
ಪ್ರಗತಿವಾಹಿನಿ ಸುದ್ದಿ: ಬೀದರ್ ನಲ್ಲಿ ಗುತ್ತಿಗೆದಾರ ಸಚಿನ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷ ಬಿಜೆಪಿ ನಾಯಕರು ಸಚಿವ ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಆಗ್ರಹಿಸಿ ಪ್ರತಿಭಟನೆ ನಡೆಸುತಿದ್ದಾರೆ. ಈ ನಡುವೆ ಗುತ್ತಿಗೆದಾರ ಸಚಿನ್ ಆತ್ಮಹತ್ಯೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ.
ಆತ್ಮಹತ್ಯೆಗೆ ಶರಣಾಗಿರುವ ಸಚಿನ್ ಗುತ್ತಿಗೆದಾರರನೇ ಅಲ್ಲ ಎಂದು ಹೇಳಲಾಗುತ್ತಿದೆ. ಸಚಿನ್ ಪಂಚಾಳ್ ಗುತ್ತಿಗೆದಾರ ಎಂದು ಎಲ್ಲೂ ಹೆಸರಿಲ್ಲ. ಎಲ್ಲೂ ನೋಂದಣಿ ಕೂಡ ಆಗಿಲ್ಲ. ಆತನ ಹೆಸರಲ್ಲಿ ಗುತ್ತಿಗೆದಾರ ಎಂದು ಯವೌದೇ ಲೈಸನ್ಸ್ ಕೂಡ ಇಲ್ಲ ಎಂದು ತಿಳಿದುಬಂದಿದೆ.
ಈ ಬಗ್ಗೆ ಗುತ್ತಿಗೆದಾರರಸಂಘದ ಅಧ್ಯಕ್ಷ ಜಗನ್ನಾಥ್ ಮಾಹಿತಿ ನೀಡಿದ್ದು, ಸಚಿನ್ ಗುತ್ತಿಗೆದರನೇ ಅಲ್ಲ. ಆತನ ಬಳಿ ಲೈಸನ್ಸ್ ಇಲ್ಲ ಈ ಬಗ್ಗೆ ಬೀದರ್ ಗುತ್ತಿಗೆರಾರ ಸಂಘದ ಅಧ್ಯಕ್ಷರಿಂದಲೂ ಮಾಹಿತಿ ಪಡೆದಿದ್ದೇನೆ ಎಂದು ತಿಳಿಸಿದ್ದಾರೆ.
ಗುತ್ತಿಗೆದಾರ ಆತ್ಮಹತ್ಯೆ ಕೇಸ್ ಸಂಬಂಧ ಧನ್ನೂರು ಪೊಲೀಸ್ ಠಾಣೆ ಪಿಎಸ್ ಐ ವಿಶ್ವಾರಾಧ್ಯ ಅವರನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಲಾಗಿದೆ.




