ಕಾಂಕ್ರಿಟ್ ಫ್ರಾಮ್ ಗ್ರೇ ಟೂ ಗ್ರೀನ್ ತಾಂತ್ರಿಕ ಚರ್ಚೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ –
ಚಿಕ್ಕೋಡಿಯ ಕೆ. ಎಲ್. ಇ. ಇಂಜಿನಿಯರಿಂಗ್ ಕಾಲೇಜಿನ ಸಿವಿಲ್ ವಿಭಾಗದ ಅಸೊಸಿಯೇಶನ್ ಆಫ್ ಸಿವಿಲ್ ಇಂಜಿನಿಯರಿಂಗ್ ಸಹಭಾಗಿತ್ವದೊಂದಿಗೆ ವಿದ್ಯಾರ್ಥಿಗಳಿಗೆ ಕಾಂಕ್ರಿಟ್ ಫ್ರಾಮ್ ಗ್ರೇ ಟೂ ಗ್ರೀನ್ ತಾಂತ್ರಿಕ ಚರ್ಚೆ ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಕ್ರಮದ ಮುಖ್ಯ ಅತಿಥಿಗಳು ಹಾಗೂ ಸಂಪನ್ಮೂಲ ವ್ಯಕ್ತಿಗಳಾಗಿ ಆಗಮಿಸಿದ್ದ ಡಾ.ರಾಜೇಶಕುಮಾರ ಜಿ., ಪ್ರೊಫೆಸರ್, ಎನ್ ಐ ಟಿ, ವಾರಂಗಲ್ ಮಾತನಾಡಿ –
ಪರಿಸರ ಸಂರಕ್ಷಣೆ ಪ್ರತಿಯೊಬ್ಬ ಸಿವಿಲ್ ಇಂಜಿನಿಯರ್ ಅಧ್ಯ ಕರ್ತವ್ಯ. ಪರಿಸರಸ್ನೇಹಿ ಸಮರ್ಥ ಕಟ್ಟಡ ನಿರ್ಮಾಣಕ್ಕೆ ಆದ್ಯತೆ ನೀಡಬೇಕೆಂದರು. ಜೊತೆಗೆ ಗ್ರೀನ್ ಬಿಲ್ಡಿಂಗ್ ಕುರಿತು ಜನರಲ್ಲಿ ಜಾಗೃತಿ ಮುಡಿಸಬೇಕೆಂದರು.
ಇಂದು ನಾವು ಸಿಮೆಂಟ್ ಕಾಂಕ್ರಿಟ್‌ನ್ನು ದಿನನಿತ್ಯದ ಜೀವನದಲ್ಲಿ ಕಟ್ಟಡಗಳ ನಿರ್ಮಾಣಕ್ಕಾಗಿ ಹೆಚ್ಚಾಗಿ ಬಳಸಿಕೊಳ್ಳುತ್ತಿದ್ದೇವೆ. ಆದರೆ ಅದರ ಮರುಬಳಕೆ ಮಾಡಿಕೊಳ್ಳಲೂ ಸಾಧ್ಯವಾಗುತ್ತಿಲ್ಲ. ಹೆಚ್ಚಿನ ಪ್ರಮಾಣದಲ್ಲಿ ಕಾರ್ಖಾನೆಗಳಲ್ಲಿ ಸಿಮೆಂಟ್ ಉತ್ಪಾದಿಸುತ್ತಿದ್ದು, ಅವು ಉಗುಳುವ ಇಂಗಾಲದ ಡೈ ಆಕ್ಸೈಡ್ ನಿಂದಾಗಿ ಪರಿಸರ ಮಾಲಿನ್ಯ ಹೆಚ್ಚಾಗುತ್ತಿದೆ.
ಅದಕ್ಕಾಗಿ ನಾವು ಕಾಂಕ್ರೀಟ್ ದಕ್ಷತೆ ಪ್ರಮಾಣ ಹೆಚ್ಚಿಸುವುದು ಹಾಗೂ ಪರಿಸರ ಸ್ನೇಹಿ ಸಲಕರಣೆಗಳನ್ನು ಉಪಯೋಗಿಸುವುದು ಅನಿವಾರ್ಯವಾಗಿದೆ. ಕಟ್ಟಡ ನಿರ್ಮಾಣದಲ್ಲಿ ಇಟ್ಟಿಗೆ, ಸಿಮೆಂಟ್‌ಗೆ ಬದಲಿಯಾಗಿ ಪರಿಸರಸ್ನೇಹಿ ಸಲಕರಣೆಗಳನ್ನು ಬಳಸುವತ್ತ ಗಮನಹರಿಸಲೂ ಸಲಹೆ ನೀಡಿದರು. ರೆಡೂಸ್, ರೀ-ಯುಜ್, ರೀಸೈಕಲ್ ತತ್ವವನ್ನು ಅಳವಡಿಸಿಕೊಳ್ಳಲೂ ಸೂಚಿಸಿದರು.
ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಡಾ. ಪ್ರಸಾದ ರಾಂಪೂರೆ ಪ್ರಾಸ್ತಾವಿಕವಾಗಿ ಮಾತನಾಡಿ –
ಕಾಲೇಜಿನಲ್ಲಿ ಎರ್ಪಡಿಸುವ ಈ ಎಲ್ಲ ತಾಂತ್ರಿಕ ಕಾರ್ಯಕ್ರಮಗಳಲ್ಲಿ ಸಕ್ರೀಯವಾಗಿ ಪಾಲ್ಗೊಂಡು ಸೈದ್ಧಾಂತಿಕ ಹಾಗೂ ಪ್ರಾಯೋಗಿಕ ಜ್ಞಾನ ಹೆಚ್ಚಿಸಿಕೊಳ್ಳಲು ಸಲಹೆ ನೀಡಿದರು. ಇಂಜೀನಿಯರಿಂಗ್‌ನಲ್ಲಿ ಸಿವಿಲ್ ವಿಭಾಗ ಅದ್ಭುತವಾಗಿದ್ದು, ೪ ವರ್ಷಗಳ ಕಲಿಕೆಯ ಅವಧಿಯಲ್ಲಿ ಕಾಲೇಜಿನಲ್ಲಿ ಒದಗಿಸಿರುವ ಎಲ್ಲ ಸೌಲಭ್ಯಗಳನ್ನು ಬಳಸಿಕೊಂಡು ಎಲ್ಲ ವಿಷಯಗಳನ್ನು ಸಮಗ್ರವಾಗಿ ತಿಳಿದುಕೊಳ್ಳಬೇಕು ಎಂದರು.
ಡಾ. ಎಮ್. ಬಿ. ಪಾಟೀಲ, ಪ್ರೊಫೆಸರ್ / ವಿಭಾಗ ಮುಖ್ಯಸ್ಥರು, ಸಿವಿಲ್ ವಿಭಾಗ, ಸರ್ಕಾರಿ ಎಸ್.ಕೆ.ಎಸ್.ಜೆ.ಟಿ.ಐ, ಬೆಂಗಳೂರು ಇವರು ಭೂಕಂಪನ ನಿರೋಧಕ ರಚನಾ ವಿನ್ಯಾಸ ಕುರಿತು ಮಾತನಾಡಿದರು.
ವಿಭಾಗ ಮುಖ್ಯಸ್ಥರಾದ ಪ್ರೊ. ವಿವೇಕ ಪಾಟೀಲ ಸ್ವಾಗತಿಸಿದರು. ಸಿಫಾ ಪಟ್ಟೆಕರ ಅತಿಥಿಯನ್ನು ಪರಿಚಯಿಸಿದರು. ಶಿಲ್ಪಾ ವಾರದ ನಿರೂಪಿಸಿದರು. ಪ್ರೊ. ಸವೀತಾ ಮಾಳಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ