Latest

ರಾಜ್ಯದಲ್ಲಿ ದೇಶದ ಅತೀ ದೊಡ್ಡ ಕೊವಿಡ್ ಕೇರ್ ಸೆಂಟರ್; ಕೊರೊನಾ ವಾರಿಯರ್ ಆಗಿ 4 ರೊಬೊಟ್‌ ಬಳಕೆ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ರಾಜ್ಯದಲ್ಲಿ ಹೆಚ್ಚುತ್ತಿರುವ ಕೊರೊನಾ ಸೋಂಕಿನ ನಿಯಂತ್ರಣಕ್ಕೆ ರಾಜ್ಯ ಸರ್ಕಾರ ಎಲ್ಲಾ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದು, ವಾರದಲ್ಲಿ ದೇಶದ ಅತೀ ದೊಡ್ಡ ಕೊವಿಡ್ ಕೇರ್ ಸೆಂಟರ್ ಉದ್ಘಾಟಿಸಲಾಗುವುದು ಎಂದು ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಹೇಳಿದ್ದಾರೆ.

ಬೆಂಗಳೂರಿನ ಮಾದಾರ ಬಳಿಯ ಬಿಐಇಸಿಯಲ್ಲಿ ದೇಶದ ಅತೀ ದೊಡ್ಡ ಕೊವಿಡ್ ಕೇರ್ ಸೆಂಟರ್ ನ್ನು ತೆರೆಯಲಾಗುತ್ತಿದ್ದು, 10,100 ಬೆಡ್ ಗಳ ವ್ಯವಸ್ಥೆ ಮಾಡಲಾಗಿದೆ. ಒಂದು ವಾರ್ಡ್ ನಲ್ಲಿ 50 ಬೆಡ್, ಪ್ರತೀ ಎರಡು ಬೆಡ್ ಗಳ ಮಧ್ಯೆ ಒಂದು ಟೇಬಲ್ ಫ್ಯಾನ್, ಬೆಡ್ ಗೆ ಒಂದರಂತೆ ಚೇರ್, ವಾರ್ಡ್ ಗೆ ಒಂದರಂತೆ ಪ್ರತ್ಯೇಕವಾಗಿ ಡಾಕ್ಟರ್ ಗಳ ಕ್ಯಾಬಿನ್, ವೈದ್ಯಕೀಯ ಸಿಬ್ಬಂದಿ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಕೊರೊನಾ ವಾರಿಯರ್ ಆಗಿ 4 ರೊಬೊಟ್‌ ಬಳಕೆಗೆ ನಿರ್ಧರಿಸಲಾಗಿದ್ದು, ಚಿಕಿತ್ಸೆ ಪಡೆಯುವವರ ಯೋಗ ಕ್ಷೇಮ ವಿಚಾರಿಸಲಿವೆ.

ಕೊವಿಡ್ ಕೇರ್ ಸೆಂಟರ್ ಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ, ವಾರದ ಒಳಗಾಗಿ ದೇಶದಲ್ಲೇ ಅತಿ ದೊಡ್ಡ ಕೊವಿಡ್ ಸೆಂಟರ್ ಉದ್ಘಾಟನೆ ಮಾಡಲಾಗುತ್ತಿದೆ. ಇನ್ನೂ ಅನೇಕ ತಿಂಗಳು ಕಾಲ ನಾವು ಕೊರೊನಾ ವಿರುದ್ಧ ಹೋರಾಡಬೇಕಿದೆ. ನಮ್ಮ ಅಧಿಕಾರಿಗಳು, ವೈದ್ಯರು ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ಳುತ್ತಿದ್ದಾರೆ ಎಂದರು.

ಯಾರೂ ಕೂಡ ಕೊರೊನಾ ಸೋಂಕಿಗೆ ಹೆದರಿ ಬೆಂಗಳೂರು ಬಿಟ್ಟು ಊರುಗಳಿಗೆ ಹೋಗಬೇಡಿ. ಬೆಂಗಳೂರಿನಲ್ಲಿ ಕೊರೊನಾ ನಿಯಂತ್ರಣಕ್ಕೆ ಪ್ರಾಮಾಣಿಕ ಪ್ರಯತ್ನ ನಡೆಸಲಾಗುತ್ತಿದೆ ಎಂದು ಹೇಳಿದರು.

Home add -Advt

Related Articles

Back to top button