ಮನರೇಗಾ ಕಾಮಗಾರಿಗಳನ್ನು ಕಾಲ ಕಾಲಕ್ಕೆ ಪೂರ್ಣಗೊಳಿಸಿ: ಜಿಪಂ ಸಿಇಒ ರಾಹುಲ್ ಶಿಂಧೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ಸನ್ 2022-23, 2023-24 ಹಾಗೂ 2024-25 ನೇ ಸಾಲಿನಡಿ ಪ್ರತಿ ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ ಮಹಾತ್ಮ ಗಾಂಧಿ ನರೇಗಾ ಯೋಜನೆಗಳು ಕಾಮಗಾರಿಗಳು ಪೂರ್ಣಗೊಳಿಸದೇ ಹಾಗೇ ಉಳಿದುಕೊಂಡಿವೆ. ಅಂತಹ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು ಎಂದು ಅಧಿಕಾರಿ ಹಾಗೂ ಸಿಬ್ಬಂದಿಗಳಿಗೆ ಜಿಲ್ಲಾ ಪಂಚಾಯತ್ ಸಿಇಒ ರಾಹುಲ್ ಶಿಂಧೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯತ್ ಅಧಿಕಾರಿಗಳೊಂದಿಗೆ ನಡೆದ ವಿಡಿಯೋ ಸಂವಾದ ಕಾರ್ಯಕ್ರಮದಲ್ಲಿ ವಿವಿಧ ಯೋಜನೆಗಳ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಸಂಪೂರ್ಣವಾಗಿ ಮಳೆ ಇನ್ನು ಪ್ರಾರಂಭವಾಗಿಲ್ಲ ಆದ್ದರಿಂದ ಜನರಿಗೆ ಮನರೇಗಾ ಯೋಜನೆಯಡಿ ಕಡ್ಡಾಯವಾಗಿ ಕೆಲಸ ನೀಡುವುದು. ಸಾಮಾಜಿಕ ಪರಿಶೋಧನೆಯಲ್ಲಿ ಎ.ಟಿ.ಆರ್. ಇತ್ಯರ್ಥಗೊಳಿಸುವುದು ಬಾಕಿ ಇದ್ದು, ವಾರಕ್ಕೆ ಎರಡು ಬಾರಿ ಅಡಾಕ್ ಸಮಿತಿ ಸಭೆಗಳನ್ನು ಮಾಡುವುದರ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸುವುದು. ಪ್ರತಿ ಹೊಬಳಿಗೆ ಒಂದರಂತೆ ಗ್ರಾಮೀಣ ಸಂತೆ ಕಾಮಗಾರಿಗಳ ಸ್ಥಳ ಗುರುತಿಸಿ ಒಂದು ವಾರದೊಳಗಾಗಿ ಕ್ರಿಯಾ ಯೋಜನೆಯನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿಸಲು ಕ್ರಮವಹಿಸುವಂತೆ ಎಂದು ನಿರ್ದೇಶನ ನೀಡಿದರು.
ಆಸ್ತಿ ಸಮೀಕ್ಷೆ ಮಾಹಿತಿಗಳನ್ನು ಪಿ2 ವರದಿಯಲ್ಲಿ ಅಪಡೇಟ್ ಮಾಡಲು ತಿಳಿಸಿದರು. ಗ್ರಾಮ ಪಂಚಾಯತಿಯಡಿ ಕರ ವಸೂಲಿಯ ಪ್ರಕ್ರಿಯೆಯನ್ನು ಅಭಿಯಾನದ ರೀತಿ ಕೈಗೊಳ್ಳುವುದು ಹಾಗೂ ಈಗಾಗಲೇ ಸರ್ಕಾರದಿಂದ ನೀಡಲಾದ ನಿಯಮಾನುಸಾರ ಆಸ್ತಿಯ ಸ್ಥಳಕ್ಕೆ ಅನುಸಾರವಾಗಿ ಪಿ.ಡಿ.ಒ ಟ್ಯಾಕ್ಸ ಬೇಡಿಕೆಯನ್ನು ನೀಡಬೇಕು ಎಂದು ಸೂಚಿಸಿದರು.
ಸಕಾಲ ಯೋಜನೆ ಯಡಿ ಕಾಲಮಿತಿ ಮೀರಿ ಬಾಕಿ ಉಳಿದ ಅರ್ಜಿಗಳನ್ನು ಮುಂದಿನ 2 ದಿನದಲ್ಲಿ ವಿಲೇವಾರಿ ಮಾಡಲು ಕ್ರಮಕೈಗೊಳ್ಳುವುದು ಯಾವುದೇ ಕಾರಣಕ್ಕೂ ಅರ್ಜಿಗಳನ್ನು ಕಾಲ ಮಿತಿ ಮೀರಿ ಬಾಕಿ ಉಳಿಸದಂತೆ ನೋಡಿಕೊಳ್ಳುವುದು ಒಂದು ಉಳಿದರೆ ಸಂಬಂಧ ಪಟ್ಟ ಸಿಬ್ಬಂದಿಗಳ ಮೇಲೆ ಶಿಸ್ತು ಕ್ರಮಕ್ಕಾಗಿ ವರದಿ ಸಲ್ಲಿಸುವುದು. ಪಿ.ಡಿ.ಐ ಪ್ರಕ್ರಿಯೆಯನ್ನು ಮುಂದಿನ ನಾಲ್ಕು ದಿನದಲ್ಲಿ ಪೂರ್ಣಗೊಳಿಸವುದು, ಕೂಸಿನಮನೆ, ನೆಲ ಜಲ ಮಿತ್ರ ಸರ್ವೇಗಳನ್ನು ಕೂಡಲೇ ಅಪಡೇಟ್ ಮಾಡಲು ಸೂಚಿಸಿದರು.
ಜಿಲ್ಲೆಯಲ್ಲಿ ಸಂಪೂರ್ಣವಾಗಿ ಮಳೆ ಇನ್ನು ಪ್ರಾರಂಭವಾಗಿಲ್ಲ ಆದ್ದರಿಂದ ಜನರಿಗೆ ಮನರೇಗಾ ಯೋಜನೆಯಡಿ ಕಡ್ಡಾಯವಾಗಿ ಕೆಲಸ ನೀಡುವುದು. ಸಾಮಾಜಿಕ ಪರಿಶೋಧನೆಯಲ್ಲಿ ಎ.ಟಿ.ಆರ್. ಇತ್ಯರ್ಥಗೊಳಿಸುವುದು ಬಾಕಿ ಇದ್ದು, ವಾರಕ್ಕೆ ಎರಡು ಬಾರಿ ಅಡಾಕ್ ಸಮಿತಿ ಸಭೆಗಳನ್ನು ಮಾಡುವುದರ ಮೂಲಕ ಪ್ರಕರಣಗಳನ್ನು ಮುಕ್ತಾಯಗೊಳಿಸುವುದು. ಪ್ರತಿ ಹೊಬಳಿಗೆ ಒಂದರಂತೆ ಗ್ರಾಮೀಣ ಸಂತೆ ಕಾಮಗಾರಿಳ ಸ್ಥಳ ಗುರುತಿಸಿ ಒಂದು ವಾರದೊಳಗಾಗಿ ಕ್ರಿಯಾ ಯೋಜನೆಯನ್ನು ಜಿಲ್ಲಾ ಪಂಚಾಯತಿಗೆ ಸಲ್ಲಿಸಲು ಕ್ರಮವಹಿಸುವಂತೆ ಎಂದು ನಿರ್ದೇಶನ ನೀಡಿದರು.
ಸ್ವಚ್ಛ ಭಾರತ ಮಿಷನ್ ಯೋಜನೆಗೆ ಸಂಬಂಧಿಸಿದಂತೆ SWM ಸಂಬಂಧಿಸಿದಂತೆ ಪ್ರತಿ ಗ್ರಾಮ ಪಂಚಾಯತಿಗಳಲ್ಲಿ ಪ್ರತಿ ದಿನ ಕಸ ನಿರ್ವಹಣೆ ಕಾರ್ಯ ಪ್ರಗತಿಯಲ್ಲಿರುಬೇಕು. ದ್ರವ ತ್ಯಾಜ್ಯ ನಿರ್ವಹಣೆ ಘಟಕಗಳ ಸ್ಥಗಿತಗೊಂಡ ಕಾಮಗಾರಿಗಳನ್ನು ಪ್ರಾರಂಭಮಾಡಿ ಆದಷ್ಟು ಬೇಗ ಮುಕ್ತಾಯಗೊಳಿಸುವುದು ಹಾಗೂ ವೈಯಕ್ತಿಕ ಶೌಚಾಲಯದ ಪ್ರಗತಿ ಸಾಧಿಸಲು ಸೂಚಿಸಿದರು.
ಈ ಸಂದರ್ಭದಲ್ಲಿ ಜಿ. ಪಂ ಉಪಕಾರ್ಯದರ್ಶಿ (ಆಡಳಿತ) ಬಸವರಾಜ ಹೆಗ್ಗನಾಯಕ್, ಉಪಕಾರ್ಯದರ್ಶಿ (ಅಭಿವೃದ್ಧಿ) ಬಸವರಾಜ ಅಡವಿಮಠ, ಯೋಜನಾ ನಿರ್ದೇಶಕ (ಡಿ.ಆರ್.ಡಿ.ಎ) ರವಿ ಎನ್ ಬಂಗಾರೆಪ್ಪನವರ, , ಮುಖ್ಯ ಯೋಜನಾಧಿಕಾರಿ ಗಂಗಾಧರ ದಿವಟರ ಜಿಲ್ಲೆಯ ಎಲ್ಲ ತಾಪಂ ಕಾರ್ಯನಿರ್ವಾಹಕ ಅಧಿಕಾರಿಗಳು, ಸಹಾಯಕ ನಿರ್ದೇಶಕರು ಗ್ರಾಮೀಣ ಉದ್ಯೋಗ ಹಾಗೂ ಪಂಚಾಯತ್ ರಾಜ್ ಹಾಗೂ ಜಿ.ಪಂ. ಸಿಬ್ಬಂದಿ ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ