
ಪ್ರಗವಾಹಿನಿ ಸುದ್ದಿ, ಬೆಂಗಳೂರು – ಬೆಳಗಾವಿಯಲ್ಲಿ ಇಂದು 22 ಜನ ಸೇರಿದಂತೆ ರಾಜ್ಯದಲ್ಲಿ ಇಂದು ಒಟ್ಟೂ 53 ಜನರಿಗೆ ಕೊರೋನಾ ಸೋಂಕು ಪತ್ತೆಯಾಗಿದೆ.
ಇದರಿಂದಾಗಿ ಕರ್ನಾಟಕದಲ್ಲಿ ಸೋಂಕಿತರ ಸಂಖ್ಯೆ 847ಕ್ಕೇರಿದೆ.
ಉತ್ತರ ಕನ್ನಡದ ಭಟ್ಕಳದಲ್ಲಿ 7 ಜನರಿಗೆ ಸೋಂಕು ದೃಢಪಟ್ಟಿದೆ.
ಇದೇ ಮೊದಲ ಬಾರಿಗೆ ಶಿವಮೊಗ್ಗದಲ್ಲಿ ಕೊರೋನಾ ಸೋಂಕು ಪತ್ತೆಯಾಗಿದ್ದು, ಇಂದು ಒಂದೇ ದಿನ 8 ಜನರಿಗೆ ಸೋಂಕು ದೃಢಪಟ್ಟಿದೆ. ತಬ್ಲಿಗಿಗಳ ಆಗಮನ; ಹೆಚ್ಚಿದ ಕೊರೊನಾ ಭೀತಿ
ಬೆಳಗಾವಿ ಜಿಲ್ಲೆಯಲ್ಲಿ ಪತ್ತೆಯಾಗಿರುವ ಸೋಂಕಿತರೆಲ್ಲ ನಿಪ್ಪಾಣಿಯ ಮೊರಾರ್ಜಿ ದೇಸಾಯಿ ಶಾಲೆಯಲ್ಲಿ ಕ್ವಾರಂಟೈನ್ ನಲ್ಲಿದ್ದರು ಎಂದು ಗೊತ್ತಾಗಿದೆ.
ಇವರೆಲ್ಲ ರಾಜಸ್ತಾನದ ಅಜ್ಮಿರ್ ದರ್ಗಾಕ್ಕೆ ಹೋಗಿ ಬಂದವರು. ಇವರಲ್ಲಿ 14 ಮಹಿಳೆಯರಿದ್ದಾರೆ. ನಾಲ್ವರು ಬಾಲಕಿಯರು ಹಾಗೂ ನಾಲ್ವರು ಬಾಲಕರು ಸೇರಿದ್ದಾರೆ.
ಬೆಳಗಾವಿಯಲ್ಲಿ ಸೋಂಕಿತರ ಸಂಖ್ಯೆ 107ಕ್ಕೇರಿದೆ.
ಬೆಂಗಳೂರಿನಲ್ಲಿ 3, ಬಾಗಲಕೋಟೆಲ್ಲಿ 8 ಜನರಿಗೆ ಸೋಂಕು ಪತ್ತೆಯಾಗಿದೆ. ಕಲಬುರ್ಗಿಯಲ್ಲಿ 2, ಚಿಕ್ಕಬಳ್ಳಾಪುರದಲ್ಲಿ 1 ಸೋಂಕು ಪತ್ತೆಯಾಗಿದೆ.
ಸಂಬಂಧಿಸಿದ ಸುದ್ದಿಗಳು –
ಬೆಳಗಾವಿಯಲ್ಲಿ ಮತ್ತೆ ಆತಂಕ: ಇಂದು ಮತ್ತೊಂದು ಮಹಾಸ್ಫೋಟ ವದಂತಿ
ತಬ್ಲಿಗಿಗಳ ಆಗಮನ; ಹೆಚ್ಚಿದ ಕೊರೊನಾ ಭೀತಿ
ತಬ್ಲಿಘಿ ಸಮಾವೇಶದಿಂದಾಗಿ ದೇಶಾದ್ಯಂತ ಕೊರೋನಾ ವೇಗವಾಗಿ ಹರಡಿತು -ಮುಕ್ತಾರ್ ಅಬ್ಬಾಸ್ ನಖ್ವಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ