*ವಿಶ್ವ ಬ್ಯಾಂಕ್ ಪ್ರತಿನಿಧಿಗಳಿಂದ ನಿರಂತರ ನೀರು ಸರಬರಾಜು ಯೋಜನೆ ಪ್ರಗತಿ ಪರಿಶೀಲನೆ*
ಪ್ರಗತಿವಾಹಿನಿ ಸುದ್ದಿ: ಬೆಳಗಾವಿ ನಗರ ಮಹಾನಗರ ಪಾಲಿಕೆ ಮತ್ತು ಕೆಯುಐಡಿಎಫ್‌ಸಿ ವತಿಯಿಂದ ಅನುಷ್ಠಾನಗೊಳ್ಳುತ್ತಿರುವ ನಿರಂತರ ನೀರು ಸರಬರಾಜು ಯೋಜನೆಯ ಪ್ರಗತಿಯನ್ನು ಸೆ 10 ರಂದು ವಿಶ್ವಬ್ಯಾಂಕ್ ತಂಡದ ಹಿರಿಯ ಸಾಮಾಜಿಕ ಅಭಿವೃದ್ಧಿ ಪರಿಣಿತರಾದ ಆರ್. ಆರ್. ಮೋಹನ್‌ರವರು ಬೆಳಗಾವಿ ನಗರದ ವಿವಿಧ ಬಡಾವಣೆಗಳಿಗೆ ಭೇಟಿ ನೀಡಿ ಕಾಮಗಾರಿಗಳನ್ನು ಪರಿಶಿಲಿಸಿ ಸಾರ್ವಜನಿಕರೊಂದಿಗೆ ಸಮಾಲೋಚನೆ ನಡೆಸಿ ಅಭಿಪ್ರಾಯ ಪಡೆದರು.
ಮುತ್ಯಾನಟ್ಟಿಯಲ್ಲಿ ಪಾಲಿಕೆಯಿಂದ ನೀರು ಸರಬರಾಜು ವ್ಯತ್ಯಯವಾಗಿದ್ದರಿಂದ ಅದರ ಬದಲಾಗಿ ಇಂಡಾಲ್ ಕಂಪನಿಯು ತನ್ನ ಸಾಮಾಜಿಕ ಜವಾಬ್ದಾರಿಯಿಂದ ಸರಬರಾಜು ಮಾಡುತ್ತಿದೆ. ಹೊಸ ಪೈಪ್ ಲೈನ್ ಅಳವಡಿಸಿ 24X7 ನಳ ಸಂಪರ್ಕ ನೀಡುತ್ತಿದೆ. ಇದೇ ಸಂದರ್ಭದಲ್ಲಿ ಮಹಾಂತೇಶ ನಗರ ಸೆಕ್ಟರ ನಂ.11 ಕ್ಕೆ ಭೇಟಿ ನೀಡಿ ನೀರು ಸಬರಾಜಿನಲ್ಲಾದ ಸುಧಾರಣೆ ಹಾಗೂ ಬಲ್ಕ ಎಸ್ ಎಂ ಎಸ್ ತಲುಪುತ್ತಿರುವ ಬಗ್ಗೆ ಸಾರ್ವಜನಿಕರಿಂದ ಮಾಹಿತಿ ಪಡೆದರು. ತದನಂತರ ಕಣಬರ್ಗಿ ನಗರಕ್ಕೆ ಭೇಟಿ ನೀಡಿ ಹೊಸದಾಗಿ ಯೋಜನೆಯಿಂದ ಕಲ್ಪಿಸುತ್ತಿರುವ 24X7 ನಳ ಸಂಪರ್ಕ ಪ್ರಕ್ರಿಯೆಯನ್ನು ಪರಿಶೀಲಿಸಿ ಸಾರ್ವಜನಿಕರೊಂದಿಗೆ ಚರ್ಚಿಸಿದರು.
ಹಾರ್ಮೋನಿ ಕಾಲೋನಿಗೆ ನೀರು ಸರಬರಾಜು ವ್ಯವಸ್ಥೆಯೇ ಇಲ್ಲದಿರುವರಿಂದ ನೀರು ಸರಬರಾಜು ವ್ಯವಸ್ಥೆಯನ್ನು ಮಾಡಲಾಗುತ್ತಿದೆ. ನಂತರ ಸಂಗಮೇಶ್ವರ ನಗರದ ಗ್ರಾಹಕ ಸೇವಾ ಕೇಂದ್ರದಲ್ಲಿ ಸೇವಾ ಸೌಲಭ್ಯಗಳನ್ನು ಪರಿಶೀಲಿಸಿದರು. ಜಕ್ಕೇರಿ ಹೋಂಡ, ಗೋಕುಲ ನಗರಕ್ಕೆ ಪ್ರತಿ ದಿನ 2 ಘಂಟೆ ನೀರು ಸರಬರಾಜಾ ಮಾಡಲಾಗುತ್ತಿದೆ. ಗೋವಾವೇಸ್‌ದಲ್ಲಿರುವ ಕೇಂದ್ರಿಕೃತ ನಿಯಂತ್ರಣಾ ಕೇಂದ್ರದಲ್ಲಿ ದಾಖಲಾಗುವ ದೂರುಗಳನ್ನು ಪರಿಹರಿಸುವ ಪ್ರಕ್ರಿಯೆ ಹಾಗೂ ಗ್ರಾಹಕರಿಗೆ ನೀಡುವ ಸಂದೇಶ, ಮತ್ತು ದೂರು ಪರಿಹರಿಸಿದ ನಂತರ ಗ್ರಾಹಕರ ಸಮಸ್ಯೆಗಳನ್ನು ಪರಿಹರಿಸಿದ, ನಂತರ ರಾಣಿ ಚೆನ್ನಮ್ಮಾ ನಗರಕ್ಕೆ 24X7 ನಳ ಸಂಪರ್ಕ ಪ್ರಕ್ರಯೆಯನ್ನು ಪರಿಶಿಲನೆ ಮಾಡಿದರು.
ಕೆಯುಐಡಿಎಫ್‌ಸಿ-ಯೋಜನಾ ಅನುಷ್ಠಾನ ಘಟಕದಲ್ಲಿ ಯೋಜನೆಯ ನಿರ್ವಾಹಕರಾದ ಮೆl ಎಲ್ ಮತ್ತು ಟಿ ಯವರೊಂದಿಗೆ ಕಾಮಗಾರಿ ಪ್ರಗತಿ ಪರಿಶೀಲನೆ ಹಾಗೂ ಸಾಮಾಜಿಕ ಶಾಖೆಯ ಸಾಮಾಜಿಕ ಮಧ್ಯಂತರ ಸಂವಹನಾ ಚಟುವಟಿಕೆಗಳ ಮಾಹಿತಿ ಪಡೆದರು. ಪ್ರಗತಿಯ ಸ್ಥಿತ ಮಟ್ಟದಲ್ಲಿದ್ದು, ಇನ್ನೂ ವೇಗ ಪಡೆಯಲು ಸೂಚಿಸಿ, ಮಹಾನಗರ ಪಾಲಿಕೆಯ ನಿರಂತರ ಮೌಲ್ಯಮಾಪನ ಮಾಡಬೇಕೆಂದು ತಿಳಿಸಿದರು.
ಈ ಸಂದರ್ಭದಲ್ಲಿ ಯೋಜನೆಯ ಕೆಯುಐಡಿಎಫ್‌ಸಿ ಕೇಂದ್ರ ಕಛೇರಿಯ ಸಾಮಾಜಿಕ ವ್ಯವಸ್ಥಾಪಕ ಆಂಜನಪ್ಪ ಕಾರ್ಯನಿರ್ವಾಹಕ ಅಭಿಯಂತರರಾದ ಅಶೋಕ ಬುರಕುಲೆ, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರಾದ ಶಶಿಕುಮಾರ ಹತ್ತಿ, ವಿಜಯಾನಂದ ಸೋಲ್ಲಾಪುರ, ಸಾಮಾಜಿಕ ಸಿಬ್ಬಂದಿಗಳಾದ ಬಿ ಎಚ್ ಲಕ್ಕಣ್ಣವರ, ಸೌಮ್ಯ, ಸಾರ್ವಜನಿಕ ಸಂಪರ್ಕ ಅಧಿಕಾರಿ ಪ್ರಕಾಶ ಕೋಷ್ಠಿ, ಎಲ್ ಮತ್ತು ಟಿಯ ದೂಡಮನಿ, ಕೆ. ಭೀಮಪ್ಪ, ಇಬ್ರಾಹಿಂ, ಕಾರ್ಯಾಚರಣೆ ನಿರ್ವಹಣೆಯ ಅಧಿಕಾರಿ ಸಿಬ್ಬಂದಿ ವರ್ಗ, ಸ್ನೇಕ್ ಕನಸಲ್ಲೆನ್ಸಿ ಸಿಬ್ಬಂದಿಗಳು ನೆರವು ಸಂಸ್ಥೆಯ ಚಂದ್ರಲೇಖ, ರವೀಂದ್ರ ಮೋಕಾಶಿ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ