ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಗ್ರೀಸ್ಗೆ ಹನಿಮೂನ್ ಹೋಗಿಬಂದಿದ್ದ ಬೆಂಗಳೂರು ಟೆಕ್ಕಿಯಲ್ಲಿ ಕೊರೊನಾ ಸೋಂಕು ಪತ್ತೆಯಾಗಿತ್ತು. ಇದೀಗ ಅವರ ಪತ್ನಿಗೂ ಕೊರೋನಾ ದೃಢವಾಗಿದೆ. ಟೆಕ್ಕಿ ರಾಜೀವ್ಗಾಂಧಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇವರ ಪತ್ನಿ ಆಗ್ರಾದಲ್ಲಿ ಕುಟುಂಬದ ಜೊತೆ ವಾಸವಾಗಿದ್ದಾರೆ.
ಪತಿಗೆ ಕೊರೊನಾ ಲಕ್ಷಣ ಕಾಣಿಸುತ್ತಿದ್ದಂತೆ ಪತ್ನಿ ತವರಿಗೆ ಹೋಗಿದ್ದರು. ಸದ್ಯ ಈ ಮಹಿಳೆ 8 ಜನ ಕುಟುಂಬಸ್ಥರೊಂದಿಗೆ ವಾಸಿಸುತ್ತಿದ್ದಾರೆ.
ಆರೋಗ್ಯ ಇಲಾಖೆ ಅಧಿಕಾರಿಗಳು ಮನೆಗೆ ಬಂದಾಗ ಕುಟುಂಬದವರು ಐಸೋಲೇಷನ್ ವಾರ್ಡ್ಗೆ ಸೇರಿಸಲು ವಿರೋಧ ವ್ಯಕ್ತಪಡಿಸಿದ್ದರು. ಈಗ ಆಗ್ರಾ ಡಿಸಿ ಆದೇಶದಂತೆ ಕುಟುಂಬಸ್ಥರ ಸಮೇತ ಐಸೋಲೇಷನ್ ವಾರ್ಡ್ಗೆ ಶಿಫ್ಟ್ ಮಾಡಲಾಗಿದೆ. ಲ್ಯಾಬ್ ರಿಪೋರ್ಟ್ನಲ್ಲಿ ಪತ್ನಿಗೂ ಕೊರೊನಾ ವೈರಸ್ ಇರುವುದು ದೃಢ ಪಟ್ಟಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ