Uncategorized

ರಮೇಶ ಜಾರಕಿಹೊಳಿ ಸೇರಿ ಮೂವರ ವಿರುದ್ಧ ಕೆಲವೇ ಹೊತ್ತಿನಲ್ಲಿ ದೂರು

ಪ್ರಗತಿವಾಹಿನಿ  ಸುದ್ದಿ, ಬೆಂಗಳೂರು: ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಕೆ ಮಾಡಿಕೊಳ್ಳಲು ಅಕ್ರಮ ಎಸಗುತ್ತಿದ್ದಾರೆ ಎಂದು ಆರೋಪಿಸಿ ಮೂವರ ವಿರುದ್ಧ ಪಿರ್ಯಾದು ದಾಖಲು ಮಾಡಲು ಕಾಂಗ್ರೆಸ್ ನಿರ್ಧರಿಸಿದೆ.

ಕೆಪಿಸಿಸಿ ಅಧ್ಯಕ್ಷರಾದ ಡಿ.ಕೆ ಶಿವಕುಮಾರ್ ಅವರು ಹಾಗೂ ವಿಧಾನಸಭಾ ವಿರೋಧ ಪಕ್ಷದ ನಾಯಕ  ಸಿದ್ದರಾಮಯ್ಯ ಅವರು ಸೇರಿದಂತೆ ಕಾಂಗ್ರೆಸ್ ನಾಯಕರು  ಬುಧವಾರ ಬೆಳಗ್ಗೆ 10.30 ಕ್ಕೆ ಬೆಂಗಳೂರಿನ ಕ್ವೀನ್ಸ್ ರಸ್ತೆಯ ಕೆಪಿಸಿಸಿ ಕಚೇರಿಯಿಂದ ಹೊರಟು ವಸಂತನಗರದ ಹೈಗ್ರೌಂಡ್ಸ್ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಲಿದ್ದಾರೆ.

ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿಯ ಅಧ್ಯಕ್ಷ ನಳೀನ್ ಕುಮಾರ ಕಟೀಲು ಹಾಗೂ ಮಾಜಿ ಸಚಿವ ರಮೇಶ್ ಜಾರಕಿಹೊಳಿ  ಅವರು ಮುಂಬರುವ ಚುನಾವಣೆ ಹಿನ್ನೆಲೆಯಲ್ಲಿ ಮತದಾರರನ್ನು ಓಲೈಕೆ ಮಾಡಿಕೊಳ್ಳಲು ಎಸಗುತ್ತಿರುವ ಅಕ್ರಮಗಳ ವಿರುದ್ಧ ಪಿರ್ಯಾದು ದಾಖಲು ಮಾಡಲಿದ್ದಾರೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಮೇಶ ಜಾರಕಿಹೊಳಿ ಬೆಳಗಾವಿಯ ಸುಳೇಬಾವಿಯಲ್ಲಿ ಬಹಿರಂಗ ಭಾಷಣ ಮಾಡುತ್ತ, ನಾವು ನಿಮಗೆ 6 ಸಾವಿರ ರೂ. ಕೊಟ್ಟರೆ ಮಾತ್ರ ನಮಗೆ ಮತ ಹಾಕಿ ಎಂದು ಹೇಳಿಕೆ ನೀಡಿದ್ದರು. ಜೊತೆಗೆ ವಿರೋಧಿಗಳು ಖರ್ಚು ಮಾಡಿದ್ದಕ್ಕಿಂತ 10 ಕೋಟಿ ರೂ. ಹೆಚ್ಚು ಖರ್ಚು ಮಾಡಲಾಗುವುದು ಎಂದೂ ಹೇಳಿದ್ದರು.

ಅವರು ಮಾಡಿದ್ದಕ್ಕಿಂತ 10 ಕೋಟಿ ರೂ. ಹೆಚ್ಚು ಖರ್ಚು ಮಾಡುತ್ತೇವೆ – ಬಹಿರಂಗ ಸಭೆಯಲ್ಲೇ ರಮೇಶ ಜಾರಕಿಹೊಳಿ ಘೋಷಣೆ

https://pragati.taskdun.com/we-will-spend-10-crores-more-than-what-they-did-ramesh-jarakiholi-announced-in-the-open-meeting/

ಏಪ್ರೀಲ್ ಕೊನೆ ಅಥವಾ ಮೇ ಮೊದಲ ವಾರದಲ್ಲಿ ಚುನಾವಣೆ – ಬಾಲಚಂದ್ರ ಜಾರಕಿಹೊಳಿ

https://pragati.taskdun.com/%e0%b2%8f%e0%b2%aa%e0%b3%8d%e0%b2%b0%e0%b3%80%e0%b2%b2%e0%b3%8d-%e0%b2%95%e0%b3%8a%e0%b2%a8%e0%b3%86-%e0%b2%85%e0%b2%a5%e0%b2%b5%e0%b2%be-%e0%b2%ae%e0%b3%87-%e0%b2%ae%e0%b3%8a%e0%b2%a6%e0%b2%b2/

ಹೆಚ್ಚುವರಿ ಶಿಕ್ಷಕರ ಕೌನ್ಸಲಿಂಗ್ ಹಠಾತ್ ಸ್ಥಗಿತ; ಸಾಮಾನ್ಯ ವರ್ಗಾವಣೆಗೆ ಮತ್ತೆ ಗ್ರಹಣ?

https://pragati.taskdun.com/sudden-stoppage-of-counseling-of-additional-teachers-what-will-be-the-normal-transfer/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button