Kannada NewsKarnataka NewsLatest

ಅಂಗಡಿ ಕಾಲೇಜಿನಲ್ಲಿ ಸಮಗ್ರ ತ್ಯಾಜ್ಯ ನಿರ್ವಹಣೆ ಕಾರ್ಯಗಾರ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಪ್ರಾಧ್ಯಾಪಕರು ತಾಂತ್ರಿಕ ಕೌಶಲ್ಯ ಕಾರ್ಯಾಗಾರಗಳಿಂದ ಸಮಗ್ರ ಅಧ್ಯಯನ ಮಾಡಿ ಸಮಾಜಕ್ಕೆ ಸೇವೆ ಸಲ್ಲಿಸಬೇಕಲ್ಲದೇ ವಿದ್ಯಾರ್ಥಿಗಳಿಗೆ, ಉದ್ದಿಮೆದಾರರಿಗೆ ಬೆಳೆಯಲು ಮೇಕ್ ಇನ್ ಇಂಡಿಯಾ, ಸ್ಟಾರ್ಟ ಅಪ್ ಕಾರ್ಯಕ್ರಮಗಳಲ್ಲಿ ಭಾಗವಹಿಸಲು ತಯಾರು ಮಾಡಬೇಕು. ವಿದ್ಯಾರ್ಥಿಗಳ ನಿರುದ್ಯೋಗ ಸಮಸ್ಯೆಗಳನ್ನು ಬಗೆಹರಿಸಲು ಪೂರೈಕೆ ಹಾಗೂ ಸರಬರಾಜನ್ನು ಸರಿಯಾಗಿ ನಿರ್ವಹಿಸಬೇಕು. ಎ.ಐ.ಸಿ.ಟಿ.ಇ. ಹಾಗೂ ಐ.ಎಸ್.ಟಿ.ಇ. ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಪರಿಣಿತಿಯನ್ನು ಪಡೆಯಲು ಮಾರ್ಗದರ್ಶನ ನೀಡಬೇಕೆಂದು ಐ.ಎಸ್.ಟಿ.ಇ. ಕಾರ್ಯಕಾರಿ ನಿರ್ದೇಶಕ ಪ್ರೊ. ವಿಜಯ ವೈದ್ಯ ತಿಳಿಸಿದರು.
ಅವರು ನಗರದ ಅಂಗಡಿ ತಾಂತ್ರಿಕ ಮತ್ತು ವ್ಯವಸ್ಥಾಪನಾ ಮಹಾವಿದ್ಯಾಲಯದಲ್ಲಿ ದಿನಾಂಕ ೨೪ ರಂದು ದೆಹಲಿಯ ಎ.ಐ.ಸಿ.ಟಿ.ಇ. ಹಾಗೂ ಐ.ಎಸ್.ಟಿ.ಇ. ಇವರ ಪ್ರಾಯೋಜಕತ್ವದಲ್ಲಿ ನಡೆದ ಆರು ದಿನಗಳ “ಸಮಗ್ರ ತ್ಯಾಜ್ಯ ನಿರ್ವಹಣೆ-೨” ಆನ್‌ಲೈನ್ ಕಾರ್ಯಾಗಾರದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಅಧ್ಯಕ್ಷತೆಯನ್ನು ವಹಿಸಿದ್ದ ಸಂಸ್ಥೆಯ ನಿರ್ದೇಶಕಿ ಡಾ. ಸ್ಪೂರ್ತಿ ಪಾಟೀಲ ಮಾತನಾಡುತ್ತ, ಸಮಗ್ರ ತ್ಯಾಜ್ಯ ನಿರ್ವಹಣೆ ನಿರ್ವಹಿಸುವುದರ ಬಗ್ಗೆ ಪ್ರಾಧ್ಯಾಪಕರು ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಸಮಾಜ ಸ್ವಾಸ್ಥ್ಯ, ಪರಿಸರ ಕಾಳಜಿ ನಿರ್ವಹಣೆ ಬಗ್ಗೆ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಬೇಕೆಂದು ಸೂಚಿಸಿದರು.
ಪ್ರಾಚಾರ್ಯ ಡಾ. ಆನಂದ ದೇಶಪಾಂಡೆ ಮಾತನಾಡುತ್ತ ಯಾವುದೇ ತಾಜ್ಯದಿಂದ ಹೊಸ ಪೂರೈಕೆಗಳನ್ನು ಮರುಉಪಯೋಗ, ಮರುಬಳಕೆ ಮಾಡಬೇಕೆಂದು ತಿಳಿಸಿದರು.
ಬೆಂಗಳೂರಿನ ಪ್ರಕೃತಿ ಪರಿಸರ ಸಂಸ್ಥೆ ಅಧಿಕಾರಿ ಡಿ.ಆರ್. ಕುಮಾರಸ್ವಾಮಿ ಬಯೋಮೆಡಿಕಲ್ ವೇಸ್ಟ ವಿಷಯದ ಬಗ್ಗೆ ಹಾಗೂ ಡಾ. ನಾಗಪ್ಪ “ಕ್ವಾಂಟಿಫಿಕೇಶನ್ ಆಫ್ ಎರ್ ಪೊಲ್ಯುಟಂಟ್ಸ” ವಿಷಯದ ಬಗ್ಗೆ ಪ್ರಾತ್ಯಕ್ಷತೆ ಮೂಲಕ ವಿವರಣೆ ನೀಡಿದರು.
ಸಂಯೋಜನಾಧಿಕಾರಿ ಡಾ. ಬಿ.ಟಿ. ಸುರೇಶ ಬಾಬು ಕಾರ್ಯಾಗಾರದ ಬಗ್ಗೆ ವಿವರಿಸಿದರು. ಡಾ. ಸಂಜಯ ಪೂಜಾರಿ, ಪ್ರೊ. ಅಮರ ಬ್ಯಾಕೋಡಿ, ಪ್ರೊ. ನೂರಅಹ್ಮದ ಹೊಸಮನಿ, ಪ್ರೊ. ಗೋಪಾಲ ಸುರಪಳ್ಳಿ, ಪ್ರೊ. ಮಹಬೂಬ ಹಂಚಿನಾಳ, ಪ್ರೊ. ಪುಟ್ಟವ್ವ ಪಮ್ಮಾರ, ಪ್ರೊ. ಸಾಗರ ಬೆಳಗಾಂವಕರ, ಪ್ರೊ. ಅಶೋಕ ಹಿಪ್ಪರಗಿ, ವೈಶಾಲಿ ಖಾನಾಪುರ ಸೇರಿದಂತೆ ಎಲ್ಲ ವಿಭಾಗಗಳ ಮುಖ್ಯಸ್ಥರು ಹಾಗೂ ಪ್ರಾಧ್ಯಾಪಕರು ಉಪಸ್ಥಿತರಿದ್ದರು.
ಸಿವ್ಹಿಲ್ ಇಂಜನೀಯರಿಂಗ್ ವಿಭಾಗದ ಮುಖ್ಯಸ್ಥ ಪ್ರೊ. ಎಂ.ವಿ. ಕಂಠಿ ಸ್ವಾಗತಿಸಿದರು. ಪ್ರೊ. ವಿನೋದ ಸುಳೆಭಾವಿ ಹಾಗೂ ಪ್ರೊ. ತೇಜಸ್ವಿನಿ ಜೋತಾವರ ನಿರೂಪಿಸಿದರು. ಪ್ರೊ. ಗೋಪಾಲ ಸುರಪಳ್ಳಿ ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button