
ಪ್ರಗತಿವಾಹಿನಿ ಸುದ್ದಿ; ಬೆಳಗಾವಿ ಗ್ರಾಮೀಣ ಕ್ಷೇತ್ರದ ಸುಳೇಭಾವಿಯಲ್ಲಿ ಪ್ರಿಮಿಯರ್ ಲೀಗ್ ಸಿಸನ್ 4ರ ಕ್ರಿಕೆಟ್ ಹಾಪ್ ಪಿಚ್ ಪಂದ್ಯಾವಳಿಯನ್ನು ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಉದ್ಘಾಟಿಸಿದರು.

ಗ್ರಾಮೀಣ ಯುವಕರನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಪ್ರತಿ ವರ್ಷ ಲಕ್ಷ್ಮೀತಾಯಿ ಫೌಂಡೇಷನ್ ವತಿಯಿಂದ ಗ್ರಾಮೀಣ ಕ್ರೀಡೆಗಳಿಗೆ ನೆರವು ನೀಡಲಾಗುತ್ತಿದೆ ಎಂದು ಚನ್ನರಾಜ ಹಟ್ಟಿಹೊಳಿ ಈ ಸಂದರ್ಭದಲ್ಲಿ ತಿಳಿಸಿದರು.
ಗ್ರಾಮೀಣ ಕ್ಷೇತ್ರದ ಅನೇಕ ಶಾಲೆಗಳಿಗೆ ಕ್ರೀಡಾ ಸಾಮಗ್ರಿ ವಿತರಿಸಲಾಗಿದೆ. ಯುವ ಸಂಘಗಳಿಗೆ ಜಿಮ್ ಸಲಕರಣೆ ನೀಡಲಾಗಿದೆ. ಎಲ್ಲರೂ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಅವರು ಕೋರಿದರು.
ಈ ಸಂದರ್ಭದಲ್ಲಿ ಗ್ರಾಮದ ಹಿರಿಯರು, ಫಕೀರಪ್ಪ ಅಮರಾಪುರ, ಮಹೇಶ ಸುಗ್ನೆಣ್ಣವರ, ಬಸನಗೌಡ ಪಾಟೀಲ, ಬಸಯ್ಯ ಹಿರೇಮಠ, ಸಿದ್ದಯ್ಯ ಮನತುರಗಿಮಠ, ತಿಪ್ಪಣ್ಣ ಲೋಕರೆ, ಸಂಭಾಜಿ ಯಮೋಜಿ, ನಾಗಯ್ಯ ಕುಡಚಿಮಠ್, ಲಕ್ಷ್ಮೀ ನಾರಾಯಣ ಕಲ್ಲೂರ್, ದತ್ತಾ ಬಂಡಿಗೇಣಿ, ವಿಠ್ಠಲ ಬಂಡಿಗೇಣಿ, ಮಂಜುನಾಥ ಪೂಜೇರಿ, ಮಲ್ಲೇಶ್ ಕಸಳ್ಳಿ, ಮಂಜುನಾಥ ಪಾತಳಿ, ಕಲ್ಲಪ್ಪ ಕಾಮಕರ್ ಹಾಗೂ ಸುಳೇಭಾವಿ ಗ್ರಾಮಸ್ಥರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ