ಲೋಕಾಯುಕ್ತ ಅಧಿಕಾರಿಗಳ ಪ್ರವಾಸ; ಕುಂದುಕೊರತೆಗಳ ಸಭೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ- ಲೋಕಾಯುಕ್ತ ಪೊಲೀಸರಿಂದ ಬೆಳಗಾವಿ ಜಿಲ್ಲೆಯ ತಾಲೂಕು ಕೇಂದ್ರಗಳಲ್ಲಿ ಕುಂದುಕೊರತೆಗಳ ಸಭೆಯನ್ನು ನಡೆಸಲು ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಆರ್.ಶಿವಕುಮಾರ್ ಆದೇಶಿಸಿದ್ದಾರೆ. ಹಾಗೂ ತಾಲೂಕಾ ಮಟ್ಟದ ಎಲ್ಲ ಇಲಾಖೆಗಳ ಅಧಿಕಾರಿಗಳು ಸಭೆಯಲ್ಲಿ ಕಡ್ಡಾಯವಾಗಿ ಹಾಜರಿರಬೇಕೆಂದು ಸೂಚಿಸಿದ್ದಾರೆ.
ಸರ್ಕಾರಿ ಕಛೇರಿಗಳಲ್ಲಿ ಅಧಿಕೃತ ಕೆಲಸಗಳನ್ನು ಮಾಡಿಕೊಡುವಲ್ಲಿ ವಿಳಂಬ ಹಾಗೂ ಇನ್ನಿತರೆ ತೊಂದರೆ ನೀಡುತ್ತಿರುವ ಅಧಿಕಾರಿ, ನೌಕರರ ವಿರುದ್ಧ ಸಾರ್ವಜನಿಕರು ದೂರುಗಳನ್ನು ನಿಗದಿತ ಪ್ರಪತ್ರದಲ್ಲಿ ನೀಡಬಹುದಾಗಿದೆ. ಸ್ಥಳದಲ್ಲಿ ಪರಿಹಾರ ಕಂಡುಕೊಳ್ಳಬಹುದಾದ ದೂರುಗಳನ್ನು ಅಲ್ಲಿನ ಸ್ಥಳೀಯ ಅಧಿಕಾರಿಗಳ ಸಹಕಾರದೊಂದಿಗೆ ಇತ್ಯರ್ಥಪಡಿಸಲು ಪ್ರಯತ್ನಿಸಲಾಗುವುದು ಎಂದು ಲೋಕಾಯುಕ್ತ ಪೊಲೀಸ್ ಅಧೀಕ್ಷಕರಾದ ಆರ್.ಶಿವಕುಮಾರ್ ರವರು ತಿಳಿಸಿದ್ದಾರೆ.
ಈ ನಿಮಿತ್ಯವಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳು ಸೆಪ್ಟೆಂಬರ್ ೨೩ ರಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಬೈಲಹೊಂಗಲ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಸೆಪ್ಟೆಂಬರ್ ೨೫ ರಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಕಿತ್ತೂರು ತಹಶೀಲ್ದಾರ ಕಚೇರಿಯಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಸೆಪ್ಟೆಂಬರ್ ೨೭ ರಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಸವದತ್ತಿ ತಾಲೂಕು ಪಂಚಾಯತಿ ಸಭಾ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಸೆಪ್ಟೆಂಬರ್ ೩೦ ರಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ನಿಪ್ಪಾಣಿ ಲೊಕೋಪಯೋಗಿ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಅಕ್ಟೋಬರ್ ೩ ರಂದು ಬೆಳಗಾವಿ ಕರ್ನಾಟಕ ಲೋಕಾಯುಕ್ತ, ಪೋಲಿಸ್ ಉಪಾಧೀಕ್ಷಕರಾದ ಆರ್.ಆರ್.ಅಂಬಡಗಟ್ಟಿ, ಪೋಲಿಸ್ ನಿರೀಕ್ಷಕರುಗಳಾದ ಪಿ.ಆರ್.ಧಬಾಲಿ, ಶಿವಾಜಿ ಕಾಳೋಜಿ, ಎಸ್.ಡಿ.ಹಳ್ಳೂರ ಹಾಗೂ ಎಲ್ಲಾ ಇಲಾಖೆಗಳ ತಾಲೂಕು ಮಟ್ಟದ ಅಧಿಕಾರಿಗಳು ಮೂಡಲಗಿ ಪುರಸಭೆ ಸಭಾ ಭವನದಲ್ಲಿ ಬೆಳಿಗ್ಗೆ ೧೧ ಗಂಟೆಯಿಂದ ಸಂಜೆ ೪ ಗಂಟೆವರೆಗೆ ಕುಂದುಕೊರತೆಗಳ ಸಭೆ ನಡೆಸಲಿದ್ದಾರೆ.
ಹೆಚ್ಚಿನ ಮಾಹಿತಿಗಳಿಗಾಗಿ ಲೋಕಾಯುಕ್ತ ಪೊಲೀಸ್ ಅಧಿಕಾರಿಗಳ ಬೆಳಗಾವಿ ಕಛೇರಿ ದೂರವಾಣಿ ಸಂಖ್ಯೆ ೦೮೩೧-೨೪೨೧೫೫೦ ಮತ್ತು ೦೮೩೧-೨೪೨೧೯೨೨ ಗಳನ್ನು ಸಂಪರ್ಕಿಸಬಹುದಾಗಿದೆ ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.
ಪರಿಶಿಷ್ಟ ಜಾತಿಯ ಶಿಷ್ಯವೇತನಕ್ಕೆ ಅರ್ಜಿ ಆಹ್ವಾನ
೨೦೧೯-೨೦ನೇ ಸಾಲಿಗಾಗಿ ಸವದತ್ತಿ ತಾಲೂಕಿನ, ವಿವಿಧ ಕಾಲೇಜುಗಳಲ್ಲಿ ಪ್ರವೇಶ ಪಡೆದು ವ್ಯಾಸಂಗ ಮಾಡುತ್ತಿರುವ ಹಾಗೂ ವಾರ್ಷಿಕ ಆದಾಯ ರೂ.೨.೫೦ ಲಕ್ಷ ಮಿತಿಯೊಳಗಿರುವ, ಪರಿಶಿಷ್ಟ ಜಾತಿಯ ವಿದ್ಯಾರ್ಥಿ,ವಿದ್ಯಾರ್ಥಿನಿಯರಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಕೇಂದ್ರ ಪುರಸ್ಕೃತ ಮೆಟ್ರಿಕ ನಂತರದ ಭಾರತ ಸರ್ಕಾರ ಶಿಷ್ಯವೇತನ ಆನ್‌ಲೈನ್ ಮೂಲಕ ಮಂಜೂರು ಮಾಡುವ ಸಲುವಾಗಿ ಅರ್ಜಿಗಳನ್ನು ಆಹ್ವಾನಿಸಲಾಗುತ್ತಿದೆ.
ಅರ್ಹ ಆಸಕ್ತ ಪರಿಶಿಷ್ಟ ಜಾತಿ ವಿದ್ಯಾರ್ಥಿಗಳು ಸಮಾಜ ಕಲ್ಯಾಣ ಇಲಾಖೆಯ ವೆಬ್‌ಸೈಟ್ ನಲ್ಲಿ ಅಕ್ಟೋಬರ್ ೩೧ ರೊಳಗಾಗಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ವಿದ್ಯಾರ್ಥಿಯು ಆನ್‌ಲೈನಲ್ಲಿ ಅರ್ಜಿ ಸಲ್ಲಿಸಿದ ಪ್ರಿಂಟ್ ಪಡೆದು, ಸಂಬಂಧಿಸಿದ ಪ್ರಾಚಾರ್ಯರಿಗೆ ಅವಶ್ಯಕ ದಾಖಲಾತಿಗಳೊಂದಿಗೆ ಅರ್ಜಿಯನ್ನು ಅಕ್ಟೋಬರ್ ೩೧ ರೊಳಗಾಗಿ ಸಲ್ಲಿಸಬೇಕು.
ಪ್ರಾಚಾರ್ಯರು ವಿದ್ಯಾರ್ಥಿಯಿಂದ ಆನ್‌ಲೈನ್‌ನಲ್ಲಿ ಭರ್ತಿ ಮಾಡಿ ಪಡೆದ ಅರ್ಜಿ ಪ್ರತಿ ಮತ್ತು ಇತರ ದಾಖಲೆಗಳನ್ನು ಪರಿಶೀಲಿಸಿ, ದೃಢೀಕರಿಸಿ ಎಲ್ಲಾ ಅರ್ಜಿಗಳನ್ನು ಕ್ರೋಢಿಕರಿಸಿ ವಿದ್ಯಾರ್ಥಿಯ ಯಾದಿಯೊಂದಿಗೆ ಮತ್ತು ಅವರು ಕಲಿಯುವ ಕೋರ್ಸಿಗೆ ಸರಕಾರ, ವಿಶ್ವವಿದ್ಯಾನಿಲಯ ನಿಗಧಿಪಡಿಸಿದ ಶುಲ್ಕ ವಿವರದ ಆದೇಶ ಪ್ರತಿಯೊಂದಿಗೆ ನವೆಂಬರ್ ೧೫ ರೊಳಗಾಗಿ ಸಮಾಜ ಕಲ್ಯಾಣ ಇಲಾಖೆಗೆ ಸಲ್ಲಿಸಲು ಸವದತ್ತಿ ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಮೀನುಗಾರಿಕೆ ಇಲಾಖೆ: ಮೀನು ಕೃಷಿಕರಿಂದ ಅರ್ಜಿ ಅಹ್ವಾನ
೨೦೧೯-೨೦ ನೇ ಸಾಲಿನಲ್ಲಿ ಅನುಷ್ಠಾನಗೊಳಿಸಬೇಕಾದ ವಿವಿಧ ಯೋಜನೆಗಳಿಗೆ ಮೀನುಗಾರಿಕೆ ಇಲಾಖೆಯಿಂದ ಮೀನುಗಾರರು, ಮೀನು ಕೃಷಿಕರಿಂದ ಅರ್ಜಿ ಅಹ್ವಾನಿಸಲಾಗಿದೆ.
ಇಲಾಖೆಯ ಕೆರೆಗಳ ಮೀನು ಪಾಶುವಾರು ಹಕ್ಕನ್ನು ಪಡೆಯುವುದು, ಮೀನುಮರಿ ವಿತರಣೆ, ಮತ್ಸ್ಯ ಕೃಷಿ ಆಶಾ ಕಿರಣ ಯೋಜನೆಯಡಯಲ್ಲಿ ಅರೆ ಸಾಂದ್ರಿತ ಮೀನುಕೃಷಿ ಕೈಗೊಳ್ಳಲು ಸಹಾಯಧನ, ಮೀನುಗಾರಿಕೆ ಸಹಕಾರಿ ಸಂಘಗಳಿಗೆ ಒಳನಾಡು ಮೀನು ಕೃಷಿಗೆ ಪ್ರೋತ್ಸಾಹ, ಸಿಗಡಿ ಕೃಷಿಗೆ ಪ್ರೋತ್ಸಾಹ, ಮೀನುಗಾರಿಕೆ ಸಲಕರಣೆಗಳ ಮತ್ತು ಮೀನು ಮಾರಾಟ ಸಲಕರಣೆಗಳ ಕಿಟ್ ಪೂರೈಕೆ, ಮೀನುಕೃಷಿ ಕೊಳ ನಿರ್ಮಾಣಕ್ಕೆ ಸಹಾಯಧನ, ಮತ್ಸ್ಯವಾಹಿನಿ ಯೋಜನೆ, ವಿಶೇಷ ಘಟಕ ಯೋಜನೆ, ಗಿರಿಜನ ಉಪ ಯೋಜನೆ ಮುಂತಾದ ಜಿಲ್ಲಾ, ರಾಜ್ಯ ಮತ್ತು ಕೇಂದ್ರ ವಲಯದ ಯೋಜನೆಗಳಿಗೆ ಸಪ್ಟೆಂಬರ್ ೩೦ ರೊಳಗೆ ಅಗತ್ಯ ದಾಖಲಾತಿಗಳೊಂದಿಗೆ ಅರ್ಜಿ ಸಲ್ಲಿಸಲು ತಿಳಿಸಲಾಗಿದೆ.
ಹೆಚ್ಚಿನ ಮಾಹಿತಿಗಾಗಿ ಬೆಳಗಾವಿಯ ರಾಮತೀರ್ಥನಗರದ(ಕ್ರಿಕೇಟ್ ಸ್ಟೇಡಿಯಂ ಎದುರಿಗೆ) ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರ ಕಛೇರಿಗೆ ಅಥವಾ ತಾಲೂಕಾ ಮಟ್ಟದ ಮೀನುಗಾರಿಕೆ ಸಹಾಯಕ ನಿರ್ದೇಶಕರು (ಶ್ರೇಣಿ-೨) ಬೆಳಗಾವಿ, ಖಾನಾಪೂರ, ಬೈಲಹೊಂಗಲ, ರಾಮದುರ್ಗ, ಚಿಕ್ಕೋಡಿ ಮತ್ತು ರಾಯಬಾಗ ಕಛೇರಿಗಳನ್ನು ಸಂಪರ್ಕಿಸಲು ಬೆಳಗಾವಿಯ ಮೀನುಗಾರಿಕೆ ಹಿರಿಯ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ