
ಸಮುದಾಯ ಭವನ, ಗಣೇಶ ಮಂದಿರದ ಸಾಂಸ್ಕೃತಿಕ ಭವನ ನಿರ್ಮಾಣ
ಪ್ರಗತಿವಾಹಿನಿ ಸುದ್ದಿ, ಚಿಕ್ಕೋಡಿ – ನಿಪ್ಪಾಣಿ ಮತಕ್ಷೇತ್ರದ ಸೌಂದಲಗಾ ಗ್ರಾಮದಲ್ಲಿ ಶಾಸಕರ ಸ್ಥಳೀಯ ಪ್ರದೇಶಾಭಿವೃದ್ಧಿ ಯೋಜನೆಯಡಿ ಮಂಜೂರಾದ 10 ಲಕ್ಷ ರೂ. ಮೊತ್ತದಲ್ಲಿ, ಶ್ರೀ ವಿಠ್ಠಲ ಬಿರದೇವ ಮಂದಿರ ಹತ್ತಿರ ಸಮುದಾಯ ಭವನ ಹಾಗೂ ಕನ್ನಡ ಮತ್ತು ಸಂಸ್ಕ್ರತಿ ಇಲಾಖೆ ವತಿಯಿಂದ ಮಂಜೂರಾದ 25 ಲಕ್ಷ ರೂ ಮೊತ್ತದಲ್ಲಿ ಗಣೇಶ ಮಂದಿರದ ಸಾಂಸ್ಕೃತಿಕ ಭವನ ನಿರ್ಮಾಣ ಕಾಮಗಾರಿಗೆ ಚಿಕ್ಕೋಡಿ ಸಂಸದ ಅಣ್ಣಾಸಾಹೇಬ ಜೊಲ್ಲೆ ಭೂಮಿಪೂಜೆ ನೆರವೇರಿಸಿದರು.

ಈ ಸಂದರ್ಭದಲ್ಲಿ ಬಿಜೆಪಿ ಗ್ರಾಮೀಣ ಅಧ್ಯಕ್ಷ ಪವನ ಪಾಟೀಲ, ಗಣಪತಿ ಗಾಡಿವಡ್ಡರ, ಹಾಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ಉಪಾಧ್ಯಕ್ಷ ಎಮ್. ಪಿ.ಪಾಟೀಲ, ಪ್ರಕಾಶ ಶಿಂಧೆ,ಸಂಜಯ ಶಿಂತ್ರೆ, ದಾದು ಕಾಂಬಳೆ, ಅಪ್ಪಾ ದಾವಣೆ, ವಿಕ್ರಮ ಪಾಟೀಲ, ಸಾಗರ ದೇಸಾಯಿ, ವಿನೋದ ಮಾನೆ, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ