Film & EntertainmentKannada NewsKarnataka NewsLatest
ಖಾನಾಪುರ ತಾಲೂಕಿನಲ್ಲಿ ಎಷ್ಟಾಗಿದೆ ಮಳೆ?

ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ಖಾನಾಪುರ ತಾಲೂಕಿನಲ್ಲಿ ಭಾನುವಾರ ಹಗಲು ಮತ್ತು ರಾತ್ರಿ ಸತತ ಮಳೆಯಾಗುತ್ತಿದೆ.
ಎಡೆಬಿಡದೆ ಸುರಿದ ಮಳೆಗೆ ತಿವೋಲಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸೇತುವೆ ಜಲಾವೃತವಾಗಿದೆ. ಕಾಡಂಚಿನ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತವಾಗಿದೆ.
ಖಾನಾಪುರದಲ್ಲಿ 62.8 ಮಿಮೀ, ನಾಗರಗಾಳಿಯಲ್ಲಿ 52.4, ಬೀಡಿಯಲ್ಲಿ 52.2, ಕಕ್ಕೇರಿಯಲ್ಲಿ 34.6, ಅಸೋಗಾದಲ್ಲಿ 76.2, ಗುಂಜಿಯಲ್ಲಿ 113, ಲೋಂಡಾದಲ್ಲಿ 126.4, ಜಾಂಬೋಟಿಯಲ್ಲಿ 144.4, ಕಣಕುಂಬಿಯಲ್ಲಿ 145 ಮಿಮೀ ಮಳೆಯಾಗಿದೆ.


