ್ರವೇಶ ಕಲ್ಪಿಸುವುದಾಗಿದೆ’ ಎಂದು ತಿಳಿಸಿದರು.

ಈ ಯೋಜನೆಯಡಿ ಹಸ್ತಪ್ರತಿಗಳ ಸಮೀಕ್ಷೆ, ಸಂರಕ್ಷಣೆ, ರಕ್ಷಣೆ, ಡಿಜಿಟಲೀಕರಣ, ನೋಂದಣಿ, ವಿಮರ್ಶಾತ್ಮಕ ಸಂಪಾದನೆ ಮತ್ತು ಮೊಬೈಲ್ ಅಪ್ಲಿಕೇಶನ್ ಕಾರ್ಯಗಳನ್ನು ಕೈಗೊಳ್ಳಲಾಗುತ್ತದೆ. ಕೇಂದ್ರ ಸರ್ಕಾರ ಅಭಿವೃದ್ಧಿಪಡಿಸಿರುವ ಅಪ್ಲಿಕೇಶನ್ ಮೂಲಕ ದೇಶಾದ್ಯಂತ ಇರುವ ಹಸ್ತಪ್ರತಿಗಳ ಮಾಹಿತಿಯನ್ನು ಅಪ್ ಲೋಡ್ ಮಾಡಿ ರಾಷ್ಟ್ರೀಯ ಹಸ್ತಪ್ರತಿ ಭಂಡಾರದಲ್ಲಿ ಸಂಗ್ರಹಿಸುವ ಮೂಲಕ ಜಾಗತಿಕ ಮಟ್ಟದಲ್ಲಿ ಹಂಚಿಕೊಳ್ಳುವ ಯೋಜನೆ ರೂಪಿಸಲಾಗಿದೆ’ ಎಂದು ತಿಳಿಸಿದರು.

ಈ ಯೋಜನೆಯ ಜಿಲ್ಲಾಮಟ್ಟದ ಸಂಯೋಜಕರಾಗಿ ಡಾ. ಭಿಮಾನಂದ ಬಿ.ಎಚ್-8660973934, ಶ್ರೀ ಶ್ರೀನಿವಾಸ ಹುಬ್ಬಳಿ-ಸದಸ್ಯರು, -9606520140,

ರುದ್ರಪ್ಪ ಎನ್ ಸವದಿ- ಸದಸ್ಯರು, -8147339464, ಸುರ್ಣ ಕಿತ್ತೂರ-ಸದಸ್ಯರು, -8867515490 ರವರಿಗೆ ಸಂಬಂಧಿಸಿದ ಅಧಿಕಾರಿಗಳು, ಗ್ರಂಥಾಲಯಗಳು, ದೇವಾಲಯಗಳು, ಮಠಗಳು, ಸೂಫಿ ಸಂತರ ಮಠಾಧೀಶರು, ಶಿಕ್ಷಣ ಸಂಸ್ಥೆಗಳು ಹಾಗೂ ಸಾರ್ವಜನಿಕ ಮನೆಗಳಲ್ಲಿ, ಖಾಸಗಿ ಸಂಗ್ರಹಗಳಲ್ಲಿ ಹಸ್ತಪ್ರತಿಗಳ ಗುರುತಿಸುವಿಕೆ, ಸಂಗ್ರಹ ಸ್ಥಳಗಳಿಗೆ ಪ್ರವೇಶ ಕಲ್ಪಿಸಿ ಸಮೀಕ್ಷೆಗೆ ಸಹಕಾರ ಒದಗಿಸಬೇಕು. 

ಡಿಜಿಟಲೀಕರಣ ಮತ್ತು ಪಟ್ಟಿಮಾಡುವಿಕೆ ಕಾರ್ಯಗಳಿಗೆ ಸಹಾಯ, ಸ್ಥಳೀಯ ಸಂಸ್ಥೆಗಳು ಹಾಗೂ ಸಂರಕ್ಷಕರಲ್ಲಿ ಜಾಗೃತಿ ಮೂಡಿಸುವಿಕೆ, ಅಮೂಲ್ಯವಾದ ಪ್ರಾಚೀನ ಹಸ್ತ ಪ್ರತಿಗಳ ಮಾಹಿತಿಯನ್ನು ಈ ಯೋಜನೆಯಡಿ ಹಸ್ತಪ್ರತಿಗಳನ್ನು ಮರುಪರಿಶೀಲಿಸಿ ಸಾರ್ವಜನಿಕರು ಮಾಹಿತಿ ನೀಡಬೇಕೆಂದು ಜಿಲ್ಲಾಧಿಕಾರಿಗಳು ಕೋರಿದರು.

ಸದರಿ ಸಂದರ್ಭದಲ್ಲಿ ಆಪರ ಜಿಲ್ಲಾಧಿಕಾರಿಗಳು, ಜಿಲ್ಲಾ ಮಟ್ಟದ ಅಧಿಕಾರಿಗಳು ಮತ್ತು ಪ್ರವಾಸೋದ್ಯಮ ಇಲಾಖೆಯ ಉಪ ನಿರ್ದೇಶಕರು ಹಾಗೂ ಬೆಳಗಾವಿ ವಲಯದ ಜ್ಞಾನ ಭಾರತಂ ಮಿಷನ್ ತಂಡದ ಸದಸ್ಯರು, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರು ಉಪಸ್ಥಿತರಿದ್ದರು.

Related Articles

Back to top button