ವಿವಿಧ ಗ್ರಾಮಗಳ ದೇವಸ್ಥಾನ ಕಾಮಗಾರಿಗೆ ಪೂಜೆ ನೆರವೇರಿಸಿದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ವಿರೋಧಿಗಳ ಅಪಪ್ರಚಾರದ ಮಧ್ಯೆಯೂ ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕ್ಷೇತ್ರದಲ್ಲಿ ಅಭಿವೃದ್ಧಿ ಕಾಮಗಾರಿಗಳನ್ನು ಮುಂದುವರಿಸಿದ್ದಾರೆ.
ಬುಧವಾರ ಕ್ಷೇತ್ರದ ಮುತಗಾ ಗ್ರಾಮದ ಆದಿಶಕ್ತಿ ಮಾತಾ ದೇವಸ್ಥಾನದ ನೂತನ ಕಟ್ಟಡ ನಿರ್ಮಾಣ ಕಾಮಗಾರಿಗೆ ಲಕ್ಷ್ಮಿ ಹೆಬ್ಬಾಳಕರ್ ಅಧಿಕೃತವಾಗಿ ಚಾಲನೆಯನ್ನು ನೀಡಿದರು.
ಶಾಸಕರ ಅನುದಾನದಲ್ಲಿ ಈ ದೇವಸ್ಥಾನಕ್ಕೆ 25 ಲಕ್ಷ ರೂ,ಗಳನ್ನು ಒದಗಿಸಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮೀಟಿಯವರು, ರಾಯಣ್ಣ ಮಲ್ಲವ್ವಗೋಳ, ಕಾರ್ಯದರ್ಶಿಯಾದ ಭಾಗಣ್ಣ ಕೊಂಪ್ಪಿ, ಮಾರುತಿ ಮಲ್ಲವ್ವಗೋಳ, ಭರಮಾ ಮಲ್ಲವ್ವಗೋಳ, ಮಾರುತಿ ಕೊಂಪ್ಪಿ ಹಾಗೂ ಮುಂತಾದವರು ಉಪಸ್ಥಿತರಿದ್ದರು.
ಕ್ಷೇತ್ರದ ಹೊನ್ನಿಹಾಳ ಗ್ರಾಮದ ಶ್ರೀ ವಿಠ್ಠಲ ಬೀರದೇವ್ ಮಂದಿರದ ನೂತನ ಕಟ್ಟಡದ ಕಾಮಗಾರಿಗೆ ಸಹ ಲಕ್ಷ್ಮಿ ಹೆಬ್ಬಾಳಕರ್ ಬುಧವಾರ ಪೂಜೆಯ ಮೂಲಕ ಚಾಲನೆ ನೀಡಿದರು. ಈ ದೇವಸ್ಥಾನಕ್ಕೆ ಶಾಸಕರ ಅನುದಾನದ ವತಿಯಿಂದ 50 ಲಕ್ಷ ರೂ,ಗಳನ್ನು ನೀಡಲಾಗಿದೆ.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮೀಟಿಯವರು, ಕಡಬುಗೋಳ, ಗ್ರಾಮ ಪಂಚಾಯತಿಯ ಸದಸ್ಯರಾದ ಪ್ರಕಾಶ ಕಡ್ಯಾಗೋಳ, ಅಪ್ಸರ್ ಭಾಯ್, ನೂರ್ ಭಾಯ್ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಮಾರಿಹಾಳ ಗ್ರಾಮದಲ್ಲಿ ನೂತನ ಮರಾಠಾ ಸಾಂಸ್ಕೃತಿಕ ಭವನ ನಿರ್ಮಾಣದ ಸಲುವಾಗಿ ಗ್ರಾಮಕ್ಕೆ ತೆರಳಿ ಸ್ಥಳೀಯ ಮುಖಂಡರೊಂದಿಗೆ ಚರ್ಚಿಸಿದ ಲಕ್ಷ್ಮಿ ಹೆಬ್ಬಾಳಕರ್, ಸ್ಥಳದ ಪರಿಶೀಲನೆಯನ್ನು ನಡೆಸಿ, ಶೀಘ್ರದಲ್ಲಿ ಸಾಂಸ್ಕೃತಿಕ ಭವನ ಕಟ್ಟಡದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಬಸವರಾಜ ಮ್ಯಾಗೋಟಿ, ರಾಮಚಂದ್ರ ಚವ್ಹಾಣ, ಶಿವರಾಮ್ ಸಾಳುಂಕೆ, ಫಕೀರ್ ಮೊದಗೆ, ಮಲ್ಲಪ್ಪ ಕಲ್ಲಣ್ಣವರ, ಬಸವಣ್ಣಿ ಜಾನಕಿ ಮುಂತಾದವರು ಉಪಸ್ಥಿತರಿದ್ದರು.
ಬೆಳಗಾವಿ ಗ್ರಾಮೀಣ ಕ್ಷೇತ್ರದ ಖನಗಾಂವ ಬಿ ಕೆ ಗ್ರಾಮದಲ್ಲಿ ಶ್ರೀ ಲಕ್ಷ್ಮೀ ದೇವಿಯ ನೂತನ ಕಟ್ಟಡ ನಿರ್ಮಾಣವನ್ನು ಮಾಡುವ ಸಲುವಾಗಿ ಶಾಸಕರ ಅನುದಾನದಲ್ಲಿ 25 ಲಕ್ಷ ರೂ,ಗಳನ್ನು ಮಂಜೂರು ಮಾಡಿಸಲಾಗಿದ್ದು, ಬುಧವಾರ ದೇವಸ್ಥಾನ ಕಟ್ಟಡದ ಕಾಮಗಾರಿಗಳ ಕುರಿತು ಎಂಜಿನಿಯರ್ ಹಾಗೂ ಗ್ರಾಮಸ್ಥರ ಜೊತೆ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಚರ್ಚಿಸಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ದೇವಸ್ಥಾನದ ಕಮೀಟಿಯವರು, ಶಂಕರಗೌಡ ಪಾಟೀಲ, ಅಡಿವೇಶ ಇಟಗಿ, ಪಾರ್ವತಿ ಹಿರೇಮಠ, ರುಕ್ಮಿಣಿ ಹೊಸಮನಿ, ಲಗಮಣ್ಣ ಚಚಡಿ ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ