Kannada NewsKarnataka NewsLatestPolitics

*ನಳೀನ್ ಕುಮಾರ್ ಕಟೀಲ್ ಅವಧಿ ಮೀರಿದ ಔಷಧಿಯಂತೆ ನಿರುಪಯೋಗಿ ಆಗಿದ್ದಾರೆ; ಶಾಡೋ ಅಧ್ಯಕ್ಷ ಜೋಶಿ ನಾಪತ್ತೆಯಾಗಿದ್ದಾರೆ; ರಾಜ್ಯ BJP ಕಾಲೆಳೆದ ಕಾಂಗ್ರೆಸ್*

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಜೆಪಿ ನಾಯಕರು ಕಾಂಗ್ರೆಸ್ ಸೇರ್ಪಡೆಗೆ ಮುಂದಾಗಿರುವ ವಿಚಾರವಾಗಿ ಚುನಾವಣೆ ನಂತರ ಬಿಜೆಪಿ ಸ್ಥಿತಿ ಬಿರುಗಾಳಿಗೆ ಸಿಲುಕಿದ ನಾವಿಕನಿಲ್ಲದ ನೌಕೆಯಂತಾಗಿದೆ ಎಂದು ರಾಜ್ಯ ಕಾಂಗ್ರೆಸ್ ಘಟಕ ಟೀಕಿಸಿದೆ.

ಒಂದೆಡೆ ಒಬ್ಬರಿಗೊಬ್ಬರು ಹತ್ಯೆಗೆ ಷಡ್ಯಂತ್ರ ರೂಪಿಸುವವರು, ಮತ್ತೊಂದೆಡೆ ಒಬ್ಬರಿಗೊಬ್ಬರು ರಾಜಕೀಯವಾಗಿ ಸಮಾಧಿ ತೋಡುವವರು, ಇನ್ನೊಂದೆಡೆ ಒಳಗೊಳಗೇ ಕುದಿಯುವವರು ಬಿಜೆಪಿಯಲ್ಲಿದ್ದಾರೆ. ಮಾಜಿ ಸಚಿವ ಎಸ್.ಟಿ.ಸೋಮಶೇಖರ್, ಪಿತೂರಿಗಾರರ ಬಗ್ಗೆ ದೂರು ನೀಡಿದರು ಕ್ರಮ ಕೈಗೊಂಡಿಲ್ಲ ಎಂದು ಗೋಳಾಡುತ್ತಿದ್ದಾರೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಟೀಕಿಸಿದೆ.

ಕ್ರಮ ತೆಗೆದುಕೊಳ್ಳಬೇಕಾದ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್, ಅವಧಿ ಮೀರಿದ ಔಷಧಿಯಂತೆ ನಿರುಪಯೋಗಿ ಆಗಿದ್ದಾರೆ. ಶಾಡೋ ಅಧ್ಯಕ್ಷ ಪ್ರಹ್ಲಾದ್ ಜೋಶಿ ನಾಪತ್ತೆಯಾಗಿದ್ದಾರೆ. ರಾಜ್ಯ ಬಿಜೆಪಿಯ ಆಂತರಿಕ ಕಲಹ ನಿಭಾಯಿಸಲು ಒಬ್ಬ ರಾಜ್ಯಾಧ್ಯಕ್ಷ, ಸರ್ಕಾರವನ್ನು ಎದುರಿಸಲು ಒಬ್ಬ ವಿಪಕ್ಷ ನಾಯಕ ಸಿಗದಷ್ಟು ಬಿಜೆಪಿ ರಾಜಕೀಯವಾಗಿ ದಿವಾಳಿಯಾಗಿದೆಯೇ? ಎಂದು ಪ್ರಶ್ನಿಸಿದೆ.

Home add -Advt

Related Articles

Back to top button