
ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಮಿಡಿ ಕಿಲಾಡಿಗಳು ನಯನಾ ವಿರುದ್ಧ ಬೆದರಿಕೆ ಪ್ರಕರಣಕ್ಕೆಸಂಬಂಧಿಸಿದಂತೆ ಪೊಲೀಸರಿಗೆ ದೂರು ನೀಡಲಾಗಿದೆ.
ಕಾಮಿಡಿ ಗ್ಯಾಂಗ್ ಶೋ ಸ್ಪರ್ಧಿ ಸೋಮನಾಥ್ ಎಂಬುವವರು ನಟಿ ನಯನಾ ವಿರುದ್ಧ ಆರ್ ಆರ್ ನಗರ ಠಾಣೆಯಲ್ಲಿ ದೂರು ನೀಡಿದ್ದಾರೆ. ಜೀವ ಬೆದರಿಕೆ, ಧಮ್ಕಿ ಹಾಕಿರುವ ಆರೋಪ ನಯನಾ ವಿರುದ್ಧ ಕೇಳಿಬಂದಿದೆ.
ನಯನಾ ಹಾಗೂ ಸೋಮನಾಥ್ ಇಬ್ಬರೂ ಕಾಮಿಡಿ ಗ್ಯಾಂಗ್ ಶೋ ನಲ್ಲಿ ಸ್ಪರ್ಧಿಗಳಾಗಿ ಭಾಗವಹಿಸಿದ್ದರು. ಈ ವೇಳೆ ಹಣಕಾಸಿನ ವಿಚಾರವಾಗಿ ನಯನಾ ಅವಾಚ್ಯ ಶಬ್ದಗಳಿಂದ ನಿಂದಿಸಿ, ಧಮ್ಕಿ ಹಾಕಿದ್ದಾರೆ ಎನ್ನಲಾಗಿದೆ.
ಪ್ರಕರಣ ಸಂಬಂಧ ಆರ್ ಆರ್ ನಗರ ಠಾಣೆ ಪೊಲೀಸರು ಸಂಜೆ ನಯನಾ ಹಾಗೂ ಸೋಮನಾಥ್ ಗೆ ಠಾನೆಗೆ ಬರುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಶಾಸಕನ ಬಟ್ಟೆ ಹರಿದು ಹಲ್ಲೆ; 10 ಜನರ ಬಂಧನ
https://pragati.taskdun.com/mla-m-p-kumaraswamyattack10-people-arrested/
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ