Election NewsKannada NewsKarnataka NewsNationalPolitics

ಮೋದಿಗೆ ಕಾಂಗ್ರೆಸ್ ಪ್ರಣಾಳಿಕೆ ಮತ್ತು ಸಂವಿಧಾನ ಪುಸ್ತಕ ಕೋರಿಯರ್ ಮಾಡಿದ ಕಾಂಗ್ರೆಸ್ ಕಾರ್ಯಕರ್ತರು

ಪ್ರಗತಿವಾಹಿನಿ ಸುದ್ದಿ: ಪ್ರಧಾನ ಮಂತ್ರಿ ನರೇಂದ್ರ ಮೋದಿಗೆ ಯೂತ್ ಕಾಂಗ್ರೆಸ್‌ ರಾಷ್ಟ್ರೀಯ ಅಧ್ಯಕ್ಷ ಬಿವಿ ಶ್ರೀನಿವಾಸ್ ನೇತೃತ್ವದಲ್ಲಿ ಕೋರಿಯರ್ ಮಾಡುವ ಅಭಿಯಾನಕ್ಕೆ ಚಾಲನೆ ನೀಡಲಾಗಿದೆ. 

ಸೋಮವಾರ ಬೆಂಗಳೂರಿನ ಕೆಪಿಸಿಸಿ ಕಚೇರಿಯಿಂದ ಕಾಂಗ್ರೆಸ್ ಪ್ರಣಾಳಿಕೆ ಮತ್ತು ಸಂವಿಧಾನ ಪುಸ್ತಕವನ್ನು ಕಾಂಗ್ರೆಸ್‌ ಕಾರ್ಯಕರ್ತರು ಕೋರಿಯರ್ ‌ಮಾಡಿದ್ದಾರೆ. ಅಭಿಯಾನಕ್ಕೆ ಚಾಲನೆ ನೀಡುವ ವೇಳೆ ಕೋರಿಯರ್ ಬಾಯ್ ಕೈಯಲ್ಲಿ ಪಾರ್ಸಲ್ ಕಳಿಸಿದ್ದಾರೆ. 

Home add -Advt

ಆ ಬಳಿಕ ಮಾತನಾಡಿದ ಬಿ ವಿ ಶ್ರೀನಿವಾಸ್, ನರೇಂದ್ರ ಮೋದಿ ಅವರಿಗೆ ಕಾಂಗ್ರೆಸ್ ಪ್ರಣಾಳಿಕೆ ಬಗ್ಗೆ ತಿಳಿವಳಿಕೆ, ಮಾಹಿತಿ ಇಲ್ಲ, ಹಾಗಾಗಿ ಕೋರಿಯರ್ ಮೂಲಕ ಪ್ರಣಾಳಿಕೆ ಹಾಗು ಸಂವಿಧಾನ  ಕಳಿಸಿದ್ದೇವೆ  ಎಂದಿದ್ದಾರೆ.

Related Articles

Back to top button