Latest

ಬೆಳಗಾವಿಯಲ್ಲಿ ಇಂದು ಕಾಂಗ್ರೆಸ್ ಫ್ಯಾಕ್ಟ್ ಫೈಂಡಿಂಗ್ ಕಮಿಟಿ ಸಭೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಕಳೆದ ಲೋಕಸಭಾ ಚುನಾವಣೆಯಲ್ಲಿ ಪಕ್ಷದ ಸೋಲಿಗೆ ಕಾರಣವಾದ ಅಂಶಗಳನ್ನು ಪತ್ತೆ ಹಚ್ಚಲು ಕಾಂಗ್ರೆಸ್ ನೇಮಿಸಿರುವ ಫ್ಯಾಕ್ಟ್ ಫೈಂಡಿಂಗ್ ಸಮಿತಿ ಶನಿವಾರ ಬೆಳಗಾವಿಗೆ ಆಗಮಿಸಿದ್ದು, ಕಾಂಗ್ರೆಸ್ ಭವನದಲ್ಲಿ ಸಭೆ ನಡೆಸುತ್ತಿದೆ.

 ಮುಜಾನೆ 09:30ಕ್ಕೆ ಬೆಳಗಾವಿ ಗ್ರಾಮೀಣ ಜಿಲ್ಲಾ ಕಾಂಗ್ರೆಸ ಸಮಿತಿಯ “ಕಾಂಗ್ರೆಸ ಭವನ”ದಲ್ಲಿ ಬೆಳಗಾವಿ ಲೋಕಸಭಾ ಕ್ಷೇತ್ರದ ಚುನಾವಣೆ ಪಲಿತಾಂಶದ ಪರಾಮರ್ಶೆಯ ಸತ್ಯ ಶೋಧನಾ ಸಭೆಯನ್ನು ಹಮ್ಮಿಕೊಳ್ಳಲಾಗಿದೆ.

Related Articles

ಈ ಸಭೆಯಲ್ಲಿ ಕೆಪಿಸಿಸಿ ಕಾರ್ಯಧ್ಯಕ್ಷರಾದ ವಿನಯ ಕುಲಕರ್ಣಿರವರು ಶಾಸಕರು, ಅಧ್ಯಕ್ಷರು, ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳ ಚರಂಡಿ ಮಂಡಳಿ, ಬೆಂಗಳೂರು, ಹಾಗೂ ಬೆಳಗಾವಿ ವಿಭಾಗದ ಸತ್ಯ ಶೋಧನಾ ಸಮಿತಿಯ ಅಧ್ಯಕ್ಷರಾದ ಅಪ್ಪಾಜಿ ಸಿ. ಎಸ್. ನಾಡಗೌಡರವರು, ಶಾಸಕರು, ಅಧ್ಯಕ್ಷರು. ಕೆ.ಎಸ್.& ಡಿ.ಎಲ್ ಬೆಂಗಳೂರು ಹಾಗೂ ತಂಡದ ಇತರ ಸದಸ್ಯರುಗಳು ಉಪಸ್ಥಿತರಿರುವರು.

ಈ ಸಭೆಗೆ ಸಚಿವರು, ಶಾಸಕರು, ಮಾಜಿ ಶಾಸಕರು, ವಿ-ಪ ಸದಸ್ಯರು, ಮಾಜಿ ವಿ-ಪ ಸದಸ್ಯರು, 2023ರ ವಿಧಾನ ಸಭೆಯ ಅಭ್ಯರ್ಥಿಗಳು, 2024 ಅಭ್ಯರ್ಥಿ, ಜಿಲ್ಲಾ ಪದಾಧಿಕಾರಿಗಳು, ಕೆಪಿಸಿಸಿ ಪದಾಧಿಕಾರಿಗಳು/ ಸದಸ್ಯರುಗಳು, ಬ್ಲಾಕ್ ಅಧ್ಯಕ್ಷರುಗಳು, ಮುಂಚೂಣಿ ಘಟಕಗಳ ಅಧ್ಯಕ್ಷರುಗಳು ಜಿಲ್ಲಾ/ತಾಲೂಕಾ ಪಂಚಾಯತ ಮಾಜಿ ಸದಸ್ಯರುಗಳು ಹಾಗೂ ನಗರ/ಪುರಸಭೆ/ಪ.ಪಂಚಾಯತ ಸದಸ್ಯರುಗಳನ್ನು ಆಹ್ವಾನಿಸಲಾಗಿದೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button