Latest

ಮೋದಿ ಜತೆ ಕುಳಿತು ಬಿಜೆಪಿ ಹೊಗಳಿದ ಪುಟ್ಟ ಬಾಲಕಿ; ದೂರು ನೀಡಲು ಕಾಂಗ್ರೆಸ್ ನಿರ್ಧಾರ

ಪ್ರಗತಿವಾಹಿನಿ ಸುದ್ದಿ, ಹೊಸದಿಲ್ಲಿ: ಪ್ರಧಾನಿ ಜೊತೆ ಪುಟ್ಟ ಬಾಲಕಿಯೊಬ್ಬಳು ಬಿಜೆಪಿಯನ್ನು ಹೊಗಳಿದ ವಿಡಿಯೊವೊಂದು ಬಹಿರಂಗವಾಗುತ್ತಿದ್ದಂತೆ ಈ ಬಗ್ಗೆ ದೂರು ದಾಖಲಿಸಲು ಕಾಂಗ್ರೆಸ್ ಸಜ್ಜಾಗಿದೆ.

ಪ್ರಧಾನಿ ನರೇಂದ್ರ ಮೋದಿಯವರೊಂದಿಗೆ ಪೋಸ್ ನೀಡುತ್ತಿರುವ  ಬಾಲಕಿಯೊಬ್ಬಳು ಪಕ್ಷವನ್ನು ಹೊಗಳಿದ ವಿಡಿಯೋವನ್ನು ಬಿಜೆಪಿ ಟ್ವೀಟ್ ಮಾಡಿತು. ಇದರ ಬೆನ್ನಿಗೇ ರಾಷ್ಟ್ರೀಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗವನ್ನು ಸಂಪರ್ಕಿಸಿ ದೂರು ಸಲ್ಲಿಸುವುದಾಗಿ ಕಾಂಗ್ರೆಸ್ ಘೋಷಿಸಿತು.

Home add -Advt

ಗುಜರಾತ್‌ನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಅಪ್ರಾಪ್ತ ಬಾಲಕಿಯನ್ನು ಬಳಸಿಕೊಂಡಿದೆ ಎಂದು ಟಿಎಂಸಿ ಆರೋಪಿಸಿದೆ.

ಭಾರತ್ ಜೋಡೋ ಯಾತ್ರೆಯಲ್ಲಿ ಮಕ್ಕಳು ಭಾಗವಹಿಸುವುದನ್ನು ಎನ್‌ಸಿಪಿಸಿಆರ್ ಈ ಹಿಂದೆ ಆಕ್ಷೇಪಿಸಿತ್ತು. ಆದರೆ ಇದು ಕೂಡ ಸಮರ್ಥನೀಯವಲ್ಲ ಎಂದು ಕಾಂಗ್ರೆಸ್ ಹೇಳಿದೆ.

ಕಾಂಗ್ರೆಸ್ ದೂರು ಸಲ್ಲಿಸಲು ಇನ್ನೂ ಸಿದ್ಧತೆ ನಡೆಸಿರುತ್ತಿರುವಾಗಲೇ, ಗುಜರಾತ್‌ನಲ್ಲಿ ಬಿಜೆಪಿ ತನ್ನ ಚುನಾವಣಾ ಪ್ರಚಾರಕ್ಕೆ ಅಪ್ರಾಪ್ತ ವಯಸ್ಕಬಾಲಕಿಯನ್ನು ಬಳಸಿಕೊಂಡಿದೆ ಎಂದು ಆರೋಪಿಸಿ ಅಖಿಲ ಭಾರತ ತೃಣಮೂಲ ಕಾಂಗ್ರೆಸ್ (ಎಐಟಿಸಿ) ಈಗಾಗಲೇ ಮಕ್ಕಳ ರಕ್ಷಣಾ ಸಂಸ್ಥೆಗೆ ದೂರು ಸಲ್ಲಿಸಿದೆ.

ಬದಲಾಗಲಿದೆ T20 ವಿಶ್ವಕಪ್ ಸ್ವರೂಪ

Related Articles

Back to top button