Latest

ಮಹಿಳೆ ತಲೆ ಗಾಯಕ್ಕೆ ಕಾಂಡೋಮ್ ಪ್ಯಾಕ್ ಸುತ್ತಿದ ಆಸ್ಪತ್ರೆ ಸಿಬ್ಬಂದಿ

ಪ್ರಗತಿವಾಹಿನಿ ಸುದ್ದಿ, ಭೋಪಾಲ್: ಮಹಿಳೆಯೊಬ್ಬಳ ತಲೆಗೆ ಬಿದ್ದ ಏಟಿಗೆ ಬ್ಯಾಂಡೇಜ್ ಕಟ್ಟುವ ಸಂದರ್ಭದಲ್ಲಿ  ಹತ್ತಿಯೊಂದಿಗೆ ಕಾಂಡೋಮ್ ಪ್ಯಾಕ್ ಬಳಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದ್ದು ಪ್ರಕರಣದಲ್ಲಿ ಡ್ರೆಸ್ಸರ್ ತಲೆದಂಡವಾಗಿದೆ.

ತಲೆಗೆ ತೀವ್ರ ಏಟು ಬಿದ್ದಿದ್ದ ಮಹಿಳೆ ಪೋರ್ಸಾದ ಆಸ್ಪತ್ರೆಗೆ ತೆರಳಿದ್ದರು. ಈ ವೇಳೆ ಅಲ್ಲಿನ ಡ್ರೆಸ್ಸರ್ ಹತ್ತಿ ಜೊತೆ ಕಾಂಡೋಮ್ ಪ್ಯಾಕ್ ಕೂಡ ತಲೆಗೆ ಹಾಕಿ ಸುತ್ತಿದ್ದಾರೆ.

ಬ್ಯಾಂಡೇಜ್ ಬಿಡಿಸಿಕೊಳ್ಳಲು ಹೋದಾಗ ಈ ವಿಷಯ ಬೆಳಕಿಗೆ ಬಂದಿದೆ. ಈ ಸಂಬಂಧ ಪೋರ್ಸಾ ಆಸ್ಪತ್ರೆಯ ಡ್ರೆಸ್ಸರ್ ನನ್ನು ಅಮಾನತುಗೊಳಿಸಲಾಗಿದೆ.

ಕಾಂಡೋಮ್ ಅಷ್ಟೇ ಅಲ್ಲ, ಸಂದರ್ಭ ಬಂದರೆ ಅದರ ಪ್ಯಾಕ್ ಕೂಡ ಹೇಗೆಲ್ಲ ಬಳಕೆ ಮಾಡಬಹುದು ಎಂಬುದನ್ನು ಈ ಆಸ್ಪತ್ರೆಯ ಡ್ರೆಸ್ಸರ್ ತೋರಿಸಿಕೊಟ್ಟಂತಾಗಿದೆ !

ಅಥಣಿ ಶಾಲಾ ಬಸ್ ಅಪಘಾತ; 56 ಜನರಿಗೆ ಗಾಯ; ಇಬ್ಬರ ಸ್ಥಿತಿ ಗಂಭೀರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button