*ಪ್ರಧಾನಿ ಮೋದಿಗೆ ಪ್ರಶ್ನೆಗಳ ಸುರಿಮಳೆ; ಜಿಲ್ಲಾ, ತಾಲೂಕು ಮಟ್ಟದಲ್ಲಿ ಕಾಂಗ್ರೆಸ್ ಪ್ರತಿಭಟನೆ*
ಪ್ರಗತಿವಾಹಿನಿ ಸುದ್ದಿ: ನಾಳೆ ಪ್ರಧಾನಿ ನರೇಂದ್ರ ಮೋದಿ ರಾಜ್ಯಕ್ಕೆ ಆಗಮಿಸಲಿದ್ದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಅಬ್ಬರದ ಪ್ರಚಾರ ನಡೆಸಲಿದ್ದಾರೆ. ಈ ನಡುವೆ ರಾಜ್ಯ ಕಾಂಗ್ರೆಸ್ ಪ್ರಧಾನಿ ಮೋದಿ ವಿರುದ್ಧ ವಿನೂತನ ಪ್ರತಿಭಟನೆ ನಡೆಸಿದೆ.
ಜಿಲ್ಲಾ ಹಾಗೂ ತಾಲ್ಲೂಕು ಮಟ್ಟದಲ್ಲಿ ತುರ್ತು ಕಾರ್ಯಕ್ರಮದ ಮೂಲಕ ರಾಜ್ಯಕ್ಕೆ ಕೇಂದ್ರದಿದಂದ ಆಗಿರುವ ಅನ್ಯಾಯದ ಬಗ್ಗೆ ಪ್ರಶ್ನೆ ಮಾಡಿ ಪ್ರತಿಭಟಿಸುವಂತೆ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿ.ಕೆ.ಶಿವಕುಮಾರ್ ಕರೆ ನೀಡಿದ್ದಾರೆ. ಈ ಹಿನ್ನೆಲೆಯಲ್ಲಿ ಎಲ್ಲೆಡೆ ಪ್ರತಿಭಟನೆ ಮಾಡಿ ಮೋದಿಗೆ 22 ಪ್ರಶ್ನೆ ಕೇಳಿದ್ದಾರೆ.
ಪ್ರಸ್ತುತ ಲೋಕಸಭಾ ಚುನಾವಣಾ ಪ್ರಚಾರಕ್ಕಾಗಿ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿಯವರಿಗೆ ರಾಜ್ಯ ಸಂಸದರು ಇದುವರೆಗೂ ಕೇಳದೆ ಇರುವ ಪ್ರಶ್ನೆಗಳನ್ನು ನಾವು ಕೇಳಲಿದ್ದು ಇದಕ್ಕೆ ಪ್ರಧಾನಿಯವರು ಉತ್ತರಿಸಬೇಕು ಎಂದು ಕಾಂಗ್ರೆಸ್ ಆಗ್ರಹಿಸಿದೆ.
ಕೇಂದ್ರದಲ್ಲಿ ಕಳೆದ 10 ವರ್ಷದಲ್ಲಿ ಅಧಿಕಾರದಲ್ಲಿರುವ ಬಿಜೆಪಿ ಸರ್ಕಾರ, ರಾಜ್ಯದಲ್ಲಿ 4 ವರ್ಷ ಆಡಳಿತ ನಡೆಸಿದ ರಾಜ್ಯ ಬಿಜೆಪಿ ನಾಯಕರಿಂದ ರಾಜ್ಯಕ್ಕೆ ಯಾವುದೇ ಉಪಯೋಗವಾಗಿರುವುದಿಲ್ಲ, ಬದಲಾಗಿ ರಾಜ್ಯಕ್ಕೆ ನೀಡಬೇಕಾದ ತೆರಿಗೆಯಲ್ಲಿ ವಂಚನೆ, GSTಯಲ್ಲಿ ಮೋಸ, ಪ್ರವಾಹ ಮತ್ತು ಬರ ಪರಿಹಾರದ ಸಹಾಯನುಧಾನವನ್ನು ನೀಡದೆ ವಂಚನೆ ಮಾಡಲಾಗಿದೆ. ಈ ವಿಚಾರವಾಗಿ ರಾಜ್ಯದ 26 ಬಿಜೆಪಿ ಸಂಸದರು ಯಾವ ಪ್ರಶ್ನೆಯನ್ನೂ ಕೇಳದೆ ಬಾಯಿಗೆ ಬೀಗ ಹಾಕಿಕೊಂಡಿರುತ್ತಾರೆ.
ಚುನಾವಣಾ ಪ್ರಚಾರಕ್ಕಾಗಿ ಆಗಮಿಸಲಿರುವ ಮೋದಿಯವರಿಗೆ ಕನ್ನಡಿಗರಾದ ನಾವು ಕರ್ನಾಟಕಕ್ಕೆ ಇದುವರೆಗೂ ಕೇಂದ್ರ ಸರ್ಕಾರ ಮಾಡಿರುವ ವಂಚನೆ ಮತ್ತು ಅನ್ಯಾಯದ ಬಗ್ಗೆ ಪ್ರಶ್ನಿಸಬೇಕಾಗಿದ್ದು ಇದು ನಮ್ಮೆಲ್ಲರ ಕರ್ತವ್ಯವಾಗಿದೆ. ಈ ವಿಚಾರದಲ್ಲಿ ನಮ್ಮ ಪಕ್ಷದ ಜಿಲ್ಲಾ ಮತ್ತು ತಾಲ್ಲೂಕು ಮುಖಂಡರುಗಳು, ಜಿಲ್ಲಾ ಮತ್ತು ತಾಲ್ಲೂಕು ಮಟ್ಟದಲ್ಲಿ ಹೆಚ್ಚು ಜನದಟ್ಟಣೆ ಇರುವ ಸ್ಥಳದಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳುವುದು ಹಾಗೂ ಈ ಪ್ರತಿಭಟನೆ ಬಗ್ಗೆ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಕಡ್ಡಾಯವಾಗಿ ಧ್ವನಿ ಎತ್ತಬೇಕು ಎಂದು ಡಿ.ಕೆ.ಶಿವಕುಮಾರ ತಿಳಿಸಿದ್ದರು.
ಪ್ರತಿಭಟನೆಯಲ್ಲಿ ಕೇಳಿದ ಪ್ರಶ್ನೆಗಳು –
1.
ಬರ ಪರಿಹಾರಕ್ಕಾಗಿ ಸೆಪ್ಟೆಂಬರ್‌ನಲ್ಲಿ ಮನವಿ ಸಲ್ಲಿಸಲಾಗಿದೆ. ಬರ ಅಧ್ಯಯನ ತಂಡ ಅಕ್ಟೋಬರ್‌ನಲ್ಲಿ ರಾಜ್ಯಕ್ಕೆ ಭೇಟಿ ನೀಡಿದೆ. ಅದೇ ತಿಂಗಳು ಕೇಂದ್ರಕ್ಕೆ ₹17,901 ಕೋಟಿ ಪರಿಹಾರ ಬಿಡುಗಡೆಗೆ ಪ್ರಸ್ತಾವನೆ ಸಲ್ಲಿಸಲಾಗಿದೆ.
ಇಷ್ಟು ದಿನ ಸುಮ್ಮನಿದ್ದಿದ್ದು ಯಾಕೆ?
AnswerMadiModi
ಉತ್ತರಕೊಡಿಮೋದಿ
2.
ರಾಜ್ಯದ ಬರಪೀಡಿತ ತಾಲೂಕುಗಳು 223. ಸಂಭವಿಸಿರುವ ನಷ್ಟ ₹33,770 ಕೋಟಿ. ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ರಾಜ್ಯ ಸರ್ಕಾರ ಕೇಳುತ್ತಿರುವುದು ₹18,177 ಕೋಟಿ ಪರಿಹಾರ.
ನಯಾಪೈಸೆ ಬಿಡುಗಡೆ ಮಾಡದೆ ಕೇಂದ್ರ ಸತಾಯಿಸುತ್ತಿರುವುದೇಕೆ?
AnswerMadiModi
ಉತ್ತರಕೊಡಿಮೋದಿ
3.
ರಾಜ್ಯವು ಕಳೆದ 123 ವರ್ಷಗಳಲ್ಲಿ ಕಾಣದ ಭೀಕರ ಬರ ಎದುರಿಸುತ್ತಿದೆ. ಶೇಕಡಾ 40ರಿಂದ 90ರಷ್ಟು ಬೆಳೆ ನಷ್ಟವಾಗಿದೆ.
ರೈತರಿಗೆ ಇನ್‌ಪುಟ್ ಸಬ್ಸಿಡಿ ನೀಡಲು ಹಣ ನೀಡುತ್ತಿಲ್ಲ ಯಾಕೆ?
AnswerMadiModi
ಉತ್ತರಕೊಡಿಮೋದಿ
ನವೆಂಬರ್‌ನಲ್ಲಿ ರಾಜ್ಯ ಸಚಿವರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ರನ್ನು, ಡಿಸೆಂಬರ್‌ನಲ್ಲಿ ಸ್ವತಃ ಮುಖ್ಯಮಂತ್ರಿಗಳು ಗೃಹಮಂತ್ರಿಯನ್ನು ಭೇಟಿಯಾಗಿ ಬರ ಪರಿಹಾರ ಬಿಡುಗಡೆಗೆ ಒತ್ತಾಯಿಸಿದ್ದಾರೆ.
ಆದರೂ ಪರಿಹಾರ ನೀಡದಿರುವುದು ಯಾರ ಮೇಲಿನ ಹಟಕ್ಕೆ?
AnswerMadiModi
ಉತ್ತರಕೊಡಿಮೋದಿ
ಬರ ಪರಿಹಾರಕ್ಕೆ ಬೀದಿ ಹೋರಾಟ ಮಾಡಿದರೂ ಬಗ್ಗಲಿಲ್ಲ. ಸುಪ್ರೀಂ ಕೋರ್ಟ್ ಈಗ 2 ವಾರಗಳಲ್ಲಿ ಪ್ರತಿಕ್ರಿಯಿಸುವಂತೆ ತಾಕೀತು ಮಾಡಿ, ಸೂಚಿಸಿದೆ.
ಈಗಲಾದರೂ ಬರ ಪರಿಹಾರ ಬಿಡುಗಡೆ ಮಾಡುವಿರೋ ಅಥವಾ ದೇಶದ ಕಾನೂನನ್ನು ಧಿಕ್ಕರಿಸುವಿರೊ?
AnswerMadiModi
ಉತ್ತರಕೊಡಿಮೋದಿ
6.
ಕರ್ನಾಟಕ ತೆರಿಗೆ ಪಾಲನ್ನು ಶೇಕಡಾ 4.72 ರಿಂದ ಶೇಕಡಾ 3.64ಕ್ಕೆ ಇಳಿಸಿದ್ದೇಕೆ? ಇದರಿಂದ ರಾಜ್ಯಕ್ಕೆ ಆದ ₹45,000 ಕೋಟಿಗಳಿಗೂ ಹೆಚ್ಚಿನ ನಷ್ಟ ತುಂಬಿಕೊಡುವವರು ಯಾರು?
AnswerMadiModi
ಉತ್ತರಕೊಡಿಮೋದಿ
7.
ಕರ್ನಾಟಕದಿಂದ ₹4.5 ಲಕ್ಷ ಕೋಟಿಗೂ ಹೆಚ್ಚು ತೆರಿಗೆ ಸಂಗ್ರಹಿಸುತ್ತಿರುವ ಕೇಂದ್ರ ಸರ್ಕಾರ, ತೆರಿಗೆ ಪಾಲಿನ ರೂಪದಲ್ಲಿ ರಾಜ್ಯಕ್ಕೆ ಕೊಡುತ್ತಿರುವುದು ₹50,000 ಕೋಟಿ ಮಾತ್ರ.
ಇದು ಅನ್ಯಾಯವಲ್ಲವೆ?
AnswerMadiModi
ಉತ್ತರಕೊಡಿಮೋದಿ
8.
2017ರಲ್ಲಿ ತೀವ್ರ ಬರದಿಂದ ರಾಜ್ಯಕ್ಕೆ ₹30,000 ಕೋಟಿ ನಷ್ಟವಾಗಿದ್ದಾಗ ಕೇಂದ್ರ ಬಿಡುಗಡೆ ಮಾಡಿದ್ದು ಕೇವಲ ₹1,435 ಕೋಟಿ. ಆದರೆ ಮಹಾರಾಷ್ಟ್ರಕ್ಕೆ ₹8,195 ಕೋಟಿ, ಗುಜರಾತಿಗೆ ₹3,894 ಕೋಟಿ ಬಿಡುಗಡೆ ಮಾಡಿತ್ತು.
ಈ ತಾರತಮ್ಯ ಏಕೆ?
AnswerMadiModi
ಉತ್ತರಕೊಡಿಮೋದಿ
9.
ಬೆಂಗಳೂರು ನಗರಕ್ಕೆ ಕುಡಿಯುವ ನೀರು ಪೂರೈಸಲೆಂದೇ ರೂಪಿಸಿದ ಮೇಕೆದಾಟು ಯೋಜನೆಗೆ ಕೇಂದ್ರ ಸರ್ಕಾರ ಇನ್ನೂ ಯಾಕೆ ಅನುಮತಿ ನೀಡಲಿಲ್ಲ?
AnswerMadiModi
ಉತ್ತರಕೊಡಿಮೋದಿ
10.
2019ರಲ್ಲಿ ಕರ್ನಾಟಕ ತೀವ್ರ ಪ್ರವಾಹ ಎದುರಿಸಿದಾಗ, ರಾಜ್ಯಕ್ಕೆ ಭೇಟಿ ನೀಡದೇ ಇದ್ದಿದ್ದು, ಕೇಳಿದಷ್ಟು ನೆರೆ ಪರಿಹಾರವನ್ನು ಬಿಡುಗಡೆ ಮಾಡದೇ ಇದ್ದಿದ್ದು ಯಾಕೆ?
AnswerMadiModi
ಉತ್ತರಕೊಡಿಮೋದಿ
ಬೆಳಗಾವಿ, ಧಾರವಾಡ, ಬಾಗಲಕೋಟೆ, ಗದಗ ಜಿಲ್ಲೆಗಳಿಗೆ ಜೀವ ತುಂಬಲಿರುವ ಮಹಾದಾಯಿ ನದಿ ಯೋಜನೆಗೆ ಇದುವರೆಗೂ ಅನುಮಾತಿ ಯಾಕೆ ನೀಡಿಲ್ಲ?
AnswerMadiModi
ಉತ್ತರಕೊಡಿಮೋದಿ
12.
ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಭದ್ರ ಮೇಲ್ದಂಡೆ ನೀರಾವರಿ ಯೋಜನೆಗೆ ₹5,300 ಕೋಟಿ ಘೋಷಿಸಿದ್ದ ಕೇಂದ್ರ, ವರ್ಷವಾಗುತ್ತಾ ಬಂದರೂ ಅನುದಾನ ಬಿಡುಗಡೆ ಮಾಡಿಲ್ಲ ಯಾಕೆ?
AnswerMadiModi
ಉತ್ತರಕೊಡಿಮೋದಿ
13.
ಹದಿನೈದನೆಯ ಹಣಕಾಸು ಯೋಜನೆಯ ಶಿಫಾರಸು ಮಾಡಿದ್ದರೂ ₹5,495 ಕೋಟಿ ವಿಶೇಷ ಅನುದಾನ ಬಿಡುಗಡೆ ಮಾಡಿಲ್ಲ ಯಾಕೆ?
AnswerMadiModi
ಉತ್ತರಕೊಡಿಮೋದಿ
14.
ಬೆಂಗಳೂರಿನಲ್ಲಿ ಏಮ್ಸ್‌ಗೆ ಸ್ಥಾಪನೆಗೆ ಅನುಮತಿ ನೀಡಿದ್ದರೂ ಅನುದಾನ ಬಿಡುಗಡೆಯಾಗಿಲ್ಲ ಯಾಕೆ?
AnswerMadiModi
ಉತ್ತರಕೊಡಿಮೋದಿ
15.
ರಾಯಚೂರು ಮತ್ತು ಕಲಬುರಗಿಗೆ ಏಮ್ಸ್ ನೀಡಿಲ್ಲ ಯಾಕೆ?
AnswerMadiModi
ಉತ್ತರಕೊಡಿಮೋದಿ
ಗುಜರಾತಿನ ಅಮುಲ್ ಉದ್ಧಾರ ಮಾಡಲು ನಮ್ಮ ಕನ್ನಡಿಗರ ಬ್ರ್ಯಾಂಡ್ ನಂದಿನಿಯನ್ನು ಆಪೋಶನ ತೆಗೆದುಕೊಳ್ಳಲು ಪ್ರಯತ್ನಿಸಿದ್ದು ಯಾಕೆ?
AnswerMadiModi
ಉತ್ತರಕೊಡಿಮೋದಿ
17.
ರಾಜ್ಯದಲ್ಲಿ ನೆರ ಬಂದಿದ್ದಾಗಲೂ ಬರಲಿಲ್ಲ, ಬರ ಬಂದಾಗಲೂ ಬರಲಿಲ್ಲ, ಚುನಾವಣೆ ಬಂದರೆ ಮಾತ್ರ ಓಡೋಡಿ ಬರುತ್ತೀರಲ್ಲ ಯಾಕೆ?
AnswerMadiModi
ಉತ್ತರಕೊಡಿಮೋದಿ
18.
ವರ್ಷಕ್ಕೆ 2 ಕೋಟಿ ಉದ್ಯೋಗ ಕೊಡುತ್ತೀನಿ ಎಂಬ ಮಾತನ್ನು ಉಳಿಸಿಕೊಳ್ಳಲಿಲ್ಲ ಯಾಕೆ? ನಿರುದ್ಯೋಗ ತಾಂಡವವಾಡುತ್ತಿದ್ದರೂ ಮಂದಿರ, ಮಸೀದಿಗಳತ್ತ ಕೈತೋರಿಸುತ್ತೀರಿ ಯಾಕೆ?
AnswerMadiModi
ಉತ್ತರಕೊಡಿಮೋದಿ
19.
2018ರಲ್ಲಿ ನಮ್ಮ ರಾಜ್ಯಕ್ಕೆ ಕನ್ನಡ ಧ್ವಜದ ಮಾನ್ಯತೆ ನೀಡುವಂತೆ ಮನವಿ ಮಾಡಿದ್ದರೂ ಇದುವರೆಗೆ ಏನೂ ಹೇಳದೆ ಮೌನವಹಿಸಿರುವುದು ಯಾಕೆ?
AnswerMadiModi
ಉತ್ತರಕೊಡಿಮೋದಿ
20.
ಗೃಹ ಸಚಿವ ಅಮಿತ್ ಶಾ ಅವರ ಹಿಂದಿ ಹೇರಿಕೆ ವಿರೋಧಿಸಿ ಕನ್ನಡಿಗರು ಪ್ರತಿಭಟಿಸಿದರೂ ಇದುವರೆಗೆ ಏನೂ ಹೇಳದೆ ಮೌನವಹಿಸಿರುವುದು ಯಾಕೆ?
AnswerMadiModi
ಉತ್ತರಕೊಡಿಮೋದಿ
21.
ಸಂವಿಧಾನ ಬದಲಿಸುವ ಮಾತುಗಳನ್ನು ಬಿಜೆಪಿಯ ಮಂತ್ರಿಗಳು, ಸಂಸದರು, ಶಾಸಕರುಗಳೇ ಹೇಳುತ್ತಿದ್ದರೂ ಅವರ ಮಾತುಗಳನ್ನು ಖಂಡಿಸುತ್ತಿಲ್ಲವೇಕೆ? ಅವರ ವಿರುದ್ಧ ಕ್ರಮ ಕೈಗೊಂಡಿಲ್ಲ ಯಾಕೆ?
AnswerMadiModi
ಉತ್ತರಕೊಡಿಮೋದಿ
22.
ಎರಡು ರಾಜ್ಯಗಳ ನಡುವೆ ಕಾವೇರಿ ವಿಚಾರವಾಗಿ ಸಂಘರ್ಷ ನಡೆಯುತ್ತಿದ್ದರೂ ಮಧ್ಯಸ್ಥಿಕೆ ವಹಿಸಲು ಹಿಂದೇಟು ಹಾಕಿದ್ದೇಕೆ?
AnswerMadiModi
ಉತ್ತರಕೊಡಿಮೋದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ