ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಅತ್ಯಾಧುನಿಕ ತಾಂತ್ರಿಕತೆ ಬಳಸಿ ನಕಲು ಮಾಡಲು ಯತ್ನಿಸಿದ ಮತ್ತೊಬ್ಬ ಯುವತಿಯನ್ನು ಬೆಳಗಾವಿಯ ಕ್ಯಾಂಪ್ ಪೊಲೀಸ್ ಠಾಣೆಯಲ್ಲಿ ಭಾನುವಾರ ಬಂಧಿಸಲಾಗಿದೆ.
ನಾಗರೀಕ ಪೊಲೀಸ್ ಕಾನ್‌ಸ್ಟೆಬಲ್ ಹುದ್ದೆಗಳ ಲಿಖಿತ ಪರೀಕ್ಷೆಯ ವೇಳೆ ನಡೆದ ಎರಡನೆ ಘಟನೆ ಇದಾಗಿದೆ.
ಮೂಡಲಗಿ ತಾಲೂಕಿನ ತಿಗಡಿಯ ಸರಸ್ವತಿ ಅರ್ಜುನ್ ಪೂಜೇರಿ (23) ಬಂಧಿತ ಯುವತಿ. ಈಕೆ ವನಿತಾ ವಿದ್ಯಾಲಯದ ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ಬರೆಯುತ್ತಿದ್ದಳು. ಈ ವೇಳೆ ಇಲೆಕ್ಟ್ರಾನಿಕ್ಸ್ ಡಿವೈಸ್ ಬ್ಲೂಟೂತ್ ಬಳಸಿ ನಕಲು ಮಾಡುತ್ತಿದ್ದಳು ಎಂದು ಆರೋಪಿಸಲಾಗಿದೆ.
ಆಕೆಯನ್ನು ಕ್ಯಾಂಪ್ ಪೊಲೀಸರು ಬಂಧಿಸಿ ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.
ಬೆಳಗಾವಿ ನಗರದ ಸರದಾರ್ ಕಾಲೇಜು ಪರೀಕ್ಷಾ ಕೇಂದ್ರದಲ್ಲಿ ಗೋಕಾಕ ತಾಲೂಕಿನ ವ್ಯಕ್ತಿ ಬ್ಲುಟೂತ್ ಬಳಸಿ ನಕಲು ಮಾಡುತ್ತಿದ್ದಾಗ ಸಿಕ್ಕಿಬಿದ್ದಿದ್ದಾನೆ. ಗೋಕಾಕ ತಾಲೂಕಿನ ಮಸಗುಪ್ಪಿ ಗ್ರಾಮದ ಲಕ್ಷ್ಮಣ ಅಸಿರೋಟಿ ಬಂಧಿತ. ಆತನ ವಿರುದ್ಧ ಖಡೇಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬ್ಲುಟೂತ್ ಬಳಸಿ ಪರೀಕ್ಷೆ ಬರೆಯುತ್ತಿದ್ದಾಗ ಆತ ಸಿಕ್ಕಿಬಿದ್ದಿದ್ದ. ಪರೀಕ್ಷೆ ಮುಗಿಯಲು ಕೆಲವೇ ನಿಮಿಷ ಬಾಕಿ ಇದ್ದಾಗ ಆರೋಪಿಗಳು ನಕಲು ಮಾಡುತ್ತಿರುವುದು ಪತ್ತೆಯಾಗಿದೆ.
ಅಡ್ವಾನ್ಸ್ಡ್ ಟೆಕ್ನಾಲಜಿ ಬಳಸಿ ನಕಲು ಮಾಡಿದ ಪರೀಕ್ಷಾರ್ಥಿ: ಬೆಳಗಾವಿಯಲ್ಲಿ ಬಂಧನ
ಪೊಲೀಸ್ ಕಾನ್ಸ್ಟೆಬಲ್ ಪರೀಕ್ಷೆ ನಕಲು ಪ್ರಕರಣ: ಭಾರಿ ಟೆಕ್ನಾಲಜಿ ಬಳಕೆ; ಮತ್ತೆ 12 ಜನರ ಬಂಧನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ