ಪ್ರಗತಿವಾಹಿನಿ ಸುದ್ದಿ: ಜೈ ಶ್ರೀರಾಮ ಘೋಷಣೆ ಕೂಗಿದ್ದಾರೆ ಎಂಬ ಕಾರಣಕ್ಕೆ ಬೀದರನ ಜಿಎನ್‌ಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ ನಡೆದ ಗುಂಪು ಘರ್ಷಣೆಯಲ್ಲಿ ಭಾಗಿಯಾಗಿದ್ದ 19 ವಿದ್ಯಾರ್ಥಿಗಳನ್ನು ಕಾಲೇಜಿನಿಂದ ಅಮಾನತು ಮಾಡಲಾಗಿದೆ.
ಕಾಲೇಜಿನಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮಕ್ಕಾಗಿ ನಾಟಕ ಅಭ್ಯಾಸ ಮಾಡುತ್ತಿದ್ದ ವೇಳೆ ನಾಟಕದ ಭಾಗವಾಗಿ ಜೈ ಶ್ರೀರಾಮ ಘೋಷಣೆ ಕೂಗಲಾಗಿತ್ತು. ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕಾಲೇಜಿನ ವಿದ್ಯಾರ್ಥಿಗಳ ಗುಂಪು ಜೈ ಶ್ರೀರಾಮ ಘೋಷಣೆ ಕೂಗದಂತೆ ನಾಟಕ ಅಭ್ಯಾಸ ಮಾಡುತ್ತಿದ ಗುಂಪಿನ ಜೊತೆ ವಾಗ್ವಾದ ನಡೆಸಿತು. ವಾಗ್ವಾದದಿಂದ ಕಾಲೇಜಿನಲ್ಲಿ ದೊಡ್ಡ ಘರ್ಷಣೆಗೆ ಉಂಟಾಗಿ ಕಾಲೇಜಿನಲ್ಲಿ ಬೀಗುವಿನ ವಾತಾವರಣ ಉಂಟಾಗಿ ಕಾಲೇಜಿನಲ್ಲಿ ನಡೆಯಬೇಕಾಗಿದ್ದ ಕಾರ್ಯಕ್ರಮ ಕೂಡಾ ರದ್ದು ಮಾಡಲಾಗಿದೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂತರಿಕ ವಿಚಾರಣೆ ಮುಗಿಯುವವರೆಗೂ ವಿದ್ಯಾರ್ಥಿಗಳನ್ನು ಅಮಾನತು ಮಾಡಲಾಗಿದ್ದು, ಈಗಾಗಲೇ ಕಾಲೇಜಿನಲ್ಲಿ ಐದು ಜನರ ಉಪನ್ಯಾಸಕರ ವಿಚಾರಣೆ ಸಮಿತಿಯನ್ನು ರಚನೆ ಮಾಡಲಾಗಿದೆ.
ಈಗ ಕಾಲೇಜಿನ ನಿಯಮದ ಅಡಿಯಲ್ಲಿ ಪ್ರಕರಣದಲ್ಲಿ ಭಾಗಿಯಾದ ವಿದ್ಯಾರ್ಥಿಗಳ ಆಂತರಿಕ ವಿಚಾರಣೆ ಮಾಡುವ ಉದ್ದೇಶದಿಂದ ಅಮಾನತು ಮಾಡಲಾಗಿದೆ. ಕಾಲೇಜಿನ ಈ ವಿಚಾರಣೆ ಪೊಲೀಸರ ಮುಂದಿನ ವಿಚಾರಣೆಗೆ ಸಹಾಯವಾಗಲಿದೆ. ಈಗಾಗಲೇ ಗಾಂಧಿಗಂಜ್ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಮುಂದುವರಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ