Kannada NewsKarnataka News

ಕಾಳಿ, ಹಿಡಕಲ್ ಡ್ಯಾಂ, ಆಲಮಟ್ಟಿ ಸೇರಿ ರಾಜ್ಯದ 9 ಕಡೆ ವಾಟರ್ ಏರೋಡ್ರೋಮ್ ನಿರ್ಮಾಣ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿಯ ಹಿಡಕಲ್ ಡ್ಯಾಂ ಸೇರಿದಂತೆ ರಾಜ್ಯದ 9 ಕಡೆಗಳಲ್ಲಿ ವಾಟರ್ ಏರೋಡ್ರೋಮ್ ನಿರ್ಮಾಣ ಮಾಡಲು ಯೋಚಿಸಲಾಗಿದೆ ಎಂದು  ವಸತಿ ಹಾಗೂ ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ಅವರು ಸರ್ಕಾರವು  ನಾಗರಿಕ ವಿಮಾನಯಾನ ವ್ಯವಸ್ಥೆಯನ್ನು ಪರಿಣಾಮಕಾರಿಯಾಗಿ ನಿರ್ಮಾಣ ಮಾಡಲಿದೆ. 9 ವಾಟರ್ ಏರೋಡ್ರೋಮ್‌ಗಳನ್ನು ಅಭಿವೃದ್ಧಿಪಡಿಸಲು ಯೋಜಿಸಲಾಗಿದೆ ಎಂದು ಹೇಳಿದ್ದಾರೆ.

ಕೆಆರ್‌ಎಸ್, ಕಾಳಿ ನದಿ, ಬೈಂದೂರು, ಮಲ್ಪೆ, ಮಂಗಳೂರು, ತುಂಗಭದ್ರಾ, ಲಿಂಗನಮಕ್ಕಿ, ಆಲಮಟ್ಟಿ ಮತ್ತು ಹಿಡಕಲ್ ಜಲಾಶಯಗಳಲ್ಲಿ ವಾಟರ್ ಏರೋಡ್ರೋಮ್‌ಗಳ ಅಭಿವೃದ್ಧಿಗೆ  ಸ್ಥಳಗಳನ್ನು ಗುರುತಿಸಲಾಗಿದೆ. ವಾಟರ್ ಏರೋಡ್ರೋಮ್ ಒಂದು ತೆರೆದ ನೀರಿನ ಸ್ಥಳವಾಗಿದ್ದು, ಸೀಪ್ಲೇನ್‌ಗಳು ಮತ್ತು ಉಭಯಚರ ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕ್-ಆಫ್‌ಗಳಿಗೆ ಬಳಸಬಹುದು.

ಭೂ-ಆಧಾರಿತ ವಿಮಾನ ನಿಲ್ದಾಣಗಳಿಗೆ ಹೋಲಿಸಿದರೆ ಅವುಗಳನ್ನು ಕಡಿಮೆ ವೆಚ್ಚ ಮತ್ತು ಸಮಯದಲ್ಲಿ ನಿರ್ಮಿಸಬಹುದು.  ರನ್ ವೇ ನಿರ್ಮಾಣದ ಅಗತ್ಯವಿರುವುದಿಲ್ಲ.

ಸೀಪ್ಲೇನ್‌ಗಳು ಅಥವಾ ಉಭಯಚರ ವಿಮಾನಗಳು ಲ್ಯಾಂಡಿಂಗ್ ಮತ್ತು ಟೇಕ್‌ಆಫ್‌ಗಾಗಿ ಬಳಸಬಹುದಾದ ತೆರೆದ ನೀರಿನ ಪ್ರದೇಶವನ್ನು ವಾಟರ್ ಏರೋಡ್ರೋಮ್ ಎಂದು ಕರೆಯಲಾಗುತ್ತದೆ.   ಭೂಮಿಯಲ್ಲಿ ಟರ್ಮಿನಲ್ ಕಟ್ಟಡವನ್ನು ನಿರ್ಮಿಸಿ, ಅಲ್ಲಿ ವಿಮಾನವನ್ನು ಹಡಗಿನಂತೆ ನಿಲ್ಲಿಸಲು  ವ್ಯವಸ್ಥೆ ಮಾಡಬಹುದು.

ಹಿಡಕಲ್ ಡ್ಯಾಮ್ ಪ್ರದೇಶವನ್ನು 148 ಕೋಟಿ ರೂ. ವೆಚ್ಚದಲ್ಲಿ ಮೈಸೂರು ಉದ್ಯಾನದ ಮಾದರಿಯಲ್ಲಿ ಅತ್ಯದ್ಭುತ ಪ್ರವಾಸಿ ತಾಣವನ್ನಾಗಿಸಲು ಸಚಿವ ಉಮೇಶ ಕತ್ತಿ ಈಗಾಗಲೆ ಯೋಜಿಸಿದ್ದು, ವಾಟರ್ ಏರೋಡ್ರೋಮ್ ಇದಕ್ಕೆ ಇನ್ನಷ್ಟು ಮೆರಗು ನೀಡಲಿದೆ.

ಬೆಳಗಾವಿ ಬಳಿ 500 ಎಕರೆಯಲ್ಲಿ ಉದ್ಯಾನ ಕಾಶಿ : ಅಪರೂಪದ ಪ್ರವಾಸಿ ತಾಣವಾಗಲಿದೆ ಹಿಡಕಲ್ ಡ್ಯಾಂ; ಸಚಿವ ಉಮೇಶ ಕತ್ತಿ ಯೋಜನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button