Kannada NewsKarnataka News

ಭಯೋತ್ಪಾದನೆ ಕಾಂಗ್ರೆಸ್ ನ ಪಾಪದ ಕೂಸು: ಪಿ. ರಾಜೀವ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ದೇಶ ಹಾಗೂ ರಾಜ್ಯದಲ್ಲಿ  ನಡೆಯುತ್ತಿರುವ ಭಯೋತ್ಪಾದಕ ಕೃತ್ಯ   ಕಾಂಗ್ರೆಸ್ ನ‌ ಪಾಪದ ಕೂಸು ಎಂದು ತಾಂಡಾ ಅಭಿವೃದ್ಧಿ ನಿಗಮ ಮಂಡಳದ ಅಧ್ಯಕ್ಷ, ಕುಡಚಿ ಕ್ಷೇತ್ರದ ಶಾಸಕ ಪಿ. ರಾಜೀವ ಹೇಳಿದರು.

ನಗರದ ಪ್ರವಾಸಿ ಮಂದಿರದಲ್ಲಿ  ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

Home add -Advt

ಕಾಂಗ್ರೆಸ್ ನ ತುಷ್ಟೀಕರಣದ ಮನಸ್ಥಿತಿಯ ಪರಿಣಾಮವಾಗಿ ಇಂದು ಭಾರತ ಭಯೋತ್ಪಾದನಾ ಚಟುವಟಿಕೆಗಳಿಂದ ನಲುಗುವಂತಾಗಿದೆ. ಪೊಲೀಸರು ಸುರಕ್ಷತೆಗೆ ಎಲ್ಲ ರೀತಿಯಿಂದಲೂ ಕೆಲಸ ಮಾಡುತ್ತಿದ್ದರೂ ಮಂಗಳೂರಿನಲ್ಲಿ ಕುಕ್ಕರ್ ಬ್ಲಾಸ್ಟ್ ಪ್ರಕರಣದ ಉಗ್ರ ಶಾರೀಕ್ ನಡೆಸಿದ ಸಂಚು ಅಪಾಯಕಾರಿಯಾದುದು. ಒಂದು ವೇಳೆ ಆತನ ದೊಡ್ಡ ಪ್ರಮಾಣದ ಸಂಚು ಯಶಸ್ವಿಯಾಗಿ ಕಾರ್ಯರೂಪಕ್ಕೆ ಬಂದಿದ್ದರೆ ಆಗ ದೊಡ್ಡ ಅವಘಡವೇ ಆಗುತ್ತಿತ್ತು. ಜತೆಗೆ ಕಾಂಗ್ರೆಸ್ ‌ ವಿನಾಕಾರಣ ಬಿಜೆಪಿ ಮೇಲೆ ವೈಫಲ್ಯದ ಆರೋಪ ಮಾಡುತ್ತಿತ್ತು. ಪ್ರಸ್ತುತ ಬಿಜೆಪಿ ಸರಕಾರ ಭಯೋತ್ಪಾದನೆ ಮಟ್ಟ ಹಾಕಲು ಸರ್ವಸಜ್ಜಾಗಿದೆ ಎಂದರು.

‘ಹಿಂದೂ’ ಪದ ಅಶ್ಲೀಲ ಎಂದು ಸತೀಶ ಜಾರಕಿಹೊಳಿ ಹೇಳುತ್ತಾರೆ. ಅವರು ಜಿಹಾದಿ ಮನಸ್ಥಿತಿಯ ಮುಸ್ಲಿಮರನ್ನು ಖಂಡಿಸುತ್ತಾರಾ? ಎಂದು ಸವಾಲೆಸೆದರು.

ಬೆಳಗಾವಿ ಬಿಜೆಪಿ ಗ್ರಾಮೀಣ ಘಟಕದ ಜಿಲ್ಲಾಧ್ಯಕ್ಷ ಸಂಜಯ ಪಾಟೀಲ, ಶರದ್ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

ಮೋದಿ ಜತೆ ಕುಳಿತು ಬಿಜೆಪಿ ಹೊಗಳಿದ ಪುಟ್ಟ ಬಾಲಕಿ; ದೂರು ನೀಡಲು ಕಾಂಗ್ರೆಸ್ ನಿರ್ಧಾರ

Related Articles

Back to top button