ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಗುಜರಾತ್ ನ ಖೇಡಾದಲ್ಲಿ ಪೊಲೀಸರು ಕೆಲವರ ಮೇಲೆ ನಡುಬೀದಿಯಲ್ಲಿ ಲಾಠಿ ಪ್ರಹಾರ ಮಾಡುತ್ತಿರುವ ವಿಡಿಯೊ ವೈರಲ್ ಆದ ಬೆನ್ನಿಗೇ ಕೇಂದ್ರ ಮಾಜಿ ಸಚಿವ, ಕಾಂಗ್ರೆಸ್ ನಾಯಕ ಪಿ. ಚಿದಂಬರಂ ಗುಜರಾತ್ ಪೊಲೀಸರ ವಿರುದ್ಧ ಕಿಡಿ ಕಾರಿದ್ದಾರೆ.
“ಮೊದಲು, ಬುಲ್ಡೋಜಿಂಗ್, ಈಗ, ಸಾರ್ವಜನಿಕವಾಗಿ ಥಳಿತ, ಇನ್ನು ಬಾಕಿ ಉಳಿದಿರುವುದು ನಡುಬೀದಿಯಲ್ಲಿ ಗಲ್ಲಿಗೇರಿಸುವ ಪ್ರಕ್ರಿಯೆಯೊಂದೇ ಎಂದು ಅವರು ಪ್ರತಿಕ್ರಿಯಿಸಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ಗಾರ್ಬಾ ಕಾರ್ಯಕ್ರಮವೊಂದರಲ್ಲಿ ಕಲ್ಲು ತೂರಾಟ ನಡೆಸಿದ್ದಾರೆ ಎನ್ನಲಾದ ಆರೋಪಿಗಳನ್ನು ಗುಜರಾತ್ ಪೊಲೀಸರು ನಡುಬೀದಿಯಲ್ಲಿ ಲಾಠಿಯಿಂದ ಥಳಿಸುತ್ತಿರುವ ದೃಶ್ಯದ ವಿಡಿಯೊ ವೈರಲ್ ಆಗಿತ್ತು.
ಇದಕ್ಕೆ ಅಸಮಾಧಾನ ವ್ಯಕ್ತಪಡಿಸಿರುವ ಪಿ. ಚಿದಂಬರಂ “ಯುಪಿ, ಅಸ್ಸಾಂ ಮತ್ತು ಈಗ ಗುಜರಾತ್‌ನಲ್ಲಿ ರಾಜ್ಯ ಪೊಲೀಸರು ನ್ಯಾಯಾಧೀಶರು, ಜ್ಯೂರಿ ಮತ್ತು ಹ್ಯಾಂಗ್‌ಮನ್‌ಗಳಾಗಿ ಮಾರ್ಪಟ್ಟಿದ್ದಾರೆ” ಎಂದು ಹೇಳಿದ್ದಾರೆ.
ಭಾರೀ ಪ್ರಮಾಣದ ಮಾದಕವಸ್ತು ವ್ಯವಹಾರ; ಸಿಕ್ಕಿಬಿದ್ದವರಲ್ಲಿ ಒಬ್ಬ ಏರ್ ಇಂಡಿಯಾ ಮಾಜಿ ಪೈಲಟ್ !
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ