Kannada NewsKarnataka NewsLatest

ಎಸ್ಎಸ್ಎಲ್ ಸಿ ವಿದ್ಯಾರ್ಥಿ ಸೇರಿ ರಾಜ್ಯದಲ್ಲಿ ಇಂದು 416 ಜನರಿಗೆ ಸೋಂಕು

ಪ್ರಗತಿವಾಹಿನಿ ಸುದ್ದಿ, ಚನ್ನಮ್ಮನ ಕಿತ್ತೂರು ; ಎಸ್‌ಎಸ್ ಎಲ್ ಸಿ ಪರೀಕ್ಷೆ ಬರೆಯಬೇಕಿದ್ದ ತಾಲೂಕಿನ ಕಲಭಾವಿ ಗ್ರಾಮದ ೧೬ ವರ್ಷದ ಯುವಕನೋರ್ವನಿಗೆ ಕೊರೊನಾ ಸೊಂಕು ದೃಢ ಪಟ್ಟ ಪರಿಣಾಮ ಚನ್ನಮ್ಮನ ಕಿತ್ತೂರು ತಾಲೂಕು ಕೊರೊನಾ ಸೊಂಕಿತರ ಖಾತೆ ತೆರೆದಿದೆ.

ಕೊರೊನಾ ಹಾವಳಿ ದೇಶದಲ್ಲಿ ಎಗ್ಗಿಲ್ಲದೆ ಸಾಗುತ್ತಿದ್ದರೂ ಇನ್ನೂವರೆಗೂ ಕಿತ್ತೂರು ತಾಲೂಕಿನಲ್ಲಿ ಕೊರೊನಾ ಕಂಡು ಬಂದಿರಲಿಲ್ಲ. ಆದರೆ ಈಗ ತಾಲೂಕಿನ ಕಲಭಾಂವಿ ಗ್ರಾಮದಲ್ಲಿ ಕಂಡು ಬಂದಿದ್ದು ತಾಲೂಕಿನ ಜನತೆಯ ನಿದ್ದೆಗೆಡೆಸಿದೆ.

ಈ ಹಿಂದೆ ಚೆನೈಗೆ ಪ್ರಯಾಣಿಸಿದ್ದ ಈ ಯುವಕ ಜೂನ್ ೧ ಕ್ಕೆ ತಾಲೂಕಿನ ಕಲಭಾಂವಿ ಗ್ರಾಮಕ್ಕೆ ಆಗಮಿಸಿದ್ದ ಎಂಬ ಮಾಹಿತಿ ದೊರೆತಿದೆ. ಅಲ್ಲದೆ ಈ ಕುರಿತು ತಾಲೂಕಾಡಳಿತಕ್ಕೂ ಮಾಹಿತಿ ದೊರೆತಿದ್ದು ಅಧಿಕಾರಿಗಳು ವಿಚಾರಣೆ ನಡೆಸಿ ಯುವಕನನ್ನು ಹೊಂ ಕ್ವಾರಂಟೈನ್ ನಲ್ಲಿ ಇರಿಸಿದ್ದರು. ನಂತರ ಅಧಿಕಾರಿಗಳು ಜೂನ್ ೧೬ ಕ್ಕೆ ಈ ಯುವಕನ ಗಂಟಲು ದ್ರವ ಪರೀಕ್ಷೆಗೆ ಕಳುಹಿಸಿದ್ದರು. ಆಗ ಕೊರೊನಾ ಸೊಂಕು ದೃಢವಾಗಿದೆ. ಪರಿಣಾಮ ಎಚ್ಚೆತ್ತ ತಾಲೂಕಾಡಳಿತ ಕೂಡಲೇ ಕಲಭಾಂವಿ ಗ್ರಾಮದ ಯುವಕನನ್ನು ತುರ್ತು ಚಿಕಿತ್ಸಾ ವಾಹನದಲ್ಲಿ ಬೆಳಗಾವಿಯ ಬೀಮ್ಸ ಆಸ್ಪತ್ರೆಗೆ ರವಾನಿಸಿದ್ದಾರೆ. ಜೊತೆಗೆ ಮನೆಯ ಸುತ್ತಲೂ ೧೦೦ ಮೀ ಸೀಲ್ ಡೌನ್ ಮಾಡಿದ್ದಾರೆ. ಅಲ್ಲದೆ ಪ್ರಾಥಮಿಕ ಸಂಪರ್ಕದಲ್ಲಿ ಒಟ್ಟು ೫ ಜನರಿದ್ದು ಅವರ ಮೇಲೆಯೂ ಹಾಗೂ ದ್ವಿತೀಯ ಸಂಪರ್ಕದ್ದ ೧೦ ಜನರ ಮೇಲೆಯೂ ತಾಲೂಕಾಡಳಿತ ನಿಗಾ ವಹಿಸಿದೆ.

ರಾಜ್ಯದಲ್ಲಿ ಇಂದು ಒಟ್ಟೂ 416 ಜನರಿಗೆ ಕೊರೋನಾ ಸೋಂಕು ತಗುಲಿದೆ. ಇದರಿಂದಾಗಿ ಒಟ್ಟೂ 8697 ಜನರಿಗೆ ಸೋಂಕು ತಗುಲಿದಂತಾಗಿದೆ. ಒಟ್ಟೂ 9 ಜನರು ಇಂದು ಮೃತಪಟ್ಟಿದ್ದಾರೆ.

Corona Fear : SSLC Student Returns from Chennai Rushed for COVID Test

SSLC Student from Belagavi, 415 Others Tested C-19 Infected in the State on Saturday 

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button