Latest

*ಬೇಲ್ ಪಡೆದು ನಾಪತ್ತೆ ಆಗಿದ್ದ ಆರೋಪಿ ಅರೆಸ್ಟ್*

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನ್ಯಾಯಾಲಯದಿಂದ ಜಾಮೀನು ಪಡೆದು ಕಳೆದ 2 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿಯನ್ನು ಬೆಳಗಾವಿಯ ಎಪಿಎಂಸಿ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬೆಳಗಾವಿ ನಗರ ಪೊಲೀಸ್ ಕಮೀಷನರೇಟ್‌ಗೆ ಸಂಬಂಧಿಸಿದ ವಿವಿಧ ಪ್ರಕರಣಗಳಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಗಳನ್ನು ಪತ್ತೆ ಮಾಡುವಂತೆ ಪೊಲೀಸ್ ಆಯುಕ್ತರು ವಿಶೇಷ ಕಾರ್ಯಾಚರಣೆ ಕೈಕೊಳ್ಳಲು ಆದೇಶಿಸಿದರು‌. ಅದರಂತೆ ಎಪಿಎಂಸಿ ಪೊಲೀಸ್ ಠಾಣೆ ಅಪರಾಧ ಸಂಖ್ಯೆ-55/2022 ಕಲಂ-20(ಬಿ)(1)ಬಿ ಎನ್‌ಡಿಪಿಎಸ್ ಪ್ರಕರಣದಲ್ಲಿರುವ ಆರೋಪಿಯಾದ ನಯೀಮ ಅಬ್ಬಾಸ ಕೋಜಾ ಸಾಂಟಿಪ್ಪು ಪ್ರಕರಣ ದಾಖಲಾದ ನಂತರ ಜಾಮೀನು ಪಡೆದುಕೊಂಡು ಸುಮಾರು 2 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ಬೇರೆ ಬೇರೆ ರಾಜ್ಯಗಳಲ್ಲಿ ತಲೆಮರೆಸಿಕೊಂಡು ತಿರುಗಾಡುತ್ತಿದ್ದ. ಖಚಿತ ಮಾಹಿತಿ ಪಡೆದ ಎಪಿಎಂಸಿ ಠಾಣಾ ಪೊಲೀಸರು ವಿಶೇಷ ತಂಡ ರಚಿಸಿ ಆರೋಪಿಯನ್ನು ಅರೆಸ್ಟ್ ಮಾಡಿ ಮತ್ತೆ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದಾರೆ.

Home add -Advt

ಈ ಪ್ರಕರಣದಲ್ಲಿ ವಿಶೇಷ ಕರ್ತವ್ಯಪ್ರಜ್ಞೆ ತೋರಿದ ಪೊಲೀಸ್ ಇನ್ಸ್‌ಪೆಕ್ಟರ್ ವಿಶ್ವನಾಥ ಕಬ್ಬರಿ, ಪಿಎಸ್‌ಐಗಳಾದ ಮಂಜುನಾಥ ಭಜಂತ್ರಿ, ಹಾಗೂ ಸಿಬ್ಬಂದಿಗಳಾದ ಬಿ ಕೆ ಮಿಟಗಾರ, ಎಎಸ್‌ಐ, ಎನ್ ಎಂ ದೇಸಾಯಿ ಬಿ ಎಂ ನರಗುಂದ, ಖಾದರ ಖಾನಮ್ಮನವರ ಗೋವಿಂದ ಪೂಜಾರಿ, ಎನ್ ಡಿ ಬಿರಗೊಂಡ ರವರನ್ನು ಹಿರಿಯ ಅಧಿಕಾರಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Related Articles

Back to top button