
ಪ್ರಗತಿವಾಹಿನಿ ಸುದ್ದಿ: ವಿದ್ಯಾರ್ಥಿಗಳಿಗೆ ಭವಿಷ್ಯ ರೂಪಿಸಬೇಕಾದ ಶಿಕ್ಷಕ ಕಂಠಪೂರ್ತಿ ಕುಡಿದು ಬಂದು ರಸ್ತೆಯಲ್ಲಿ ತೂರಾಟ ನಡೆಸಿ, ರಂಪಾಟ ನಡೆಸಿರುವ ಘಟನೆ ಬೆಳಕಿಗೆ ಬಂದಿದೆ.
ಮಕ್ಕಳಿಗೆ ಬದುಕಿನ ಮಾರ್ಗದರ್ಶನ ನೀಡಿ ಉಜ್ವಲ ಭವಿಷ್ಯ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಪಾಠ ಮಾಡಬೇಕಾಗಿದ್ದ ಕಾಲೇಜು ಪ್ರಾಧ್ಯಾಪಾಕ ಮಹಾಶಯ ತಾನೇ ಕಂಠಪೂರ್ತಿ ಕುಡಿದು ಬಂದು ಎಣ್ಣೆ ಏಟಿಗೆ ರಸ್ತೆಯಲ್ಲಿ ತೂರಾಡುತ್ತಾ, ದಾರಿಕಾಣದೇ ಅದೇ ರಸ್ತೆಯಲ್ಲಿ ಬಿದ್ದು ಹೊರಳಾಡಿರುವ ಘಟನೆ ಮಧ್ಯಪ್ರದೇಶದ ರೇವಾ ನಗರದಲ್ಲಿ ನಡೆದಿದೆ.
ಕಾಲೇಜು ಪ್ರಾಧ್ಯಾಪಕನ ಅವಸ್ಥೆ ಕಂಡು ಆತ ಮಾನಸಿಕ ಅಸ್ವಸ್ಥ ಎಂದು ಭಾವಿಸಿ ಸ್ಥಳೀಯರು ಆಂಬುಲೆನ್ಸ್ ಗೆ ಕರೆ ಮಾಡಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ವೈರಲ್ ಆಗಿದೆ. ವಿಡಿಯೋ ವೈರಲ್ ಬಳಿಕ ಆತ ರೇವಾ ಜಿಲ್ಲೆಯ ಸರ್ಕಾರಿ ಬಾಲಕಿಯರ ಕಾಲೇಜಿನ ಪ್ರಾಧ್ಯಾಪಕ ಅಭಿಷೇಕ್ ಮಾಳವಿಯ ಎಂದು ತಿಳಿದುಬಂದಿದೆ. ಶಿಕ್ಷಕನ ಬೇಜವಾಬ್ದಾರಿಗೆ ಸಾರ್ವಜನಿಕರು, ವಿದ್ಯಾರ್ಥಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.