*ಪೊಲೀಸ್ ಕಾನ್ಸ್ ಟೇಬಲ್ ನಿಂದ ಅಪ್ರಾಪ್ತೆ ಮೇಲೆ ಅತ್ಯಚಾರ; ಗರ್ಭವತಿಯನ್ನಾಗಿಸಿ ಅಬಾರ್ಷನ್; ಪ್ರೀತಿ-ಪ್ರೇಮದ ನಾಟಕವಾಡಿ ಮೋಸ*

ಪ್ರಗತಿವಾಹಿನಿ ಸುದ್ದಿ: ಪೊಲೀಸ್ ಕಾನ್ಸ್ ಟೇಬಲ್ ಓರ್ವ ಅಪ್ರಾಪ್ತ ಬಾಲಕಿಗೆ ಲವ್-ಸೆಕ್ಸ್-ದೋಖಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.
ಯಾದಗಿರಿ ಜಿಲ್ಲೆಯ ಸೈದಾಪುರ ಠಾಣೆಯ ಕಾನ್ಸ್ ಟೇಬಲ್ ಬಲರಾಮ ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರವೆಸಗಿ, ಆಕೆಯನ್ನು ಗರ್ಭಿಣಿಯನ್ನಾಗಿ ಮಾಡಿ, ಬಳಿಕ ಅಬಾರ್ಷನ್ ಮಾಡಿ ಕೈಕೊಟ್ಟಿರುವ ಘಟನೆ ನಡೆದಿದೆ.
ಎರಡು ವರ್ಷಗಳ ಕಾಲ ಕಾನ್ಸ್ ಟೇಬಲ್ ಬಲರಾಮ 16 ವರ್ಷದ ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದಾನೆ. ಆಕೆ ಗರ್ಭಿಣಿಯಾಗುತ್ತಿದ್ದಂತೆ ಟ್ಯಾಬ್ಲೆಟ್ ಕೊಟ್ಟು ಅಬಾರ್ಷನ್ ಮಾಡಿಸಿದ್ದಾನೆ. ಅಪ್ರಾಪ್ತೆಗೆ 18 ವರ್ಷ ತುಂಬುತ್ತಿದಂತೆ 2024ರ ಡಿಸೆಂಬರ್ ನಲ್ಲಿ ರಿಜಿಸ್ಟರ್ ಮ್ಯಾರೇಜ್ ಆಗಿದ್ದಾನೆ. ಆದರೆ ಆಕೆಯನ್ನು ಮನೆಗೆ ಸೇರಿಸಿಕೊಳ್ಳಲು ಕಾನ್ಸಟೇಬಲ್ ಕುಟುಂಬದವರು ಒಪ್ಪಿಲ್ಲ. ಈಗ ತನಗೂ ಆಕೆಗೂ ಸಂಬಂಧವೇ ಇಲ್ಲ ಎಂದು ಕಾನ್ಸ್ ಟೇಬಲ್ ಮೋಸ ಮಾಡಿ ಎಸ್ಕೇಪ್ ಆಗಿದ್ದಾನೆ.
ಕಾನ್ಸ್ ಟೇಬಲ್ ಮಾಅಡಿರುವ ಅನ್ಯಾಯಕ್ಕೆ ನ್ಯಾಯ ಕೊಡಿಸುವಂತೆ ಸಂತ್ರಸ್ತೆ ಕುಟುಂಬದವರು ಪೊಲೀಸ್ ಠಾಣೆ ಮೆಟ್ಟಿಲೇರಿದ್ದಾರೆ. ಕಾನ್ಸ್ ಟೇಬಲ್ ಬಲರಾಮ ವಿರುದ್ಧ ಕೇಸ್ ದಾಖಲಾಗಿದೆ.