Latest

ಭಾರೀ ಪ್ರಮಾಣದ ಮಾದಕವಸ್ತು ವ್ಯವಹಾರ; ಸಿಕ್ಕಿಬಿದ್ದವರಲ್ಲಿ ಒಬ್ಬ ಏರ್ ಇಂಡಿಯಾ ಮಾಜಿ ಪೈಲಟ್ !

ಪ್ರಗತಿವಾಹಿನಿ ಸುದ್ದಿ, ಮುಂಬೈ: ಗುಜರಾತ್ ಹಾಗೂ ಮುಂಬೈಯಲ್ಲಿ  NCB ನಡೆಸಿದ ದಾಳಿಯಲ್ಲಿ ಅಂದಾಜು 120 ಕೋಟಿ ರೂ. ಮೌಲ್ಯದ ಮಾದಕ ವಸ್ತುಗಳನ್ನು ಶುಕ್ರವಾರ ವಶಪಡಿಸಿಕೊಳ್ಳಲಾಗಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ 6 ಜನ ಆರೋಪಿತರನ್ನು ಬಂಧಿಸಿದ್ದು ಇವರಲ್ಲಿ ಒಬ್ಬಾತ ಏರ್ ಇಂಡಿಯಾದ ಮಾಜಿ ಪೈಲಟ್ ಎಂಬುದು ಗಮನಾರ್ಹ.

MD ಮಾದಕ ವಸ್ತುಗಳ ಸಾಗಣೆಯಾಗುತ್ತಿರುವ ಬಗ್ಗೆ ಗುಜರಾತ್ ನ ಜಾಮನಗರದ ನೌಕಾಪಡೆ ಗುಪ್ತಚರ ದಳ ನೀಡಿದ ಮಾಹಿತಿಯನ್ನಾಧರಿಸಿ ಗುಜರಾತ್ ನಲ್ಲಿ ನಾಲ್ವರನ್ನು ಬಂಧಿಸಿ 10.350 ಕೆಜಿ ಮಾದಕ ವಸ್ತು ವಶಪಡಿಸಿಕೊಂಡಿದ್ದು ಇವರಲ್ಲಿ ಈ ಪೈಲಟ್ ಕೂಡ ಸೇರಿದ್ದಾನೆ ಎಂದು NCB ಉಪ ಪ್ರಧಾನ ನಿರ್ದೇಶಕ ಎಸ್. ಕೆ. ಸಿಂಗ್ ತಿಳಿಸಿದ್ದಾರೆ.

ಆರೋಪಿ ಸೊಹೈಲ್ ಗಫಾರ್ 2016ರಿಂದ 2018ರವರೆಗೆ ಏರ್ ಇಂಡಿಯಾದಲ್ಲಿ ಪೈಲಟ್ ಆಗಿದ್ದ ಎಂದು ಅವರು ತಿಳಿಸಿದ್ದಾರೆ.

ಮುಂಬೈಯ ಇಬ್ಬರು ಆರೋಪಿಗಳನ್ನು ಬಂಧಿಸಿ ಗೋದಾಮು ಒಂದರಲ್ಲಿ ಸಂಗ್ರಹಿಸಿದ್ದ 50 ಕೆಜಿ ಮಾದಕ ವಸ್ತು ವಶಪಡಿಸಿಕೊಳ್ಳಲಾಯಿತು. ಶುಭಂ ಎಂಬಾತ ಇದರ ಕಿಂಗ್ ಪಿನ್ ಆಗಿದ್ದು ಇನ್ನಷ್ಟು ಜನ ಇದರಲ್ಲಿ ಶಾಮೀಲಾಗಿರುವ ಶಂಕೆ ಇದೆ. ಉಭಯ ರಾಜ್ಯಗಳಲ್ಲಿನ ದಾಳಿಯಲ್ಲಿ ಒಟ್ಟು 120 ಕೋಟಿ ಮೌಲ್ಯದ ಮಾದಕ ವಸ್ತು ವಶಪಡಿಸಿಕೊಳ್ಳಲಾಗಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ವಶಪಡಿಸಿಕೊಂಡ ಮಾದಕ ವಸ್ತುಗಳಲ್ಲಿ ಗಾಂಜಾ, ಚರಸ್ LSG ಪೇಪರ್ ಹಾಗೂ ಇತರ ಮಾದಕ ವಸ್ತುಗಳಿವೆ. ಬಂಧಿತ ಎಲ್ಲ ಆರೋಪಿತರು ಒಂದೇ ಸಾಮಾನ್ಯ ಜಾಲಕ್ಕೆ ಸೇರಿದವರಾಗಿದ್ದು ಆರೋಪಿಗಳಿಗೆ ನ್ಯಾಯಾಲಯ 2 ದಿನಗಳ ಅವಧಿಯ NCB ಕಸ್ಟಡಿ ವಿಧಿಸಿದೆ ಎಂದು ಸಿಂಗ್ ತಿಳಿಸಿದ್ದಾರೆ.

ಮದರಸಾಗೆ ನುಗ್ಗಿ ದುರ್ಗಾ ಪೂಜೆ ನೆರವೇರಿಸಿದ ಗುಂಪು

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button