
ಪ್ರಗತಿವಾಹಿನಿ ಸುದ್ದಿ, ಬೆಂಗಳೂರು – ರಾಜ್ಯದಲ್ಲಿ ಶನಿವಾರ ಒಟ್ಟೂ 378 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದೆ.
ಉಡುಪಿಯಲ್ಲಿ 121, ಯಾದಗಿರಿಯಲ್ಲಿ 103, ಕಲಬುರಗಿಯಲ್ಲಿ 69, ದಕ್ಷಿಣಕನ್ನಡದಲ್ಲಿ 24, ಬೆಂಗಳೂರು ನಗರದಲ್ಲಿ 18, ಬೆಳಗಾವಿಯಲ್ಲಿ 5 ಜನರಿಗೆ ಸೋಂಕು ಪತ್ತೆಯಾಗಿದೆ.
ರಾಜ್ಯದಲ್ಲಿ ಒಟ್ಟೂ ಸೋಂಕಿತರ ಸಂಖ್ಯೆ 5213ಕ್ಕೆ ಏರಿಕೆಯಾಗಿದೆ. ಇಂದು 280 ಜನರು ಆಸ್ಪತ್ರೆಯಿಂದ ಬಿಡುಗಡೆಹೊಂದಿದ್ದು, ಈವರೆಗೆ 1968 ಜನರು ಬಿಡುಗಡೆಯಾಗಿದ್ದಾರೆ. ಒಟ್ಟೂ 59 ಜನರು ಸಾವಿಗೀಡಾಗಿದ್ದಾರೆ.