ಜಿಲ್ಲಾಸ್ಪತ್ರೆಯ ಯುವ ವೈದ್ಯೆ, ಎಕ್ಷರೆ ಟೆಕ್ನೇಷಿಯನ್ ನಲ್ಲಿ ಕೊರೋನಾ ಸೋಂಕು ಪತ್ತೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ : ಬೆಳಗಾವಿಯ ಜಿಲ್ಲಾಸ್ಪತ್ರೆಯ ಕೋವಿಡ್-19 ವಾರ್ಡಿನಲ್ಲಿ ಸೇವೆಸಲ್ಲಿಸಿದ್ದ ಓರ್ವ ಮಹಿಳಾ ವೈದ್ಯೆ ಹಾಗು ಎಕ್ಸರೇ ವಿಭಾಗದಲ್ಲಿ ಸೇವೆಸಲ್ಲಿಸುತ್ತಿರುವ ಓರ್ವರಲ್ಲಿ ಮಂಗಳವಾರ ಕೊರೋನಾ ಸೋಂಕು ದೃಢವಾಗಿದೆ.
25 ವರುಷದ ಮಹಿಳಾ ವೈದ್ಯರನ್ನು ಜೂನ್ 25 ರಿಂದ ಜೂನ್ 30 ರ ವರೆಗೆ ಕೊರೋನಾ ಸೋಂಕಿತರ ಕೋವಿಡ್ ವಾರ್ಡ್ ಗೆ ನಿಯೋಜಿಸಲಾಗಿತ್ತು. ಕೋವಿಡ್ ನಿಯಮದಂತೆ ಸೋಂಕಿತರ ವಾರ್ಡಿನಲ್ಲಿ ಒಂದು ವಾರ ಸೇವೆಸಲ್ಲಿಸುವ ಪ್ರತಿಯೊಬ್ಬರೂ ಖಡ್ಡಾಯವಾಗಿ ಹದಿನಾಲ್ಕು ದಿನ ಹೋಮ್ ಕ್ವಾರಂಟೈನೆಗೊಳಪಡಬೇಕು, ಅಂದರೆ ಸರಕಾರ ಹೊರಗಿನವರ ಸಂಪರ್ಕವಿರದಂತೆ ವಿಧಿಸುವ ಗೃಹ ಬಂಧನ.
ಆದರೆ, ಬೆಳಗಾವಿಯ ಆರೋಗ್ಯ ಇಲಾಖೆ, ಈ ಮಹಿಳಾ ವೈದ್ಯೆಯ ವಿಷಯದಲ್ಲಿ ನಿಯಮ ಪಾಲಿಸದೇ, ಅವರ ಕೋವಿಡ್ ವಾರ್ಡ್ ಡ್ಯೂಟಿ ಮುಗಿದ ಮರುದಿನವೇ ಅವರ ಹಿಂದಿನ ಕೆಲಸಕ್ಕೆ ಮರುನಿಯೋಜಿಸಿದೆ.
ಬೆಳಗಾವಿ ತಾಲೂಕಿನ ಮುತಗಾ ಗ್ರಾಮದ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಸೇವೆಸಲ್ಲಿಸುತ್ತಿರುವ ಆ ಮಹಿಳಾ ವೈದ್ಯರು ನಿನ್ನೆ ಸೋಮವಾರದವರೆಗೂ ಕೇಂದ್ರಕ್ಕೆ ಬಂದಿದ್ದ ನೂರಾರು ಜನರನ್ನು ಪರೀಕ್ಷಿಸಿದ್ದಾರೆ, ಅವರಲ್ಲಿ ಮೂವತ್ತಕ್ಕೂ ಹೆಚ್ಚು ಮಹಿಳೆಯರು ಗರ್ಭಿಣಿಯರಾಗಿದ್ದು ಆತಂಕಕ್ಕೆ ಆಸ್ಪದವಾಗಿದೆ.
ಆರೋಗ್ಯ ಇಲಾಖೆಯ ನಿರ್ಲಕ್ಷದಿಂದ ತಮ್ಮ ಪ್ರಾಣವನ್ನು ಪಣಕ್ಕಿಟ್ಟು ಸೇವೆಮಾಡಿದ ಈ ವೈದ್ಯರನ್ನು ಹಾಗು ಎಕ್ಸರೇ ಟೆಕ್ನೇಷ್ಯನ್ ಅವರನ್ನು ಕೋವಿಡ್ ವಾರ್ಡಿಗೆ ಉಪಚಾರಕ್ಕಾಗಿ ಸೇರಿಸಲಾಗಿದೆ.
ಕಳೆದ ವಾರ ಕೋವಿಡ್ ವಾರ್ಡ್ ನಲ್ಲಿ ಸೇವೆಸಲ್ಲಿಸಿದ್ದ ಮಹಿಳಾ ನರ್ಸ ಒಬ್ಬರಲ್ಲಿ ಹಾಗು ಶಂಕಿತ ಸೋಂಕಿತರ ಗಂಟಲಿನ ದ್ರವ, ರಕ್ತ ಪರೀಕ್ಷಿಸುವ ಲ್ಯಾಬೋರೇಟರಿಯ ಸಿಬಂದ್ಧಿಯೊಬ್ಬರಲ್ಲಿ ಸೋಂಕು ಕಂಡು ಬಂದಿದ್ದನ್ನು ಇಲ್ಲಿ ಸ್ಮರಿಸಿಕೊಳ್ಳಬಹುದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ