ಗರಿಬ್ ಕಲ್ಯಾಣ ಹೆಸರಲ್ಲಿ ಕಾಂಗ್ರೇಸ್ ಪ್ರಚಾರ ಪಡೆದಿದೆ, ಬಿಜೆಪಿ ಕೆಲಸ ಮಾಡಿ ತೋರಿಸಿದೆ – ಮುರುಗೇಶ ನಿರಾಣಿ


ಪ್ರಗತಿವಾಹಿನಿ ಸುದ್ದಿ, ಬೀಳಗಿ: ಗರಿಬ್ ಕಲ್ಯಾಣ ಹೆಸರಲ್ಲಿ ಕಾಂಗ್ರೇಸ್ ಪ್ರಚಾರ ಪಡೆದಿದೆ, ಬಿಜೆಪಿ ಕೆಲಸ ಮಾಡಿ ತೋರಿಸಿದೆ. ಸರ್ವ ಜನಾಂಗಗಳ ಕಲ್ಯಾಣ ಬಿಜೆಪಿಯಿಂದ ಮಾತ್ರ ಸಾಧ್ಯ ಎಂದು ಸಚಿವ ಮುರುಗೇಶ ನಿರಾಣಿ ಹೇಳಿದ್ದಾರೆ.


ಬೀಳಗಿ ಮತಕ್ಷೇತ್ರದ ಸರ್ವಾಂಗೀಣ ಅಭಿವೃದ್ದಿಗೆ ಶ್ರಮಿಸಿದ್ದೇನೆ ದಾಖಲೆಯ ಮತಗಳಿಂದ ಗೆಲ್ಲುವ ವಿಶ್ವಾಸವಿದೆ. ಕಳೆದ ೫ ವರ್ಷಗಳ ಅವಧಿಯಲ್ಲಿ ಬೀಳಗಿ ಕ್ಷೇತ್ರದಲ್ಲಿ ಕೈಗೊಂಡ ಅಭಿವೃದ್ಧಿ ಕಾರ್ಯಗಳು ಎಲ್ಲ ಸ್ಥರದ ಜನತೆಯನ್ನು ಮುಟ್ಟಿವೆ. ಬೀಳಗಿ ಪಟ್ಟಣದ ಮೂಲಭೂತ ಸೌಕರ್ಯ ಅಭಿವೃದ್ದಿಗೆ ಅಗತ್ಯ ಕ್ರಮಗಳನ್ನು ಕೈಗೊಂಡ ಫಲವಾಗಿ ಪಟ್ಟಣ ಅಭಿವೃದ್ದಿಯಿಂದ ಕಂಗೊಳಿಸುತ್ತಿದೆ ಎಂದು ಅವರು ಹೇಳಿದರು.


ಬೀಳಗಿ ಪಟ್ಟಣದ ವಿವಿಧ ವಾರ್ಡುಗಳಲ್ಲಿ ಮನೆ ಮನೆಗೆ ತೆರಳಿ ಪ್ರಚಾರ ನಡೆಸಿದ ನಂತರ ಕಾರ್ಯಕರ್ತರು ಹಾಗೂ ಪಟ್ಟಣದ ನಾಗರಿಕರ ಸಭೆಯನ್ನು ಉದ್ದೇಶಿಸಿ ಮಾತನಾಡಿದ ಅವರು ಪಟ್ಟಣದ ೨೪/೭ ಕುಡಿಯುವ ನೀರಿನ ಸೌಕರ್ಯಕ್ಕಾಗಿ ೪೦ ಕೋಟಿ ವೆಚ್ಚದಲ್ಲಿ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ. ಡಿವೈಡರ್ ರಸ್ತೆ, ಬೀದಿದೀಪ, ದೇವಸ್ಥಾನಗಳ ಜೀರ್ಣೋದ್ಧಾರ ಹೀಗೆ ಜನತೆಗೆ ಕಲ್ಪಿಸಬೇಕಾದ ಎಲ್ಲ ಸೌಕರ್ಯಗಳನ್ನು ಈ ೫ ವರ್ಷಗಳ ಅವಧಿಯಲ್ಲಿ ನೀಡಲಾಗಿದೆ. ಈ ಬಾರಿಯ ಮತ ಅಭಿವೃದ್ಧಿಗೆ ಮೀಸಲಿಟ್ಟು, ಬಿಜೆಪಿ ಬೆಂಬಲಿಸುವ ಮೂಲಕ ಮತ್ತೊಮ್ಮೆ ಆಶಿರ್ವದಿಸಿ ಗೆಲ್ಲಿಸಬೇಕೆಂದು ವಿನಂತಿಸಿಕೊಂಡರು.
ಕಾಂಗ್ರೇಸ್-ಜೆಡಿಎಸ್ ಪಕ್ಷಗಳು ರಾಜ್ಯದ ಅಭಿವೃದ್ದಿಗೆ ಮಾರಕವಾಗಿವೆ. ಯಡಿಯೂರಪ್ಪ ಹಾಗೂ ಬೊಮ್ಮಯಿ ನೇತೃತ್ವದಲ್ಲಿ ಕರ್ನಾಟಕದಲ್ಲಿ ಕಳೆದ ೪ ವರ್ಷ ಸುಸ್ಥಿರ ಸರ್ಕಾರ ನೀಡಿದ್ದೇವೆ. ರೈತರು, ಮಹಿಳೆಯರು, ಯುವಕರು ಹಾಗೂ ಶ್ರಮಿಕರ ಕಲ್ಯಾಣಕ್ಕಾಗಿ ದುಡಿದಿದ್ದೇವೆ. ಕಾಂಗ್ರೇಸ್ ಕೇವಲ ಗರೀಬ್ ಕಲ್ಯಾಣ ಹೆಸರಿನಲ್ಲಿ ಕೇವಲ ಪ್ರಚಾರ ಪಡೆದಿದೆ. ಇದನ್ನು ಅರಿತು ಸರ್ವ ಜನಾಂಗದವರು ಬಿಜೆಪಿ ಬೆನ್ನಿಗೆ ನಿಲ್ಲುತ್ತಿದ್ದಾರೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಮಂಡಲ ಮಂಡಲ ಅಧ್ಯಕ್ಷ ಈರಣ್ಣ ಗಿಡ್ಡಪ್ಪನವರ ಮಲ್ಲಿಕಾರ್ಜುನ ಅಂಗಡಿ, ವಿಠ್ಠಲ ಬಾಗೇವಾಡಿ, ಬಿ. ಜಿ. ರೇವಡಿಗಾರ, ಶ್ರೀಶೈಲ ಉಪ್ಪಾರ, ಶ್ರೀಶೈಲ ದಳವಾಯಿ, ಸಿದ್ರಾಮ ಮುರನಾಳ ಪ್ರವೀಣ ಎಸ್. ಎಮ್. ಉಪಸ್ಥಿತರಿದ್ದರು.


ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜೈ ಕರ್ನಾಟಕ ಸಂಘದಿಂದ ಬಿಜೆಪಿಗೆ ಬೆಂಬಲ:
ಬೀಳಗಿ ತಾಲೂಕಾ ಕರ್ನಾಟಕ ರಕ್ಷಣಾ ವೇದಿಕೆ ಹಾಗೂ ಜೈ ಕರ್ನಾಟಕ ಸಂಘದಿಂದ ಮುರುಗೇಶ ನಿರಾಣಿಯವರ ಅಭಿವೃದ್ದಿ ಕಾರ್ಯಗಳನ್ನು ಮೆಚ್ಚಿ, ವಿ.ಪ. ಸದಸ್ಯ ಹಣಮಂತ ನಿರಾಣಿ ಹಾಗೂ ಸಂಗಮೇಶ ನಿರಾಣಿ ಸಮ್ಮುಖದಲ್ಲಿ ಬೀಳಗಿ, ಸುನಗ, ಸಿದ್ದಾಪೂರ, ಕೊರ್ತಿ ಗ್ರಾಮದ ಸಂಘಟನೆಗಳ ಅಧ್ಯಕ್ಷರು, ಪದಾಧಿಕಾರಿಗಳು, ಮಹಿಳಾ ಘಟಕದವರು ಹಾಗೂ ನೂರಾರು ಕಾರ್ಯಕರ್ತರು ಬಿಜೆಪಿ ಸೇರ್ಪಡೆಯಾದರು. ಅಲ್ಲದೇ ಬೀಳಗಿ ಪಟ್ಟಣ, ಚಿಕ್ಕ ಹಂಚಿನಾಳ ಸೇರಿದಂತೆ ವಿವಿಧ ಗ್ರಾಮಗಳ ಮುಖಂಡರು ವಿವಿಧ ಪಕ್ಷಗಳನ್ನು ತೊರೆದು ಬಿಜೆಪಿ ಸೇರ್ಪಡೆಯಾದರು.

https://pragati.taskdun.com/21st-century-modi-era-murugesha-nirani/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button