
ಪ್ರಗತಿವಾಹಿನಿ ಸುದ್ದಿ: ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ್ ಎಂಬಾತ ಬಾರ್ ನಲ್ಲಿ ಎಣ್ಣೆ ಕೊಟ್ಟಿಲ್ಲ ಎಂದು ಬಾರ್ ಒಳಗೆ ನುಗ್ಗಿ ಕ್ಯಾಷಿಯರ್ ಮೇಲೆ ಮನಸೋಇಚ್ಛೆ ಹಲ್ಲೆ ನಡೆಸಿರುವ ಘಟನೆ ನಡೆದಿದೆ.
ಕೋಪ್ಪ ನಗರದ ಶ್ರೀಗಂಧ ಬಾರ್ ಗೆ ಬಂದು ಎಣ್ಣೆ ಕೇಳಿದ್ದಾನೆ. ಆದರೆ ಕ್ಯಾಷಿಯರ್ ಎಣ್ಣೆ ಕೊಡಲು ಆಗುವುದಿಲ್ಲ ಎಂದು ಹೇಳಿದ್ದಾನೆ. ಇದರಿಂದ ಸಿಟ್ಟಾದ ವಿಜಯಾನಂದ ವಾಪಸ್ ಹೋಗಿದ್ದಾನೆ. ಆದರೆ ಮಾರನೇ ದಿನ ಬೆಳಗ್ಗೆ 10.30ರ ಸುಮಾರಿಗೆ ತನ್ನ ಪಟಾಲಂ ಗ್ಯಾಂಗ್ ಜೊತೆ ಬಂದು ಏಕಾಏಕಿ ಬಾರ್ ಒಳಗೆ ನುಗ್ಗಿ ಕ್ಯಾಶಿಯರ್ ಮೇಲೆ ಹಲ್ಲೆ ಮಾಡಿರುವ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿಡಿಯೋ ವೈರಲ್ ಆಗುತ್ತಿದ್ದಂತೆ ಚಿಕ್ಕಮಗಳೂರು ಎಸ್‌ಪಿ ವಿಕ್ರಮ್ ಅಮಟೆ ಸೂಚನೆ ಮೇರೆಗೆ ಯೂತ್ ಕಾಂಗ್ರೆಸ್ ಅಧ್ಯಕ್ಷ ವಿಜಯಾನಂದ್ ಸೇರಿದಂತೆ ಏಳು ಜನರ ವಿರುದ್ಧ ಕೊಪ್ಪ ಪೊಲೀಸ್ ಠಾಣೆಯಲ್ಲಿ ಸುಮೋಟೋ ಕೇಸ್ ದಾಖಲು ಮಾಡಲಾಗಿದೆ.