Kannada NewsKarnataka NewsLatest

*ಬಾಕಿ ಬಿಲ್ ಪಾವತಿಗೆ ಸರ್ಕಾರಕ್ಕೆ ಡೆಡ್ ಲೈನ್: ಗಡುವು ತಪ್ಪಿದರೆ ಕಮಿಷನ್ ದಂಧೆ ದಾಖಲೆ ಬಿಡುಗಡೆ: ಗುತ್ತಿಗೆದಾರರ ಸಂಘದ ಎಚ್ಚರಿಕೆ*

ಪ್ರಗತಿವಾಹಿನಿ ಸುದ್ದಿ: ರಾಜ್ಯ ಗುತ್ತಿಗೆದರರ ಸಂಘ ಮತ್ತೆ ರಾಜ್ಯ ಸರ್ಕಾರದ ವಿರುದ್ಧ ಸಿಡಿದೆದ್ದಿದೆ. ಬಾಕಿ ಹಣ ಬಿಡುಗಡೆ ಮಾಡುವಂತೆ ಕೋರಿ ಸಿಎಂ ಡಿ.ಕೆ.ಶಿವಕುಮಾರ್ ಅವರಿಗೆ ಪತ್ರ ಬರೆದ ಬೆನ್ನಲ್ಲೇ ಗುತ್ತಿಗೆದಾರರ ಸಂಘ ಸರ್ಕಾರಕ್ಕೆ ಗಡವು ನೀಡಿದೆ.

ಬೆಂಗಳೂರುನಲ್ಲಿ ಮಾಧ್ಯಮಗೋಷ್ಠಿ ನಡೆಸಿದ ರಾಜ್ಯ ಗುತ್ತಿಗೆದಾರ ಸಂಘದ ಅಧ್ಯಕ್ಷ ಮಂಜುನಾಥ್, ಕಳೆದ ಸರ್ಕಾರಕ್ಕಿಂತಲೂ ಈ ಕಾಂಗ್ರೆಸ್ ಸರ್ಕಾಅರದಲ್ಲಿ ಕಮಿಷನ್ ಹೆಚ್ಚಿದೆ. ನವೆಂಬರ್ ಒಳಗೆ ಬಾಕಿ ಹಣ ಬಿಡುಗಡೆ ಮಾಡಬೇಕು. ಒಂದು ವೇಳೆ ಗಡುವು ಮೀರಿದರೆ ಕಮಿಷನ್ ದಂಧೆಯ ದಾಖಲೆ ಬಿಡುಗಡೆ ಮಾಡೋದಾಗಿ ಸರ್ಕಾರಕ್ಕೆ ಖಡಕ್ ಎಚ್ಚರಿಕೆ ನೀಡಿದ್ದಾರೆ.

ಇತ್ತೀಚಿಗೆ ಎಂಎಲ್‌ಎಗಳು ಕೂಡ ಕಾಂಟ್ರ್ಯಾಕ್ಟ್ ವಿಚಾರದಲ್ಲಿ ಮೂಗು ತೂರಿಸುತ್ತಿದ್ದಾರೆ. ಇದರಿಂದ ನಿಜವಾದ ಕಾಂಟ್ರ್ಯಾಕ್ಟರ್‌ಗಳು ಮಾಯವಾಗುತ್ತಿದ್ದಾರೆ. ಒಂದು ಕಡೆ ಕೆಲಸವೂ ಇಲ್ಲ, ಮತ್ತೊಂದೆಡೆ ಹಣವೂ ಇಲ್ಲ ಎಂಬಂತಾಗಿದೆ.

ಟೆಂಡರ್ ಆದ್ರೆ ಶಾಸಕರ ಬಳಿ ಮೊದಲು ಹೋಗಬೇಕು. ಅವರು ಓಕೆ ಅಂದಮೇಲೆ ಕಾಮಗಾರಿ ಶುರು ಆಗುತ್ತೆ. ಈ ವಿಚಾರ ಸಿಎಂಗೂ ಗೊತ್ತಿದೆ. ನಮ್ಮ ಹಣ ಗ್ಯಾರಂಟಿ ಯೋಜನೆಗಳಿಗೆ ಬಳಕೆ ಆಗುತ್ತಿದ್ದು, ಮೊದಲು ನಾವು ಕೆಲಸ ಮಾಡಿರುವ ಹಣ ಕೊಡಿ ಎಂದು ಒತ್ತಾಯಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button