ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಮಂಡಲ ಅಧಿವೇಶನ ಆರಂಭವಾದಾಗಿನಿಂದಲೂ ಸಚಿವ ಈಶ್ವರಪ್ಪ ರಾಜೀನಾಮೆಗೆ ಕಾಂಗ್ರೆಸ್ ಬಿಗಿಪಟ್ಟು, ಆಡಳಿತ-ವಿಪಕ್ಷಗಳ ಗದ್ದಲ-ಕೋಲಾಹಲದಲ್ಲಿಯೇ ಕಲಾಪ ಮುಕ್ತಾಯವಾಗುತ್ತಿದೆ. ಈ ಗದ್ದಲಗಳ ನಡುವೆಯೂ ಇಂದು ವಿಧಾನಸಭೆಯಲ್ಲಿ ಸಿಎಂ, ಸಚಿವರು, ಶಾಸಕರು, ಸಭಾಧ್ಯಕ್ಷರ ಸಂಭಳ ಹೆಚ್ಚಳ ವಿಧೇಯಕ ಮಂಡನೆಯಾಗಿದೆ.
ವಿಧಾನಸಭೆಯಲ್ಲಿ ಸಚಿವ ಜೆ.ಸಿ.ಮಾಧುಸ್ವಾಮಿ ಶಾಸಕರ ವೇತನ ಹೆಚ್ಚಳ ವಿಧೇಯಕ, ನಿವೃತ್ತಿ ವೇತನ ತಿದ್ದುಪಡಿ ವಿಧೇಯಕ ಮಂಡಿಸಿದ್ದು, ಇನ್ಮುಂದೆ ಪ್ರತಿ 5 ವರ್ಷಕ್ಕೆ ವೇತನ ಹೆಚ್ಚಳ ಮಾಡಲಾಗುವುದು ಎಂದರು.
ಮುಖ್ಯಮಂತ್ರಿಗಳ ವೇತನ ಶೇಕಡಾ 50 ರಷ್ಟು ಹೆಚ್ಚಳವಾಗಿದ್ದು, 50,000 ಇದ್ದ ಸಂಬಳ 75,000ಕ್ಕೆ ಹೆಚ್ಚಳವಾಗಿದೆ. ಕ್ಯಾಬಿನೆಟ್ ದರ್ಜೆ ಮಂತ್ರಿಗಳಿಗೆ ಪ್ರತಿ ತಿಂಗಳ 40 ಸಾವಿರ ಇದ್ದ ಸಂಬಳ 60,000ರೂಪಾಯಿಗಳಿಗೆ ಹೆಚ್ಚಳವಾಗಿದೆ. ಪ್ರತಿ ವರ್ಷ ಆತಿಥ್ಯ ಭತ್ಯೆ ಶೇಕಡಾ 3 ಲಕ್ಷದಿಂದ ನಾಲ್ಕೂವರೆ ಲಕ್ಷಕ್ಕೆ ಏರಿಕೆಯಾಗಿದೆ.
ಕ್ಯಾಬಿನೆಟ್ ದರ್ಜೆಯ ಸಚಿವರ ಮನೆ ಬಾಡಿಗೆ ಶೇಕಡಾ 80 ಸಾವಿರದಿಂದ 1ಲಕ್ಷದ 20 ಸಾವಿರ ರೂಪಾಯಿಗೆ, ಮನೆ ನಿರ್ವಹಣೆ ವೆಚ್ಚ ಶೇಕಡಾ 20 ಸಾವಿರದಿಂದ 30 ಸಾವಿರಕ್ಕೆ ಹೆಚ್ಚಳ. ವಾಹನ ಸೌಲಭ್ಯಕ್ಕಾಗಿ ಪ್ರತಿ ತಿಂಗಳಿಗೆ 1000 ಪೆಟ್ರೋಲ್ನಿಂದ 2 ಸಾವಿರ ಪೆಟ್ರೋಲ್ಗೆ ಹೆಚ್ಚಳ ಮಾಡಲಾಗಿದೆ.
ಸಭಾಧ್ಯಕ್ಷರ ಸಂಬಳ 50 ಸಾವಿರದಿಂದ 75 ಸಾವಿರಕ್ಕೆ ಹಾಗೂ ಶಾಸಕರ ಸಂಬಳ 20 ಸಾವಿರದಿಂದ 40 ಸಾವಿರದವರೆಗೆ ಹೆಚ್ಚಿಸಲಾಗಿದ್ದು, ಮನೆ ಬಾಡಿಗೆ, ನಿರ್ವಹಣೆ, ಪ್ರಯಾಣ ಭತ್ಯೆ ಸೇರಿದಂತೆ ಹಲವು ಆತಿತ್ಯ ಭತ್ಯೆಗಳು ಹೆಚ್ಚಳವಾಗಿವೆ.
ವಿಧೇಯಕಕ್ಕೆ ಶಾಸಕ ಬಂಡೆಪ್ಪ ಕಾಶಂಪೂರ ವಿರೋಧ ವ್ಯಕ್ತಪಡಿಸಿದ್ದು, ಗದ್ದಲದ ನಡುವೆಯೂ ವಿಧೇಯಕ ಮಂಡನೆಯಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ