ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕರಾದ ಅನಿಲ ಬೆನಕೆ ಮುಖ್ಯಮಂತ್ರಿ ಯಡಿಯುರಪ್ಪ ಅವರನ್ನು ಭೇಟಿ ಮಾಡಿ ಬೀಮ್ಸ್ ಆಸ್ಪತ್ರೆಗೆ ೫೦ ಲಕ್ಷ ರೂ ಹೆಚ್ಚುವರಿ ವಿಶೇಷ ಅನುದಾನವನ್ನು ನೀಡಬೇಕೆಂದು ಮನವಿ ಸಲ್ಲಿಸಿದರು.
ಮನವಿಗೆ ಸ್ಪಂದಿಸಿದ ಮುಖ್ಯಮಂತ್ರಿಗಳು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ೨ ಕಂತಗಳಲ್ಲಿ ೫೦ ಲಕ್ಷ ರೂ ಅನುದಾನ ಮಂಜುರಾತಿ ಮಾಡುವುದಾಗಿ ತಿಳಿಸಿದ್ದಾರೆ.
ಬೆಳಗಾವಿ ಅತಿ ದೊಡ್ಡ ಜಿಲ್ಲೆಯಾಗಿದ್ದು ಭಿಮ್ಸ್ ಆಸ್ಪತ್ರೆ ಇನ್ನೂ ಹೆಚ್ಚಿನ ರೀತಿಯಲ್ಲಿ ಸುಧಾರಿಸುವ ಆವಶಕತೆ ಇದ್ದು ಭಿಮ್ಸನ ನಿರ್ದೇಶಕರಾದ ಡಾ. ಕುಲಕರ್ಣಿ ಮತ್ತು ಪ್ರಾದೇಶಿಕ ಆಯುಕ್ತರಾದ ಆದಿತ್ಯಾ ಆಮ್ಲನ್ ಬಿಶ್ವಾಸ ಅವರೊಂದಿಗೆ ಚರ್ಚಿಸಿ ಅವರ ನಿರ್ದೇಶನದ ಪ್ರಕಾರ ಹೆಚ್ಚುವರಿ ಅನುದಾನದ ಮನವಿಗೆ ಮುಖ್ಯಮಂತ್ರಿ ಬಿ.ಎಸ್.ಯಡಿಯುರಪ್ಪ ಸ್ಪಂದಿಸಿದ್ದಾರೆ. ಶಿಘ್ರದಲ್ಲಿ ಅನುದಾನ ಬಿಡುಗಡೆಯಾಗಿ ಭಿಮ್ಸ್ ಆಸ್ಪತ್ರೆಯ ಸರ್ವಾಂಗೀಣ ಅಭಿವೃದ್ಧಿಗೆ ಅನುಕುಲವಾಗಲಿದೆ ಎಂದು ಶಾಸಕ ಅನಿಲ ಬೆನಕೆ ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಗೆ ಸಮರ್ಪಕ ವ್ಯಾಕ್ಸಿನ ನೀಡಲು ಶಾಸಕ ಅನಿಲ ಬೆನಕೆ ಮನವಿ
ಶಾಸಕ ಅನಿಲ ಬೆನಕೆ ಮುಖ್ಯಮಂತ್ರಿ ಯಡಿಯುರಪ್ಪ ಹಾಗೂ ಆರೋಗ್ಯ ಸಚಿವ ಡಾ. ಸುಧಾಕರ ಅವರನ್ನು ಭೇಟಿ ನೀಡಿ ಬೆಳಗಾವಿ ಜಿಲ್ಲೆಗೆ ಸಮರ್ಪಕ ವ್ಯಾಕ್ಸಿನ್ ಪೂರೈಸಲು ಮನವಿ ಸಲ್ಲಿಸಿದರು.
ಕೊರೊನಾ ಮಹಾಮಾರಿಯು ಮರುಕಳಿಸದಂತೆ ಹಾಗೂ ೩ ನೇ ಅಲೆಯು ಜಿಲ್ಲೆಗೆ ಹರಡದಂತೆ ಮುಂಜಾಗೃತಾ ಕ್ರಮವಾಗಿ ಬೆಳಗಾವಿ ಉತ್ತರ ಮತಕ್ಷೇತ್ರಕ್ಕೆ ೧ ಲಕ್ಷ ವ್ಯಾಕ್ಸಿನ ತುರ್ತಾಗಿ ಪೂರೈಸಬೇಕೆಂದು ಶಾಸಕ ಅನಿಲ ಬೆನಕೆ ಮನವಿ ಮಾಡಿದರು.
ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ವ್ಯಾಕ್ಸಿನ್ ಅಭಾವದ ಮೇರೆಗೆ ಇಂದು ಮುಖ್ಯಮಂತ್ರಿ ಮತ್ತು ಆರೋಗ್ಯ ಸಚಿವರನ್ನು ಭೇಟಿಯಾಗಿದ್ದೇನೆ. ಬೆಳಗಾವಿ ಉತ್ತರ ಮತಕ್ಷೇತ್ರದಲ್ಲಿ ಬಸ್ ನಿಲ್ದಾಣ ಭಿಮ್ಸ ಆಸ್ಪತ್ರೆ, ರೇಲ್ವೆ ನಿಲ್ದಾಣ, ಎ.ಪಿ.ಎಮ್.ಸಿ. ಹಾಗೂ ಇನ್ನು ಅನೇಕ ಜನ ಸಂದಣಿ ಪ್ರದೇಶಗಳಿದ್ದು ಕೊವಿಡ್ ೩ನೇ ಅಲೆಯ ಪೂರ್ವಭಾವಿ ತಯಾರಿಗಾಗಿ ವ್ಯಾಕ್ಸಿನೇಶನ್ ಅವಶ್ಯಕವಿದೆ. ಆದ್ದರಿಂದ ೧ ಲಕ್ಷ ವ್ಯಾಕ್ಸಿನ ಪೂರೈಸುವಂತೆ ಇಂದು ಮನವಿ ಸಲ್ಲಿಸಲಾಗಿದೆ. ಮನವಿಗೆ ಆರೋಗ್ಯ ಸಚಿವರು ಹಾಗೂ ಮುಖ್ಯಮಂತ್ರಿಗಳು ಸ್ಪಂದಿಸಿದ್ದಾರೆ ಎಂದು ಶಾಸಕ ಅನಿಲ ಬೆನಕೆ ತಿಳಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ