Kannada NewsKarnataka NewsLatest

ಯಡೂರು ದೇವಸ್ಥಾನದಿಂದ ಆಸ್ಪತ್ರೆ ನಿರ್ಮಾಣ -ಶ್ರೀಗಳು

ಪ್ರಗತಿವಾಹಿನಿ ಸುದ್ದಿ, ಮಾಂಜರಿ – ಕರ್ನಾಟಕ ಮಹಾರಾಷ್ಟ್ರ ರಾಜ್ಯದ ಜೊತೆಗೆ ಇನ್ನಿತರ ರಾಜ್ಯಗಳಿಂದ ಯಡೂರು ವೀರಭದ್ರ ಕ್ಷೇತ್ರಕ್ಕೆ ಬರುವ ಭಕ್ತಾದಿಗಳಿಗೆ ಅನುಕೂಲಕ್ಕಾಗಿ ಹಾಗೂ ಸಮಾಜದ ಆರೋಗ್ಯ ರಕ್ಷಣೆಗಾಗಿ ದೇವಸ್ಥಾನದಿಂದ ಆಸ್ಪತ್ರೆ ನಿರ್ಮಿಸುವ ಗುರಿ ಹೊಂದಲಾಗಿದೆ ಎಂದು ಶ್ರೀಕ್ಷೇತ್ರ ಯಡೂರಿನ ಕಾಡಸಿದ್ದೇಶ್ವರ ಸಂಸ್ಥಾನ ಮಠದ ಧರ್ಮಾಧಿಕಾರಿ ಹಾಗೂ ಶ್ರೀಶೈಲಪೀಠದ ಜಗದ್ಗುರುಗಳಾದ ಡಾ ಚನ್ನಸಿದ್ಧರಾಮ ಪಂಡಿತಾರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಹೇಳಿದರು.
ಅವರು ಇಂದು ಚಿಕ್ಕೋಡಿ ತಾಲೂಕಿನ ಹಳೆ ಯಡೂರ ಗ್ರಾಮದ ಸಾರ್ವಜನಿಕ ಹಾಗೂ ಎಲ್ಲ ಸಮಾಜದ ಜನರಿಗಾಗಿ ರಾಜ್ಯ ಸರ್ಕಾರದ ಸ್ಮಶಾನ ಭೂಮಿ ಯೋಜನೆ ಅಡಿಯಲ್ಲಿ ಸುಮಾರು ೨೪ ಲಕ್ಷ ರೂ ವಿಶೇಷ ಅನುದಾನ ಅಡಿ ನಿರ್ಮಿಸಲಾಗಿರುವ ರುದ್ರಭೂಮಿ ನಿರ್ಮಾಣ ಕಾರ್ಯಕ್ಕೆ ಚಾಲನೆ ನೀಡಿ ಸ್ವಾಮೀಜಿ ಮಾತನಾಡುತ್ತಿದ್ದರು.

ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಚಿಕ್ಕೋಡಿಯ ಸಂಸದರಾದ ಅಣ್ಣಾಸಾಹೇಬ್ ಜೊಲ್ಲೆ, ಬಸವಜ್ಯೋತಿ ಯೂತ್ ಫೌಂಡೇಶನ್ ಅಧ್ಯಕ್ಷರಾದ ಬಸವ ಪ್ರಸಾದ್ ಜೊಲ್ಲೆ, ಶಿವತ್ತೆಜ್ ಫೌಂಡೇಶನ್ ಅಧ್ಯಕ್ಷರಾದ ಅಜಯ್ ಸೂರ್ಯವಂಶಿ, ಯಡೂರು ಗ್ರಾಮ ಪಂಚಾಯಿತಿಯ ಮಾಜಿ ಅಧ್ಯಕ್ಷರಾದ ಅಮರ ಬೊರಗಾಂವೆ ಚಂದೂರ ಗ್ರಾಮದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಮಾಜಿ ಅಧ್ಯಕ್ಷರಾದ ಮನೋಜ್ ಖಿಚಡೆ ಅಣ್ಣಾಸಾಹೇಬ್ ಬೋರಗಾಂವೆ ಚಂದ್ರಕಾಂತ್ ಕಮತೆ ಹಾಜರಿದ್ದರು.
ಈ ವೇಳೆ ಅಮರ್ ಬೋರಗಾಂವೇ ಪ್ರಾಸ್ತಾವಿಕವಾಗಿ ಮಾತನಾಡಿ ಹಳೆಯಡೂರು ಗ್ರಾಮದಲ್ಲಿ ರುದ್ರಭೂಮಿ ನಿರ್ಮಾಣಕ್ಕಾಗಿ ಕಳೆದ ಐದು ವರ್ಷಗಳಿಂದ ಗ್ರಾಮದ ಹಿರಿಯರ ಶ್ರಮದಿಂದ ಇಂದು ಪರಿಶ್ರಮ ಸಾರ್ಥಕವಾಗಿದೆ. ರುದ್ರಭೂಮಿ ನಿರ್ಮಾಣಕ್ಕಾಗಿ ಹಾಗೂ ಸರಕಾರದ ಸಾವರ್ಜನಿಕ ಸಮಸ್ಯೆಗೆ ಸ್ಪಂದಿಸಿ ಕಾರ್ಯಕ್ಕೆ ಶ್ರಮಿಸಿದ ರಾಜು ದಡ್ಡೆ ಹಾಗೂ ಪೊಪಟ ಬೋರಗಾಂವೆ ಇವರನ್ನು ಸಾರ್ವಜನಿಕವಾಗಿ ಸನ್ಮಾನಿಸಿದರು.

ಈ ವೇಳೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ ಯಡೂರು ಗ್ರಾಮದ ಸರ್ವಾಂಗೀಣ ಅಭಿವೃದ್ಧಿಗಾಗಿ ರಾಜ್ಯ ಸರಕಾರದಿಂದ ಅನುದಾನ ಮಂಜೂರಾತಿ ನೀಡಿ ಅಭಿವೃದ್ಧಿ ಜೊತೆಗೆ ಇನ್ನಿತರ ಸಮಾಜಕಾರ್ಯಕ್ಕೆ ಶ್ರಮಿಸುವುದಾಗಿ ಹೇಳಿದರು. ಯಡೂರು ಗ್ರಾಮದ ಸಾರ್ವಜನಿಕರು ಅಭಿವೃದ್ಧಿಗಾಗಿ ನನ್ನನ್ನು ಸಂಪರ್ಕಿಸಿ ಸಹಕಾರ ಪಡೆಯಬೇಕೆಂದು ಸಲಹೆ ಸೂಚನೆಗಳನ್ನು ನೀಡಿದರು.
ಈ ಕಾರ್ಯಕ್ರಮಕ್ಕೆ ಯಡೂರು ಗ್ರಾಮದ ಡಾ. ಸುಕುಮಾರ ಚೌಗಲೆ, ಶ್ರೀಕಾಂತ ಬೋರಗಾಂವೆ, ಈರಗೌಡಾ ಪಾಟೀಲ, ಸುನಿಲ ಪವಾರ, ಮುಕುಂದ ಜಾಧವ, ಶ್ರೀಕಾಂತ ಬೆಡಗೆ, ಸುರೇಶ ಮೋಹಿತೆ, ರಮೇಶ ವಾಳಕೆ, ಈರಗೌಡಾ ಅಮ್ಮನಗಿ, ಹಾಗೂ ಹಲವಾರು ನಾಗರಿಕರು ಹಿರಿಯರು ಹಾಗೂ ಮುಖಂಡರು ಹಾಜರಿದ್ದರು ದಿನೇಶ್ ಹೆದುರೆ ಸ್ವಾಗತಿಸಿ ನಿರೂಪಿಸಿ ವಂದಿಸಿದರು.

ಚೀನಾ ವಸ್ತುಗಳನ್ನು ಬಹಿಷ್ಕರಿಸಿ

ಚೀನಾ ಅಟ್ಟಹಾಸದ ವಿರುದ್ಧ ಎಲ್ಲ ಭಾರತೀಯರೂ ನಿಂತಿದ್ದಾರೆ. ಭಾರತೀಯ ಸೈನಿಕರ ಜತೆ ನಿಲ್ಲುವ ಸಮಯ ಬಂದಿದೆ. ನಮ್ಮ ರಾಷ್ಟ್ರಪ್ರೇಮ, ತೋರುವ ಸಮಯ ಬಂದಿದೆ. ಆರ್ಥಿಕವಾಗಿ ಚೀನಾ ಉತ್ಪಾದಿಸುವ ವಸ್ತುಗಳಿಗೆ ಬಹಿಷ್ಕರಿಸಿ, ಎಲ್ಲರೂ ಚೀನಾಗೆ ಪಾಠ ಕಲಿಸೋಣ. ಆ ಮೂಲಕ ಚೀನಾ ಕುತಂತ್ರಕ್ಕೆ ಬಲಿಯಾದ ಸೈನಿಕರಿಗೆ ಗೌರವ ಸಲ್ಲಿಸೋಣ ಎಂದು ಶ್ರೀಶೈಲ ಪೀಠದ ಜದ್ಗುರುಗಳಾದ ಡಾ ಚನ್ನಸಿದ್ದರಾಮ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮಿಜಿಗಳು ಹೇಳಿದರು
ಅವರು ಯಡೂರ ಗ್ರಾಮದಲ್ಲಿ ಇಂದು ಶೀವತೇಜ ಫೌಂಡೆಶನ ಲಕ್ಷ್ಮಣ ಸೂರ್ಯವಂಶಿ ಮೆಮೋರಿಯಲ್ ಟ್ರಸ್ಟ್ ಹಾಗು ರೂಪಿಕಾ ಕೋ ಆಫ್ ಕ್ರೇಡಿಟ್ ಸೋಸಾಯಟಿಯ ಸಂಯುಕ್ತಾಶ್ರಯದಲ್ಲಿ ಆಯೋಜಿಸಲಾದ ಹುತಾತ್ಮಾ ಯೋಧರಿಗೆ ಶ್ರದ್ದಾಂಜಲಿ ಹಾಗೂ ಚಿನಾ ಉತ್ಪಾದಿತ ವಸ್ತುಗಳ ಬಹಿಷ್ಕಾರ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು ಈ ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಇ ಸಂಸದ ಅಣ್ಣಾಸಾಹೇಬ ಜೊಲ್ಲೆ ಬವಜ್ಯೋತಿ ಯುಥ್ ಫೌಂಡೆಶನ್ ಅಧ್ಯಕ್ಷರಾದ ಬಸವಪ್ರಸಾದ ಜೊಲ್ಲೆ ಅಜಯ ಸೂರ್ಯವಂಶಿ ಅಮರ ಬೋರಗಾಂವೆ ಹಾಗೂ ಶಿವತೇಜ ಫೌಂಡೆಶನ್‌ನ ನೂರಾರು ಸದಸ್ಯರು ಹಾಜರಿದ್ದರು.
ಈ ವೇಳೆ ಸಂಸದ ಅಣ್ಣಾಸಾಹೇಬ ಜೊಲ್ಲೆ ಮಾತನಾಡಿ, ಚೀನಾ ಭಾರತದ ಮಗ್ಗುಲ ಮುಳ್ಳಾಗಿ ಕಾಡುತ್ತಲೇ ಇದೆ. ಆಗಾಗ ಗಡಿತಂಟೆ ಮಾಡುತ್ತಿದ್ದರೂ, ಇದೇ ಮೊದಲ ಬಾರಿಗೆ ಭಾರತೀಯ ಸೈನಿಕರ ಮೇಲೆ ಕುತಂತ್ರದಿಂದ ಉಗ್ರ ದಾಳಿ ಮಾಡಿದೆ. ಅತ್ತ ವಿಶ್ವವೇ ಕೊರೋನಾ ಮಹಾಮಾರಿಯನ್ನು ಕಟ್ಟಿಹಾಕಲು ಶತಾಯಗತಾಯ ಪ್ರಯತ್ನಿಸುತ್ತಿದ್ದರೆ, ಇತ್ತ ಮಹಾಮಾರಿಯ ಸೃಷ್ಟಿಕರ್ತ ಚೀನಾ ಭಾರತದ ಜತೆ ಕಾಲುಕೆರೆದುಕೊಂಡು ಜಗಳಕ್ಕೆ ನಿಂತಿದೆ. ಇದಕ್ಕಾಗಿ ನಾವೆಲ್ಲರೂ ಚಿನಾ ಉತ್ಪಾದಿತ ವಸ್ತುಗಳನ್ನು ಬಹಿಷ್ಕರಿಸಿ ಸೈನಿಕರಿಗೆ ಧೈರ್ಯ ತುಂಬುವ ಕೆಲಸ ಮಾಡಬೆಕಾಗಿದೆ ಎಂದರು
ಫೋಟೋ: ೧೯ಮಾಂಜರಿ೨
ಯಡೂರ ಗ್ರಾಮದಲ್ಲಿ ಆಯೋಜಿಸಲಾದ ಚೀನಾ ವಸ್ತು ಬಹಿಷ್ಕಾರ ಕಾರ್ಯಕ್ರಮದಲ್ಲಿ ಪ್ರಮಾಣ ವಚನ ಸ್ವಿಕರಿಸುವಾಗ ಶ್ರಶೀಲ ಜಗದ್ಗುರುಗಳು ಅಣ್ಣಾಸಾಹೇಬ ಜೊಲ್ಲೆ ಹಾಗೂ ಇನ್ನಿತರರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button