Latest

ಒಡಿಶಾ ರೈಲು ದುರಂತದ ಹಿಂದೆ ವಿಚ್ಛಿದ್ರಕಾರಿ ಶಕ್ತಿಗಳ ಸಂಚು ಶಂಕೆ

ಪ್ರಗತಿವಾಹಿನಿ ಸುದ್ದಿ, ಭುಬನೇಶ್ವರ: ಒಡಿಶಾದ ಬಾಲಾಸೋರ್ ಬಳಿ ನಡೆದ ಭೀಕರ ತ್ರಿವಳಿ ರೈಲು ದುರಂತದ ಹಿಂದೆ ವಿಚ್ಛಿದ್ರಕಾರಕ ಶಕ್ತಿಗಳ ಕೈವಾಡ ಇರುವ ಶಂಕೆ ವ್ಯಕ್ತವಾಗಿದೆ.

10 ಜನ ಅಧಿಕಾರಿಗಳನ್ನು ಒಳಗೊಂಡ ಸಿಬಿಐ ತಂಡ ತನಿಖೆ ಆರಂಭಿಸಿದ್ದು ದುರಂತದ ಹಿಂದೆ ದುಷ್ಕರ್ಮಿಗಳ ದುರುದ್ದೇಶವಿದೆ ಎಂಬುದು ಆರಂಭಿಕ ಹಂತದಲ್ಲೇ ಮೇಲ್ನೋಟಕ್ಕೆ ಕಂಡುಬಂದಿದೆ.

ಅಪರಾಧಿಗಳನ್ನು ಗುರುತಿಸಲಾಗಿದ್ದು ಈಗಲೇ ಆ ಬಗ್ಗೆ ಮಾಹಿತಿ ನೀಡಲಾಗುವುದಿಲ್ಲ. ಸಿಬಿಐ ತನಿಖಾ ವರದಿ ಬಂದ ನಂತರವೇ ಮಾಹಿತಿ ಬಿಡುಗಡೆ ಮಾಡಲಾಗುವುದು ಎಂದು ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಈಗಾಗಲೇ ಹೇಳಿಕೆ ನೀಡಿದ್ದಾರೆ.

ಸುಮಾರು 750 ಮೀ. ಇರುವ ಲೂಪ್ ಲೈನ್ ಸಾಮಾನ್ಯವಾಗಿ ಗೂಡ್ಸ್ ರೈಲುಗಳಿಗೆ ಮೀಸಲಿರುತ್ತವೆ  ಮುಖ್ಯ ಮಾರ್ಗದಲ್ಲಿ ಸಂಚರಿಸಬೇಕಿದ್ದ ಕೋರಮಂಡಲ ಎಕ್ಸ್ ಪ್ರೆಸ್ ರೈಲು ಲೂಪ್ ಲೈನ್ ನಲ್ಲಿ ಹೋಗಿದ್ದೇಕೆ? ಎಂಬ ಬಗ್ಗೆ ವಿಚಾರಣೆ ನಡೆದಿದೆ. ಇಂಟರ್ ಲಾಕಿಂಗ್ ವ್ಯವಸ್ಥೆ ವೈಫಲ್ಯದ ಬಗ್ಗೆಯೂ ಕೂಲಂಕುಶ ತನಿಖೆ ನಡೆಸಲಾಗುತ್ತಿದೆ.

ಬಾಲಾಸೋರ್ ದುರಂತ ನಡೆದ ದಿನವೇ ತಮಿಳುನಾಡಿನಲ್ಲೂ ರೈಲ್ವೆ ಹಳಿಯಲ್ಲಿ ಲಾರಿ ಟೈರ್ ಗಳನ್ನಿಟ್ಟು ಬಹುದೊಡ್ಡ ದುರಂತ ನಡೆಸುವ ಸಂಚು ರೂಪಿಸಲಾಗಿದ್ದು ಇವೆಲ್ಲವುಗಳ ಹಿನ್ನೆಲೆಯಲ್ಲಿ ಕೇಂದ್ರ ಸರಕಾರ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ.

https://pragati.taskdun.com/dont-listen-to-such-rumors-the-government-is-with-you-minister-to-the-people-lakshmi-hebbalkar-abhay/

https://pragati.taskdun.com/mla-raju-kageharrasmentbelagaviaccusedgrama-panchayat-mamber/

https://pragati.taskdun.com/it-is-not-right-to-compare-nudity-with-sex-kerala-high-court/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button