Belagavi NewsBelgaum NewsKannada NewsKarnataka NewsLatestPolitics

*ಅವೈಜ್ಞಾನಿಕ ಕಾಮಗಾರಿ ತಡೆಗೆ ಗುತ್ತಿಗೆದಾರರ ಸಭೆ: ಸಚಿವ ಸತೀಶ್ ಜಾರಕಿಹೊಳಿ*

ಪ್ರಗತಿವಾಹಿನಿ ಸುದ್ದಿ: ಹುಕ್ಕೇರಿ: ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಗೆ ತಡೆ ಗಟ್ಟಲು ಗುತ್ತಿಗೆದಾರರ ಸಭೆ ಜರುಗಿಸಲಾಗುವುದು ಎಂದು ಲೋಕೋಪಯೋಗಿ ಸಚಿವ ಸತೀಶ ಜಾರಕಿಹೋಳಿ ಹೇಳಿದರು.


ಹುಕ್ಕೇರಿ ನಗರದಲ್ಲಿ ತ್ರೈಮಾಸಿಕ ಸಭೆಯಲ್ಲಿ ಸಾರ್ವಜನಿಕರು ಮಾತನಾಡಿ ತಾಲೂಕಿನ ಜೆ ಜೆ ಎಂ ಕಾಮಗಾರಿ ಯನ್ನು ರಸ್ತೆ ಪಕ್ಕದಲ್ಲೇ ತಗ್ಗು ಗುಂಡಿ ತಗೆದು ಹಾಗೆ ಬಿಟ್ಟಿದ್ದಾರೆ. ಕೆಲ ಗ್ರಾಮಗಳಲ್ಲಿ ರಸ್ತೆಯನ್ನೆ ಅಗೆದು ಹಾಗೆ ಬಿಟ್ಟಿದ್ದರಿಂದ ಒಂದು ಮಗು ಸಾವನ್ನಪ್ಪಿದೆ. ಕಾರಣ ಗುತ್ತಿಗೆದಾರರ ಅವೈಜ್ಞಾನಿಕ ಕಾಮಗಾರಿಗಳಿಂದ ಗ್ರಾಮಗಳಲ್ಲಿ ರಸ್ತೆ ಹಾಳಾಗುತ್ತಿವೆ. ಅಪಘಾತಗಳು ಸಂಭವಿಸುತ್ತಿವೆ. ಇದಕ್ಕೆಲ್ಲ ಅಧಿಕಾರಿಗಳು ಮತ್ತು ಗುತ್ತಿಗೆದಾರರ ಬೇಜವಾಬ್ದಾರಿ ಕಂಡು ಬರುತ್ತಿದೆ ಎಂದು ಆರೋಪಿಸಿದರು.


ಸಚಿವ ಸತೀಶ ಜಾರಕಿಹೋಳಿ ಮಾತನಾಡಿ, ಮುಂಬರುವ ದಿನಗಳಲ್ಲಿ ಎಲ್ಲ ಗುತ್ತಿಗೆದಾರರ ಸಭೆ ಕರೆದು ಈ ಕುರಿತು ಕುಲಂಕುಷವಾಗಿ ಚರ್ಚಿಸಲಾಗುವುದು ಹಾಗೂ ಈಗಾಗಲೇ ರಸ್ತೆ ಅಗೆದು ಕಾಮಗಾರಿ ಮಾಡುತ್ತಿರುವವರ ವಿರುದ್ಧ ಪೋಲಿಸ್ ಠಾಣೆ ಯಲ್ಲಿ ಪ್ರಕರಣ ಧಾಖಲಿಸಲು ಕ್ರಮ ಜರುಗಿಸಲು ಅಧಿಕಾರಿಗಳಿಗೆ ಸೂಚನೆ ನೀಡಿದರು.


ಮುಂಬರುವ ದಿನಗಳಲ್ಲಿ ರಾಸಾಯನಿಕ ಗೊಬ್ಬರದಿಂದ ಮಾರಣಾಂತಿಕವಾಗಿ ಕಾಯಿಲೆಗಳು ಬರುತ್ತಿರುವ ಹಿನ್ನಲೆಯಲ್ಲಿ ರೈತರು ಎಮ್ಮೆ ಮತ್ತು ಹಸು ಸಾಕುವ ಮೂಲಕ ಸಾವಯವ ಗೋಬ್ಬರ ಬಳೆಸಿ ನೈಸರ್ಗಿಕವಾಗಿ ಬೆಳೆಗಳನ್ನು ಬೆಳೆಸುವುದನ್ನು ಪ್ರೋತ್ಸಾಹಿಸಲು ಕ್ರಮ ಜರುಗಿಸ ಬೇಕು ಎಂದರು.

Home add -Advt


ತಹಸಿಲ್ದಾರ ಬಲರಾಮ ಕಟ್ಟಿಮನಿ, ತಾಲೂಕು ಪಂಚಾಯತ್ ಕಾರ್ಯನಿರ್ವಾಹಕ ಅಧಿಕಾರಿ ಟಿ ಆರ್ ಮಲ್ಲಾಡದ, ಗ್ಯಾರಂಟಿ ಯೋಜನೆಗಳ ಅಧ್ಯಕ್ಷ ಶಾನೂಲ ತಹಸಿಲ್ದಾರ, ನಾಮ ನಿರ್ದೆಶನ ಸದಸ್ಯ ಬಸವರಾಜ ಕೋಳಿ, ಲಕ್ಷ್ಮಣ ಹೋಲಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳಾದ ಆರ್.ಬಿ.ನಾಯ್ಕರ, ಶಶಿಕಾಂತ ವಂದಾಳೆ, ಉದಯ ಕುಡಚಿ, ಪೋಲಿಸ್ ಅಧಿಕಾರಿಗಳಾದ ಮಹಾಂತೇಶ ಬಸ್ಸಾಪುರೆ, ಶಿವಶಂಕರ ಅವುಜಿ, ಜಾವೇದ ಮುಶಾಪೂರೆ ಮೊದಲಾದವರು ಉಪಸ್ಥಿತರಿದ್ದರು.

Related Articles

Back to top button