Latest

ಗೋವಾ ಚುನಾವಣೆಗೆ ಕಾಂಗ್ರೆಸ್ ಸ್ಟಾರ್ ಪ್ರಚಾರಕರ ಪಟ್ಟಿ ಬಿಡುಗಡೆ; ಕರ್ನಾಟಕದ 9, ಬೆಳಗಾವಿ ಒಬ್ಬರಿಗೆ ಸ್ಥಾನ

ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಗೋವಾದಲ್ಲಿ ಇದೇ ತಿಂಗಳು 14ರಂದು ನಡೆಯಲಿರುವ ವಿಧಾನಸಭೆ ಚುನಾವಣೆಯ ಸ್ಟಾರ್ ಪ್ರಚಾರಕರ ಪರಿಷ್ಕೃತ ಪಟ್ಟಿಯನ್ನು ರಾಷ್ಟ್ರೀಯ ಕಾಂಗ್ರೆಸ್ ಪಕ್ಷ ಬಿಡುಗಡೆ ಮಾಡಿದೆ.

ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಸೇರಿದಂತೆ ರಾಷ್ಟ್ರದ ಒಟ್ಟೂ 30 ಜನರನ್ನು ಸ್ಟಾರ್ ಪ್ರಚಾರಕರೆಂದು ಗುರುತಿಸಲಾಗಿದೆ. ಇದರಲ್ಲಿ ಕರ್ನಾಟಕದ 9 ಜನರಿಗೆ ಸ್ಥಾನ ನೀಡಲಾಗಿದೆ.

ರಾಜ್ಯಸಭೆಯ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ 4ನೇ ಸ್ಥಾನದಲ್ಲಿದ್ದಾರೆ. ಕೆಪಿಸಿಸಿ ಮಾಜಿ ಅಧ್ಯಕ್ಷ ದಿನೇಶ ಗುಂಡೂರಾವ್ ಅವರಿಗೆ 6ನೇ ಸ್ಥಾನ, ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯಗೆ 13ನೇ ಸ್ಥಾನ ನೀಡಲಾಗಿದೆ.

17ನೆ ಸ್ಥಾನದಲ್ಲಿ ಡಿ.ಕೆ.ಶಿವಕುಮಾರ, 19ನೇ ಸ್ಥಾನದಲ್ಲಿ ಎಚ್.ಕೆ.ಪಾಟೀಲ, 20ನೇ ಸ್ಥಾನದಲ್ಲಿ ಎಂ.ಬಿ.ಪಾಟೀಲ, 25ನೇ ಸ್ಥಾನದಲ್ಲಿ ಆರ್.ವಿ.ದೇಶಪಾಂಡೆ ಹೆಸರಿದೆ. ಬೆಳಗಾವಿಯಿಂದ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಅವರಿಗೆ ಪಟ್ಟಿಯಲ್ಲಿ ಸ್ಥಾನ ಲಭಿಸಿದ್ದು, 26ನೇ ನಂಬರ್ ನಲ್ಲಿದ್ದಾರೆ. ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ, ಕರ್ನಾಟಕದ ಬಿ.ವಿ.ಶ್ರೀನಿವಾಸ ಅವರು 30ನೇ ಸ್ಥಾನದಲ್ಲಿದ್ದಾರೆ.

ಪಿ.ಚಿದಂಬರಂ, ಸಚಿನ್ ಪೈಲಟ್, ಶಶಿ ತರೂರ್ ಸಹ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿದ್ದಾರೆ. ಕನ್ಹಯ್ಯ ಕುಮಾರ್ 27ನೇ ಸ್ಥಾನದಲ್ಲಿದ್ದಾರೆ.

ಬೆಳಗಾವಿಯ ಶಾಸಕಿಯರಾದ ಲಕ್ಷ್ಮಿ ಹೆಬ್ಬಾಳಕರ್, ಅಂಜಲಿ ನಿಂಬಾಳಕರ್  ಸೇರಿದಂತೆ ಬಹುತೇಕ ಶಾಸಕರು ಈಗಾಗಲೆ ಗೋವಾ ಪ್ರಚಾರದಲ್ಲಿ ಸಕ್ರೀಯವಾಗಿ ತೊಡಗಿಕೊಂಡಿದ್ದಾರೆ.

ಸಂಪೂರ್ಣ ಪಟ್ಟಿ ಇಲ್ಲಿದೆ.

 

 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button